ಪಬ್ಲಿಕ್ ಪ್ಲೇಸ್‌ನಲ್ಲಿ ಪೇಚಿಗೆ ಸಿಲುಕಿಸುವ ವರ್ತನೆಗಳು, ನಿಮ್ಗೂ ಹೀಗೇ ಆಗಿರ್ಬೋದು!
ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾರ್ವಜನಿಕವಾಗಿ ಮುಜುಗರವನ್ನು ಅನುಭವಿಸುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಇವು ಸಾಮಾನ್ಯ ಸನ್ನಿವೇಶಗಳಾಗಿವೆ. ಗುಂಪಿನಲ್ಲಿ ನಮ್ಮನ್ನು ನಿರ್ಲಕ್ಷಿಸುವುದರಿಂದ ಹಿಡಿದು ವಿಚಿತ್ರವಾದ ಮೌನ ಎಲ್ಲರಿಗೂ ಆಕ್ವರ್ಡ್ ಮೊಮೆಂಟ್ ಆಗಿದೆ. ಅಂಥಾ ಕೆಲವು ಘಟನೆಗಳ ಮಾಹಿತಿ ಇಲ್ಲಿದೆ.

ಸಾರ್ವಜನಿಕ ಪ್ರದೇಶದಲ್ಲಿದ್ದಾಗ ನಿರಂತರ ಕೆಮ್ಮು
ಕೆಮ್ಮು ಬರುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಸಾರ್ವಜನಿಕ ಪ್ರದೇಶದಲ್ಲಿದ್ದಾಗ ಹೀಗೆ ನಿರಂತರವಾಗಿ ಕೆಮ್ಮು ಕಾಣಿಸಿಕೊಂಡಾಗ ಮುಜುಗರ ಅನುಭವಿಸಬೇಕಾಗಿ ಬರುತ್ತದೆ. ಎಲ್ಲರೂ ನಮ್ಮನ್ನೇ ನೋಡಲು ಆರಂಭಿಸುವ ಕಾರಣ ಹೆಚ್ಚು ಅನ್‌ಕಂಫರ್ಟೆಬಲ್ ಆಗುತ್ತದೆ. ಅದರಲ್ಲೂ ಕೋವಿಡ್ ನಂತರ ವ್ಯಕ್ತಿಯೊಬ್ಬ ಕೆಮ್ಮಿದರೆ ಎಲ್ಲರೂ ಆತನನ್ನು ವಿಚಿತ್ರವಾಗಿ ಕಾಣುತ್ತಾರೆ. ಹೀಗಿರುವಾಗ ಕೆಮ್ಮು ನಿಲ್ಲದಿದ್ದರೆ ಇನ್ನಷ್ಟು ತೊಂದರೆಯಾಗುತ್ತದೆ.
ಮತ್ತೊಬ್ಬರಿಗೆ ಹಾಯ್ ಎಂದಾಗ ನಾವು ಕೈ ಬೀಸುವುದು
ಇಂಥಾ ಮುಜುಗರದ ಸಂದರ್ಭವನ್ನು ಸಾಮಾನ್ಯವಾಗಿ ಎಲ್ಲರೂ ಎದುರಿಸಿರುತ್ತಾರೆ. ಯಾರೋ ನಮ್ಮ ಪಕ್ಕದಲ್ಲಿರುವವರಿಗೆ ಹಾಯ್ ಹೇಳಿದಾಗ, ನಾವೇ ಎಂದು ತಿಳಿದು ಕೈ ಬೀಸುವುದು. ನಂತರ ಹಾಯ್ ಮಾಡಿದ್ದು ನಮಗಲ್ಲ ಎಂದು ತಿಳಿದು ಪೇಚಾಡಿಕೊಳ್ಳುವುದು ಸಾಮಾನ್ಯ. ಹೀಗಾದಾಗ ಯಾಕಾದರೂ ಹಾಯ್ ಮಾಡಿದೆವೋ ಎಂದು ಕೈ ಕೈ ಹಿಸುಕಿಕೊಳ್ಳಬೇಕಾಗುತ್ತದೆ.
ಹೊಟ್ಟೆಯೊಳಗಿನ ಸೌಂಡ್
ಹೆಚ್ಚು ಹಸಿವಾದಾಗ ಅಥವಾ ಹೆಚ್ಚು ಊಟ ಮಾಡಿದಾಗ ಹೊಟ್ಟೆಯೊಳಗಿಂದ ಸೌಂಡ್ ಬರೋದು ಸಾಮಾನ್ಯ. ಆದರೆ ಸಾರ್ವಜನಿಕ ಪ್ರದೇಶದಲ್ಲಿದ್ದಾಗ ಹೀಗೆ ಹೊಟ್ಟೆಯೊಳಗಿಂದ ಸೌಂಡ್ ಬಂದರೆ ಹೆಚ್ಚು ಮುಜುಗರವಾಗುತ್ತದೆ. ಏನು ಮಾಡಿದರೂ ಈ ಸೌಂಡ್‌ನ್ನು ನಿಲ್ಲಿಸಲು ಸಹ ಆಗುವುದಿಲ್ಲ. ಹೀಗಿದ್ದಾಗ ಹೊಟ್ಟೆಯೊಳಗಿನಿಂದ ಗುಳುಗುಳು ಸೌಂಡ್ ಕಿರಿಕಿರಿಯನ್ನುಂಟು ಮಾಡುತ್ತದೆ.
