MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ನಾಲ್ಕು ರಾಶಿಯವರಂತೂ ಹುಟ್ಟಿನಿಂದಲೇ ಧೈರ್ಯಶಾಲಿಗಳು!

ಈ ನಾಲ್ಕು ರಾಶಿಯವರಂತೂ ಹುಟ್ಟಿನಿಂದಲೇ ಧೈರ್ಯಶಾಲಿಗಳು!

ಪ್ರತಿಯೊಬ್ಬರಿಗೂ ಅವರವರ ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತದೆ. ಕೆಲವು ರಾಶಿಯವರು ಹೃದಯವಂತರಾದರೇ, ಮತ್ತೆ ಹಲವರು ಹುಟ್ಟಿನಿಂದಲೇ ಧೈರ್ಯಶಾಲಿಗಳಾಗಿರುತ್ತಾರೆ. ಹಾಗಾಗಿ ಈ 4 ರಾಶಿಯವರಂತೂ ಹುಟ್ಟಿನಿಂದಲೇ ಧೈರ್ಯಶಾಲಿಗಳು, ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. 

2 Min read
Naveen Kodase
Published : Sep 12 2025, 06:25 PM IST
Share this Photo Gallery
  • FB
  • TW
  • Linkdin
  • Whatsapp
16
ಜೋತಿಷ್ಯಶಾಸ್ತ್ರ
Image Credit : Getty

ಜೋತಿಷ್ಯಶಾಸ್ತ್ರ

ಜ್ಯೋತಿಷ್ಯದಲ್ಲಿ ಹೇಳಿರುವಂತೆ ಮನುಷ್ಯನ ಗುಣ, ಲಕ್ಷಣಗಳು ಮತ್ತು ವ್ಯಕ್ತಿತ್ವವನ್ನು ಅರಿಯಬಹುದು. ಹಿಂದೆ ಘಟಿಸಿದ, ಮುಂದೆ ಘಟಿಸುವ ವಿಚಾರಗಳ ಬಗ್ಗೆಯೂ ಸೂಚನೆ ನೀಡುತ್ತದೆ ಈ ಶಾಸ್ತ್ರ. ರಾಶಿ ಮತ್ತು ನಕ್ಷತ್ರಗಳನ್ನು ತಿಳಿದು ವ್ಯಕ್ತಿಯ ಸ್ವಭಾವವನ್ನು ಅರ್ಥ ಮಾಡಿಕೊಳ್ಳಬಹುದು. ಜಾತಕದಿಂದ ಜೀವನದಲ್ಲಾಗುವ ಏರು-ಪೇರು ಮತ್ತು ಇನ್ನಿತರೆ ಕುತೂಹಲಕಾರಿ ಸಂಗತಿಗಳನ್ನು ಅರಿಯುವುದು ಸುಲಭ| ಕೆಲವೊಮ್ಮೆ ಗ್ರಹ ಹಾಗೂ ನಕ್ಷತ್ರಗಳ ಪರಿವರ್ತನೆಗಳೂ ರಾಶಿ-ನಕ್ಷತ್ರಗಳ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಬೇಕಾದರೆ ಅದೃಷ್ಟ ಖುಲಾಯಿಸುವಂತೆ ಮಾಡಬಹುದು, ಬೀದಿಗೆ ಬೀಳುವಂತೆಯೂ ಮಾಡುವಲ್ಲಿ ಯಶಸ್ವಿಯಾಗಬಹುದು.

26
ರಾಶಿಗಳ ವಿಶೇಷ
Image Credit : Getty

ರಾಶಿಗಳ ವಿಶೇಷ

ಪ್ರತಿ ರಾಶಿಗೆ ಅದರದ್ದೇ ಆದ ವಿಶೇಷ ವಿಭಿನ್ನ ಸ್ವಭಾವಗಳಿರುತ್ತವೆ. ರಾಶಿಗನುಗುಣವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹಲವು ರಾಶಿಯವರು ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದರೆ, ಮತ್ತೆ ಕೆಲವು ರಾಶಿಯವರು ಗಟ್ಟಿಗಳ ವ್ಯಕ್ತಿಗಳು ಹೆದರಿಕೆಯೇ ಇರುದಿಲ್ಲವಂತೆ, ಎಂಥದ್ದೇ ಸಂಧರ್ಭ ಎದುರಾದರೂ ಧೈರ್ಯಗೆಡದೆ ಕಷ್ಟವನ್ನು ಎದುರಿಸುವಲ್ಲಿ ಸಮರ್ಥರಾಗಿರುತ್ತಾರೆ. ಅವರಿಗೆ ಧೈರ್ಯವೇ ಅಸ್ತ್ರ. ಹಾಗಾದರೆ ಆ ರಾಶಿಗಳು ಯಾವವು?

