ನೋವಿನಿಂದ ಕೂಡಿದ ಸೆಕ್ಸ್, ಮಲಬದ್ಧತೆ ಇವೆಲ್ಲಾ ಗರ್ಭಾಶಯ ಹೊರ ಬರೋದಕ್ಕೆ ಕಾರಣ!
ಗರ್ಭಾಶಯದ ಪ್ರೊಟ್ರುಷನ್ ಅಥವಾ ಪ್ರೊಲ್ಯಾಪ್ಡ್ ಗರ್ಭಾಶಯಕ್ಕೆ ಅನೇಕ ಕಾರಣಗಳನ್ನು ಹೊಂದಿರಬಹುದು. ಈ ಸಮಸ್ಯೆಯ ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ಅದಕ್ಕೆ ಚಿಕಿತ್ಸೆ ನೀಡುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ ಗರ್ಭಾಶಯವು ಹೊರಗೆ ಬರುತ್ತಿದೆಯೇ ಎನ್ನುವುದನ್ನು ಪರೀಕ್ಷಿಸೋದು ಮುಖ್ಯ.
ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿವೆ. ಕೆಲವೊಮ್ಮೆ ಋತುಬಂಧಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಸಮಸ್ಯೆಯಾಗಬಹುದು. ಇದು ಗರ್ಭಾಶಯ ಅಥವಾ ಯುಟೆರಸ್ (uterus) ಮೇಲೂ ಪರಿಣಾಮ ಬೀರಬಹುದು. ಗರ್ಭಾಶಯದ ಮೇಲೆ ಪರಿಣಾಮ ಬೀರಿದಾಗ, ಮಹಿಳೆಯರ ದೈನಂದಿನ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಅವರು ಸಾಮಾನ್ಯ ಕೆಲಸವನ್ನು ಮಾಡಲು ಸಹ ಕಷ್ಟಪಡುತ್ತಾರೆ. ಅಂತಹ ಒಂದು ಸಮಸ್ಯೆಯೆಂದರೆ ಗರ್ಭಾಶಯದ ಚಲನೆ. ಇದನ್ನು ಪ್ರೊಲ್ಯಾಪ್ಸ್ಡ್ ಗರ್ಭಾಶಯ (prolapsed uterus) ಎಂದು ಕರೆಯಲಾಗುತ್ತದೆ. ಪ್ರೊಲ್ಯಾಪ್ಸ್ ಯೂಟರಸ್ ಎಂದರೇನು ಅನ್ನೋದನ್ನು ತಿಳಿಯೋಣ.
ಗರ್ಭಾಶಯ ಹೊರ ಬರೋದು ಅಥವಾ ಪ್ರೊಲ್ಯಾಪ್ಡ್ ಯೂಟರಸ್ ಅಂದ್ರೇನು?
ಗರ್ಭಾಶಯ (Womb) ಸ್ತ್ರೀ ಸಂತಾನೋತ್ಪತ್ತಿ ಅಂಗವಾಗಿದೆ. ಇದರ ಆಕಾರವು ತಲೆಕೆಳಗಾದ ಪೇರಳೆ ಹಣ್ಣಿನಂತಿದೆ. ಇದು ಸೊಂಟದ ಒಳಗೆ ಇದೆ. ಗರ್ಭಾಶಯ, ಮೂತ್ರಕೋಶ ಮತ್ತು ಕರುಳನ್ನು ಟೇಲ್ ಬೋನ್ (coccyx) ಮತ್ತು ಸೊಂಟದೊಳಗಿನ ಪ್ಯೂಬಿಕ್ ಬೋನ್ ನಡುವೆ ಇರುವ ಸ್ನಾಯುಗಳಿಂದ ಬೆಂಬಲಿಸಲ್ಪಡುತ್ತವೆ.
ಈ ಸ್ನಾಯುಗಳನ್ನು ಪೆಲ್ವಿಕ್ ಫ್ಲೋರ್ ಅಥವಾ ಲೆವೇಟರ್ ಸ್ನಾಯುಗಳು ಎಂದು ಕರೆಯಲಾಗುತ್ತದೆ. ಅಸ್ಥಿರಜ್ಜುಗಳು ಮತ್ತು ಕನೆಕ್ಟಿವ್ ಟಿಶ್ಯೂ (Ligaments and connective tissue) ಗರ್ಭಾಶಯ ಮತ್ತು ಪೆಲ್ವಿಕ್ ಅಂಗಗಳನ್ನು ಸ್ಥಳದಲ್ಲಿರಿಸುತ್ತವೆ. ಈ ಸ್ನಾಯುಗಳು ಅಥವಾ ಸಂಪರ್ಕ ಅಂಗಾಂಶಗಳು ದುರ್ಬಲಗೊಂಡರೆ ಅಥವಾ ಹಾನಿಗೊಳಗಾದರೆ, ಗರ್ಭಾಶಯ ಯೋನಿಯಿಂದ ಹೊರಕ್ಕೆ ಬರಬಹುದು. ಇದನ್ನು ಪ್ರೊಲ್ಯಾಪ್ಸ್ ಎಂದು ಕರೆಯಲಾಗುತ್ತದೆ.
ಪ್ರೊಲ್ಯಾಪ್ಸ್ ಗರ್ಭಾಶಯದ ಕಾರಣಗಳು
ಗರ್ಭಾಶಯದ ಪ್ರೊಟ್ರುಷನ್ ಅಥವಾ ಪ್ರೊಲ್ಯಾಪ್ಡ್ ಯುಟರಸ್ ಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುವು ಹೆರಿಗೆ (Delivery), ಬೊಜ್ಜು (Obesity), ದೀರ್ಘಕಾಲದ ಬ್ರಾಂಕೈಟಿಸ್ ಅಥವಾ ಅಸ್ತಮಾದಂತಹ ಪರಿಸ್ಥಿತಿಗಳು, ಇದಲ್ಲದೇ ತೀವ್ರ ಕೆಮ್ಮು (Cough), ಮಲಬದ್ಧತೆ (Constipation) ಸಮಸ್ಯೆಗಳು, ನೋವಿನಿಂದ ಕೂಡಿದ ಸೆಕ್ಸ್ (Painful Intercourse), ಅಪರೂಪದ ಸಂದರ್ಭಗಳಲ್ಲಿ ಪೆಲ್ವಿಕ್ ಗೆಡ್ಡೆಗಳಿಂದ ಉಂಟಾಗಬಹುದು. ಮತ್ತು ಋತುಬಂಧದ ನಂತರ ಹಾರ್ಮೋನುಗಳ ಬದಲಾವಣೆಗಳು(harmonal changes) ಇವು ಪೆಲ್ವಿಕ್ ಅಂಗವನ್ನು ಬೆಂಬಲಿಸುವ ರಚನೆಗಳನ್ನು ಹಾನಿಗೊಳಿಸಬಹುದು. ಇದರಿಂದಾಗಿ ಪೆಲ್ವಿಕ್ ಫ್ಲೋರ್ ಮತ್ತು ಕನೆಕ್ಟಿವ್ ಅಂಗಾಂಶವು ಅನೇಕ ರೀತಿಯಲ್ಲಿ ದುರ್ಬಲವಾಗಬಹುದು ಅಥವಾ ಹಾನಿಗೊಳಗಾಗಬಹುದು.
ಇನ್ನು ಗರ್ಭಾಶಯ ಹೊರಗೆ ಬರೋದಕ್ಕೆ ಬೇರೆ ಕಾರಣಗಳೂ ಇವೆ. ಅದೆಂದರೆ ಗರ್ಭಧಾರಣೆ, ವಿಶೇಷವಾಗಿ ಅವಳಿ ಅಥವಾ ಮೂರು ಮಕ್ಕಳನ್ನು ಒಟ್ಟಿಗೆ ಹೊಂದುವುದರಿಂದ ಸಹ ಗರ್ಭಾಶಯ ಹೊರ ಬರುತ್ತೆ. ಜೊತೆಗೆ ಯೋನಿ ಹೆರಿಗೆ, ವಿಶೇಷವಾಗಿ ಮಗು ದೊಡ್ಡದಾಗಿದ್ದರೆ ಅಥವಾ ಆರಂಭಿಕ ಹೆರಿಗೆಗಳಾಗಿದ್ದರೆ ಸಹ ಇದು ಸಂಭವಿಸುತ್ತದೆ. .
ಪ್ರೊಲ್ಯಾಪ್ಡ್ ಗರ್ಭಾಶಯದ ರೋಗಲಕ್ಷಣಗಳು
• ಯೋನಿಯಲ್ಲಿ ಭಾರ ಮತ್ತು ಒತ್ತಡದ ಸಂವೇದನೆ
• ಯೋನಿಯೊಳಗೆ ಒಂದು ಉಂಡೆ ಅಥವಾ ಉಬ್ಬು
• ಯೋನಿ ಉಬ್ಬುವಿಕೆಯ ಊತ
• ನೋವಿನ ಲೈಂಗಿಕತೆ
ಚಿಕಿತ್ಸೆ ಏನು?
ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು
ವಜೈನಾ ಪೆಸ್ಸರಿ (vaginal pessary)
ಯೋನಿ ಶಸ್ತ್ರಚಿಕಿತ್ಸೆ
ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು ಮತ್ತು ಯೋನಿ ಶಸ್ತ್ರಚಿಕಿತ್ಸೆ ಹೆಚ್ಚು ಪರಿಣಾಮಕಾರಿ.
ಪೆಲ್ವಿಕ್ ಫ್ಲೋರ್ ಸ್ನಾಯುಗಳ ವ್ಯಾಯಾಮಗಳು
ವಿಶೇಷವಾಗಿ ಪೆಲ್ವಿಕ್ ಫ್ಲೋರ್ ಸ್ನಾಯುಗಳಿಗೆ (pelvic floor exercise) ವ್ಯಾಯಾಮ ಮಾಡುವುದರಿಂದ ಗರ್ಭಾಶಯದ ಪ್ರೊಲ್ಯಾಪ್ಸ್ ಗೆ ಸಹಾಯ ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸಲು ಅವುಗಳನ್ನು ಸರಿಯಾಗಿ ಮಾಡುವುದು ಅವಶ್ಯಕ. ಇದನ್ನು ದೀರ್ಘಕಾಲದವರೆಗೆ ಅಭ್ಯಾಸ ಮಾಡಬೇಕು. ಗರ್ಭಾಶಯದ ಪ್ರೊಲ್ಯಾಪ್ಸ್ ಸಂದರ್ಭದಲ್ಲಿ ಪೆಲ್ವಿಕ್ ಫ್ಲೋರ್ ವ್ಯಾಯಾಮಗಳನ್ನು ಮಾಡುವ ಮೊದಲು ಫಿಸಿಯೋಥೆರಪಿಸ್ಟ್ ಸಹಾಯವನ್ನು ಪಡೆಯುವುದು ಮುಖ್ಯ.
ಯೋನಿ ಶಸ್ತ್ರಚಿಕಿತ್ಸೆ
ತೀವ್ರವಾದ ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆಯ ಮೂಲಕ ಪ್ರೊಲ್ಯಾಪ್ಸ್ ಅನ್ನು ಸರಿಪಡಿಸಬೇಕಾಗಬಹುದು. ಯೋನಿ ಶಸ್ತ್ರಚಿಕಿತ್ಸೆ ಎಂದರೆ ಯೋನಿಯ ಮೂಲಕ ಗರ್ಭಾಶಯವನ್ನು ತೆಗೆದು ಹಾಕುವುದು. ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ (Laproscopic Surgery), ಯಂತ್ರಗಳನ್ನು ಹೊಕ್ಕುಳಿನ ಮೂಲಕ ಸೇರಿಸಬಹುದು. ಕಿಬ್ಬೊಟ್ಟೆ ಸೀಳುವ ಮೂಲಕವೂ ಶಸ್ತ್ರಚಿಕಿತ್ಸೆ ಮಾಡಬಹುದು.
ಸ್ಥೂಲಕಾಯತೆ, ಕೆಮ್ಮು ಅಥವಾ ಒತ್ತಡದಂತಹ ಪ್ರೊಲ್ಯಾಪ್ಸ್ ನ ಮೂಲ ಕಾರಣವನ್ನು ಪರಿಹರಿಸದಿದ್ದರೆ, ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಪ್ರೊಲ್ಯಾಪ್ಸ್ ಪುನರಾವರ್ತನೆಯಾಗಬಹುದು.
ಗರ್ಭಾಶಯ ಹೊರ ಬಾರದಂತೆ ತಡೆಯುವ ವಿಧಾನಗಳು ಯಾವುವು?
• ಮಲಬದ್ಧತೆ (constipation) ನಿವಾರಿಸಲು ಪ್ರಯತ್ನಿಸಿ
• ಸೊಂಟ ಅಥವಾ ಬೆನ್ನಿನ ಬದಲು ಕಾಲುಗಳನ್ನು ಬಳಸಿ ಭಾರವಾದ ವಸ್ತುಗಳನ್ನು ಹೇಗೆ ಎತ್ತುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
• ತೂಕ ಹೆಚ್ಚಳವನ್ನು ನಿಯಂತ್ರಿಸಿ
• ಪೆಲ್ವಿಕ್ ಫ್ಲೋರ್ ಮಸಲ್ ವ್ಯಾಯಾಮಗಳನ್ನು ಮಾಡಿ