ಪೂರಿ,ಬೂಂದಿ, ಪಕೋಡ ಕರಿದ ಎಣ್ಣೆ ವೇಸ್ಟ್ ಅಲ್ಲ, ಮರುಬಳಕೆ ಮಾಡುವುದು ಹೇಗೆ, ಇಲ್ಲಿವೆ ಸಿಂಪಲ್ ಟಿಪ್ಸ್!
ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದು ಹೇಗೆ: ಉಳಿದ ಅಡುಗೆ ಎಣ್ಣೆಯನ್ನು ಎಸೆಯುವ ಬದಲು, ಕೀಟಗಳನ್ನು ಓಡಿಸುವುದು, ಕಬ್ಬಿಣದ ವಸ್ತುಗಳನ್ನು ಪಾಲಿಶ್ ಮಾಡುವುದು ಮತ್ತು ಸಸ್ಯಗಳನ್ನು ನೋಡಿಕೊಳ್ಳುವುದು ಮುಂತಾದ ಮನೆಕೆಲಸಗಳಲ್ಲಿ ಹೇಗೆ ಬಳಸಬಹುದು. ಉಳಿದ ಎಣ್ಣೆಯ ವಿಶಿಷ್ಟ ಉಪಯೋಗಗಳನ್ನು ಇಲ್ಲಿ ತಿಳಿಯಿರಿ.

ಅಡುಗೆ ಎಣ್ಣೆ ಮರುಬಳಕೆ ಮಾಡುವುಉದ ಆರೋಗ್ಯಕ್ಕೆ ಅಪಾಯ: ಎಣ್ಣೆಯಲ್ಲಿ ಕರಿದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಹಬ್ಬ ಹರಿದಿನಗಳಲ್ಲಿ ಪೂರಿ, ಬೂಂದಿ, ಪಕೋಡ ಇತ್ಯಾದಿ ಮಾಡ್ತಾರೆ. ಆಗ ಉಳಿದ ಎಣ್ಣೆಯನ್ನು ಮತ್ತೆ ಬಳಸದೆ ಎಸೆಯುತ್ತಾರೆ. ಪದೇ ಪದೇ ಬಳಸಿದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಈ ಎಣ್ಣೆಯನ್ನು ಅಡುಗೆಗೆ ಮಾತ್ರವಲ್ಲದೆ ಬೇರೆ ರೀತಿಯಲ್ಲೂ ಬಳಸಬಹುದು ಅಂತ ನಿಮಗೆ ಗೊತ್ತಾ? ನೋಡೋಣ ಬನ್ನಿ....
ಉಳಿದ ಎಣ್ಣೆಯನ್ನು ಹೇಗೆ ಬಳಸುವುದು? (How to use leftover oil after frying)
ಪೂರಿ, ಪಕೋಡ ಮಾಡಿದ ಮೇಲೆ ಎಣ್ಣೆಯ ತಳಭಾಗ ಗಲೀಜಾಗುತ್ತದೆ. ಅಂದರೆ, ಉಳಿದ ಕಣಗಳು ಎಣ್ಣೆಯ ತಳದಲ್ಲಿ ಸಂಗ್ರಹವಾಗುತ್ತವೆ. ಅದಕ್ಕೆ ಹಲವರು ಈ ಎಣ್ಣೆಯನ್ನು ಮತ್ತೆ ಬಳಸಲು ಇಷ್ಟಪಡುವುದಿಲ್ಲ. ಆದರೆ ಈ ಎಣ್ಣೆಯನ್ನು ಉಪಯೋಗಿಸಿ ಮನೆಯಲ್ಲಿ ಕೀಟಗಳನ್ನು ದೂರವಿಡಬಹುದು. ಎಣ್ಣೆಯನ್ನು ಬೇರೆ ಪಾತ್ರೆಗೆ ಸೋಸಿಕೊಳ್ಳಬೇಕು. ನಂತರ ಅದಕ್ಕೆ ಲವಂಗ ಮತ್ತು ನಿಂಬೆಹಣ್ಣಿನ ಹೋಳು ಹಾಕಿ. ಅದರಲ್ಲಿ ದೀಪದ ಬತ್ತಿ ಹಾಕಿ ಉರಿಸಿ. ಇದರಿಂದ ಸೊಳ್ಳೆ ಮತ್ತು ಕೀಟಗಳು ಬರುವುದಿಲ್ಲ.
ಕಬ್ಬಿಣದ ಸಾಮಾನುಗಳನ್ನು ಸ್ವಚ್ಛಗೊಳಿಸುವ ವಿಧಾನ (How to Clean Metal & Iron)
ಮನೆಯಲ್ಲಿ ಉಪಯೋಗಿಸುವ ಕಬ್ಬಿಣದ ಸಾಮಾನುಗಳನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡಲು ಈ ಎಣ್ಣೆಯನ್ನು ಬಳಸಬಹುದು. ಎಣ್ಣೆಯನ್ನು ಸೋಸಿ ಸ್ಪ್ರೇ ಬಾಟಲಿಗೆ ತುಂಬಿಕೊಳ್ಳಿ. ನಂತರ ಅದನ್ನು ಉಪಕರಣದ ಮೇಲೆ ಸ್ಪ್ರೇ ಮಾಡಿ ಮತ್ತು ಬ್ರಷ್ ಸಹಾಯದಿಂದ ಹರಡಿ ಬಟ್ಟೆಯಿಂದ ಒರೆಸಿ ಚೆನ್ನಾಗಿ ಪಾಲಿಶ್ ಮಾಡಿ.
ಸಸ್ಯಗಳ ಮೇಲಿನ ಕೀಟಗಳನ್ನು ಹೇಗೆ ಓಡಿಸುವುದು (Ways to Keep Bugs Out from Plant)
ಸಸ್ಯಗಳಲ್ಲಿರುವ ಕೀಟಗಳನ್ನು ತೊಡೆದುಹಾಕಲು ನೀವು ಉಳಿದ ಎಣ್ಣೆಯನ್ನು ಬಳಸಬಹುದು. ಎಣ್ಣೆಯನ್ನು ಪ್ಲಾಸ್ಟಿಕ್ ಅಥವಾ ಬೇಡವಾದ ಪಾತ್ರೆಯಲ್ಲಿ ಸಸ್ಯಗಳ ಬಳಿ ಇರಿಸಿ. ಇದರ ವಾಸನೆಯು ಸಸ್ಯದಿಂದ ಕೀಟಗಳನ್ನು ದೂರವಿಡುತ್ತದೆ. ಇದರೊಂದಿಗೆ, ನೀವು ಎಣ್ಣೆಯಲ್ಲಿ ಲವಂಗ, ಕರ್ಪೂರವನ್ನು ಬೆರೆಸಿ ಕೀಟಗಳಿರುವ ಜಾಗದಲ್ಲಿ ಸಿಂಪಡಿಸಬಹುದು.