Related Articles

Related image1
ಸೆಪ್ಟೆಂಬರ್ 14 ರಿಂದ ಗಜಕೇಸರಿ ರಾಜಯೋಗ, ಈ ರಾಶಿಗೆ ಅದೃಷ್ಟ, ಹಣದ ಹೊಳೆ
Related image2
ಈ ಹೆಸರಿನ ಜನರು ಎಂಥ ಕಷ್ಟ ಬಂದರೂ ಧೃತಿಗೆಡಲ್ಲ..ಸಂಗಾತಿ, ಸ್ನೇಹಿತರೆಂದರೆ ಪಂಚಪ್ರಾಣ
36
ಮೇಷ ರಾಶಿ
Image Credit : Pixabay

ಮೇಷ ರಾಶಿ

ಮೇಷ ರಾಶಿ ಈ ರಾಶಿಯವರು ಹೆಚ್ಚು ಧೈರ್ಯವಂಥರು ಮತ್ತು ಛಲವಾದಿಗಳು. ಮೇಷ ರಾಶಿಯ ಅಧಿಪತಿ ಮಂಗಳ. ಈ ಗ್ರಹವು ಧೈರ್ಯ, ಕೋಪ, ಸಾಹಸ ಮತ್ತು ವಿಜಯದ ಕಾರಕ ಗ್ರಹವಾಗಿರುವುದರಿಂದ ಮೇಷ ರಾಶಿಯವರಿಗೆ ಧೈರ್ಯ ಸರ್ವತ್ರ ಸಾಧನಂ. ಹಾಗಾಗಿ ಈ ರಾಶಿಯವರಲ್ಲಿ ಮಂಗಳ ಗ್ರಹದ ಪ್ರಭಾವ ಕಾಣಬಹುದು. ಮೇಷ ರಾಶಿಯವರು ಯಾವ ಕಾರಣಕ್ಕೂ ಬೇರೆಯವರ ಮುಂದೆ ತಲೆ ಬಗ್ಗಿಸುವಂಥ ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದಿಲ್ಲ. ಇವರ ಈ ಧೈರ್ಯವೇ ಇವರಿಗೆ ಯಶಸ್ಸಿನ ದಾರಿಯನ್ನು ಸೃಷ್ಟಿಸಿಕೊಡುತ್ತದೆ. ಅದಕ್ಕೋಸ್ಕರವೇ ಯಾರಿಗೂ ಹೆದರದ ಸ್ವಭಾವ ಇವರಿಗಿರುತ್ತದೆ. ಈ ರಾಶಿಯವರ ಈ ಗುಣಗಳೇ ಇವರು ಕೈ ಹೆಡಿದ ಕೆಲಸದಲ್ಲಿ ಜಯ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.

46
ವೃಷಭ ರಾಶಿ
Image Credit : Getty

ವೃಷಭ ರಾಶಿ

ವೃಷಭ ಈ ರಾಶಿಯವರೂ ಮೇಷಕ್ಕಿಂದ ಭಿನ್ನವಾಗಿರುವುದಿಲ್ಲ. ಹೆಚ್ಚು ಧೈರ್ಯಶಾಲಿಗಳು. ಅಷ್ಟೇ ಅಲ್ಲ, ಈ ರಾಶಿಯವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ತಿಳಿದು ನಿಭಾಯಿಸುವಂಥ ವಿಶೇಷ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲ ಸಂಕಷ್ಟಗಳನ್ನೂ ಈ ರಾಶಿಯವರು ಸುಲಭವಾಗಿ ನಿಭಾಯಿಸುವುದಲ್ಲದೆ, ಕಷ್ಟಕ್ಕೆ ಬಂದಾಗ ಸ್ವಲ್ಪವೂ ಅಂಜುವುದಿಲ್ಲ. ಎಲ್ಲವನ್ನೂ ಎದುರಿಸುವ ಗುಣ ಇವರಲ್ಲಿರುತ್ತದೆ. ಹಾಗೆಯೇ ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವ ಚತುರತೆಯನ್ನು ಇವರಿಗೆ ಕರಗತವಾಗಿರುತ್ತದೆ.