ಟಿವಿಯಲ್ಲಿ ಅಶ್ಲೀಲ ದೃಶ್ಯ ಪ್ರಸಾರ
ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಗುವ ಸನ್ನಿವೇಶ. ಎಲ್ಲರೂ ಸಾಮಾನ್ಯವಾಗಿ ಕುಳಿತು ಟಿವಿ ನೋಡ್ತಾ ಟೀ ಕುಡಿಯುತ್ತಾ, ಊಟ ಮಾಡುತ್ತಾ ಇರುತ್ತಾರೆ. ಇಂಥಾ ಸಂದರ್ಭದಲ್ಲಿ ದಿಢೀರ್ ಎಂದು ಟಿವಿಯಲ್ಲಿ ರೋಮ್ಯಾಂಟಿಕ್ ಸಾಂಗ್ ಅಥವಾ ದೃಶ್ಯ ಪ್ರಸಾರವಾಗಿ ಬಿಡುತ್ತದೆ. ಇದು ಒಮ್ಮೆಗೇ ಎಲ್ಲರಲ್ಲೂ ಮುಜುಗರವನ್ನುಂಟು ಮಾಡುತ್ತದೆ. ಟಿವಿಯನ್ನು ದಿಟ್ಟಿಸಿ ನೋಡಲೂ ಆಗದು, ಎದ್ದು ಹೋಗಲೂ ಆಗದು ಅನ್ನೋ ಪರಿಸ್ಥಿತಿ.
ಪ್ಯಾಂಟ್ ಜಿಪ್ ಹಾಕದೇ ಇರುವುದು
ತುಂಬಾ ಮಂದಿ ಗಡಿಬಿಡಿಯಲ್ಲಿ ಪ್ಯಾಂಟ್ ಜಿಪ್ ಹಾಕುವುದನ್ನು ಮರೆತುಬಿಡುತ್ತಾರೆ. ಅಥವಾ ಜೀನ್ಸ್ ಕೆಲವೊಮ್ಮೆ ತುಂಬಾ ಟೈಟ್ ಆಗಿದ್ದರೂ ಜಿಪ್ ತನ್ನಿಂದ ತಾನೇ ಓಪನ್ ಆಗಿಬಿಡುತ್ತದೆ. ಹೀಗಾದಾಗ ಕೆಲವೊಮ್ಮೆ ಮತ್ತೊಬ್ಬರು ಈ ಬಗ್ಗೆ ನಮಗೆ ಹೇಳುವಂತೆ ಆಗುತ್ತದೆ. ಇದು ಸಾರ್ವಜನಿಕವಾಗಿ ತುಂಬಾ ಆಕ್ವರ್ಡ್ ಅನಿಸುವ ಕ್ಷಣವಾಗಿದೆ.
ಶೂ ಅಥವಾ ಹೈ ಹೀಲ್ಸ್ ಸದ್ದು
ನಡೆಯುವಾಗ ಶೂ ಅಥವಾ ಚಪ್ಪಲಿಯ ಸದ್ದು ಹಲವು ಬಾರಿ ಇರಿಟೇಟ್ ಮಾಡುತ್ತದೆ. ಶೂ ಹೊಸದಾಗಿದ್ದರೆ ಕೆಲವೊಮ್ಮೆ ನಡೆಯುವಾಗ ಸದ್ದು ಕೇಳುತ್ತದೆ. ಅಥವಾ ಹೀಲ್ಸ್ ಚಪ್ಪಲಿಗಳು ಸಹ ಟಕಟಕ ಸದ್ದನ್ನು ಹೊರಡಿಸುತ್ತವೆ. ನಿಶ್ಯಬ್ದವಾಗಿರುವ ಸ್ಥಳದಲ್ಲಿ ನೀವು ವಾಕ್ ಮಾಡುತ್ತಿದ್ದರೆ ಈ ಸೌಂಡ್ ಎಲ್ಲರ ಗಮನ ನಿಮ್ಮತ್ತ ಬಂದು ಮುಜುಗರಕ್ಕೀಡು ಮಾಡುತ್ತದೆ.
ಮೊಬೈಲ್ ವಾಲ್ಯೂಮ್
ಮನೆಯಲ್ಲಿದ್ದಾಗ ಮೊಬೈಲ್ ರಿಂಗಿಂಗ್ ಡಿಸ್ಟರ್ಬ್ ಎನಿಸುವುದಿಲ್ಲ. ಆದರೆ ಆಫೀಸಲ್ಲಿದ್ದಾಗ ರಿಂಗ್‌ಟೋನ್ ಮೀಡಿಯಂ ಇದ್ದರೆ ಸಾಕಾಗುತ್ತದೆ. ಇಲ್ಲದಿದ್ದರೆ ದಿಢೀರ್ ಹೈ ವಾಲ್ಯೂಮ್‌ನಲ್ಲಿ ಮೊಬೈಲ್ ರಿಂಗ್ ಆಗಿ ಎಲ್ಲರಿಗೂ ಡಿಸ್ಟರ್ಬ್ ಆಗುವಂತೆ ಮಾಡುತ್ತದೆ. ಇನ್ನು ಕೆಲವೊಮ್ಮೆ ಆಫೀಸಿನಲ್ಲಿ ವಾಟ್ಸಾಪ್ ಸ್ಟೇಟಸ್ ಅಥವಾ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಿದಾಗಲೂ ದಿಢೀರ್ ಹೈ ವಾಲ್ಯೂಮ್‌ನಲ್ಲಿ ಸಾಂಗ್ ಪ್ಲೇ ಆಗುವುದು ಮುಜುಗರಕ್ಕೆ ಕಾರಣವಾಗುತ್ತದೆ.