ದೃಷ್ಟಿ ಸಮಸ್ಯೆ ದೂರ ಮಾಡಲು ಪ್ರತಿಯೊಬ್ಬರು ಪಾಲಿಸಲೇಬೇಕಾದ ವಿಧಾನಗಳಿವು...

First Published Feb 9, 2021, 2:50 PM IST

 ದೃಷ್ಟಿ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಅತಿ ಮುಖ್ಯವಾದ ಅಂಶವೆಂದರೆ ಕಣ್ಣಿನ ಆರೈಕೆಯನ್ನು ಕಡೆಗಣಿಸುವುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವೃತ್ತಿಪರರ ಸಹಾಯವಿಲ್ಲದೆ ದೃಷ್ಟಿ ದೋಷವನ್ನು ಸರಿಪಡಿಸಲು ಯಾವುದೇ ಪವಾಡ ಪರಿಹಾರವಿಲ್ಲ ಮತ್ತು ಕಣ್ಣಿನ ದೃಷ್ಟಿಯ ಸಮಸ್ಯೆಗಳಿಗೆ ತ್ವರಿತ ಪರಿಹಾರವಿಲ್ಲ. ಆದರೆ ದೀರ್ಘಾವಧಿಯಲ್ಲಿ  ಕಣ್ಣಿನ ದೃಷ್ಟಿ ನೈಸರ್ಗಿಕವಾಗಿ ಸರಿ ಪಡಿಸಲು ಕೆಲವು ಸಾಧನಗಳಿವೆ.