56
ಸಿಂಹ ರಾಶಿ
Image Credit : Getty

ಸಿಂಹ ರಾಶಿ

ಸಿಂಹ ರಾಶಿ ಹೆಸರಿಗೆ ತಕ್ಕಂತೆ ಇವರು ಸಿಂಹದಂತೆಯೇ ಬದುಕುತ್ತಾರೆ. ಈ ರಾಶಿಯವರು ಬಾಲ್ಯದಿಂದಲೂ ಧೈರ್ಯವಂತರು. ಚಿಕ್ಕವರಿದ್ದಾಗ ಇವರ ಚಟುವಟಿಕೆಗಳೂ ಆಶ್ಚರ್ಯವನ್ನುಂಟು ಮಾಡುವಂತೆ ಇರುತ್ತದೆ. ಇವರಿಗೆ ಯಾವುದೇ ರೀತಿಯ ಭಯ ಇದೆ ಎಂಬುವುದು ಗೊತ್ತಾಗದಷ್ಟು ಇವರ ವರ್ತನೆ ಇರುತ್ತದೆ. ಈ ರಾಶಿಯ ಅಧಿಪತಿ ಸೂರ್ಯ. ಸಾಹಸ – ನಿಯಮ – ಅತ್ಯುನ್ನತ ಪದವಿ – ಧೈರ್ಯ ಮತ್ತು ನಾಯಕತ್ವ ಗುಣಗಳ ಕಾರಕ ಗ್ರಹ. ಹಾಗಾಗಿ ಈ ರಾಶಿಯವರ ಗುಣ ಸೂರ್ಯ ಗ್ರಹದಿಂದ ಪ್ರಭಾವಿತವಾಗಿ ಇನ್ನಷ್ಟು ಧೈರ್ಯವಂತರನ್ನಾಗಿ ಮಾಡುತ್ತದೆ. ಅಷ್ಟೇ ಅಲ್ಲ ಸಿಂಹ ರಾಶಿಯವರು ಹೆಚ್ಚು ಬುದ್ಧಿವಂತರೂ ಹೌದು.

66
ದನು ರಾಶಿ
Image Credit : Getty

ದನು ರಾಶಿ

ಧನು ರಾಶಿ ಜಯ ಸಾಧಿಸುವಲ್ಲಿ ಧೈರ್ಯವಂತರಾದ ಧನು ರಾಶಿಯವರು ಬಹಳ ಮುಂದು. ಹಾಗಾಗಿ ಇವರಿಗೆ ಸೋಲು ಎಂಬುದನ್ನು ಅರಿಗಿಸಿಕೊಳ್ಳುವುದು ತುಸು ಕಷ್ಟ. ಆ ಸೋಲನ್ನು ಸ್ವೀಕರಿಸುವ ಮನಸ್ಥಿತಿ ಇವರಿಗೆ ಇರುವುದಿಲ್ಲ. ಇದರಿಂದ ತಮ್ಮ ಜಯದತ್ತಲೇ ಹೆಚ್ಚು ಫೋಕಸ್ಟ್ ಆಗಿರುತ್ತಾರೆ. ಇದಕ್ಕೋಸ್ಕರವೇ ಎಂಥದ್ದೇ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೂ ಇವರು ಹಿಂದೇಟು ಹಾಕುವುದಿಲ್ಲ. ನೋಡಲು ಕಠೋರ ಸ್ವಭಾವದವರಂತೆ ಕಂಡರೂ ಇವರು ಆಂತರ್ಯದಲ್ಲಿ ಮೃದುತ್ವ ಧೋರಣೆ ಹೊಂದಿರುತ್ತಾರೆ. ಇದರ ಜೊತೆಗೆ ಎಂಥ ಸಮಸ್ಯೆಗಳು ಬಂದರೂ ದೃತಿಗೆಡದೆ ಎಲ್ಲವನ್ನೂ ಸುಲಭ ಹಾಗೂ ಸರಳವಾಗಿ ನಿಭಾಯಿಸುವ ಚಾಕಚಕ್ಯತೆಯೂ ಈ ಧನು ರಾಶಿಯವರು ಹೊಂದಿರುತ್ತಾರೆ. ಇವರ ಈ ಗುಣವೇ ಇವರಿಗೆ ಹೆಚ್ಚು ಧೈರ್ಯ ಹಾಗೂ ಯಶಸ್ಸನ್ನು ತಂದು ಕೊಡುತ್ತದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜ್ಯೋತಿಷ್ಯ
ರಾಶಿ
ಧರ್ಮ
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved