#Udupi ಶ್ರೀ ಕೃಷ್ಣ ಮಠದಲ್ಲಿ ನವದುರ್ಗೆಯರ ಚಂದದ ಅಲಂಕಾರ..! ಇಲ್ನೋಡಿ ಫೋಟೋಸ್
- ನವದುರ್ಗೆಯ ಚಂದದ ಅಲಂಕಾರವನ್ನೂ ಕಣ್ತುಂಬಿಕೊಳ್ಳಿ
- ಅದಮಾರು ಮಠದಲ್ಲಿ ದೇವಿಯರ ಅಲಂಕಾರ ಹೀಗಿತ್ತು
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಶ್ರೀ ಮಹಾಲಕ್ಷ್ಮೀ ಅಲಂಕಾರ - 06.08.2021 ಬುಧವಾರದ ಅಲಂಕಾರ ದೃಶ್ಯ ಹೀಗಿತ್ತು.
ನವರಾತ್ರಿಯ(Navratri)ಯ ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ. ಶ್ವೇತ (White) ವಸ್ತ್ರದಲ್ಲಿರುವ ಶೈಲಪುತ್ರಿಯು ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಶೈಲ ಎಂದರೆ ಪರ್ವತ (Mountain). ಈಕೆ ಪರ್ವತರಾಜನ ಮಗಳು. ಪರ್ವತ ಎಂದರೆ ಪ್ರಕೃತಿ (Nature). ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಶ್ರೀ ಮೋಹಿನಿ ಅಲಂಕಾರ - 07.10.2021 ಗುರುವಾರದ ಅಲಂಕಾರ ದೃಶ್ಯ ಹೀಗಿತ್ತು.
ನವರಾತ್ರಿಯ(Navratri) ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು(Confidence) ಹೆಚ್ಚಿಸುತ್ತಾಳೆ. ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತವಸ್ತ್ರಧಾರಿಣಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು (Knowledge)ನೀಡುವವಳೂ ಆಗಿದ್ದಾಳೆ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಉಯ್ಯಾಲೆಯಲ್ಲಿ ರುಗ್ನಿಣಿ ಅಲಂಕಾರ - 08.10.2021 ಶುಕ್ರವಾರದ ಅಲಂಕಾರ ದೃಶ್ಯ ಹೀಗಿತ್ತು.
ನವರಾತ್ರಿಯ (Navratri) ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆ ಪಾರ್ವತಿ (Parvathy), ಶಿವನ ಪತ್ನಿ, ದುರ್ಗೆಯ ಹಲವು ಸ್ವರೂಪಗಳಲ್ಲಿ ಒಬ್ಬಳು ಹಾಗೂ ದುರ್ಗಾಮಾತೆಯ ವೈವಾಹಿಕ ಅವತಾರ. ದುರ್ಗಾ ಮಾತೆಯ ರೌದ್ರಸ್ವರೂಪಳಾಗಿರುವವಳು ಈಕೆ. ದುಷ್ಟಶಕ್ತಿಗಳಿಗೆ ಈಕೆ ಸಿಂಹಸ್ವಪ್ನ. ಆದರೆ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಅಭಯವರ ಲಕ್ಷ್ಮೀ ಅಲಂಕಾರ - 09.10.2021 ಶನಿವಾರದ ಅಲಂಕಾರ ದೃಶ್ಯ ಹೀಗಿತ್ತು.
ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ (Nav durga) ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು (Light of knowledge) ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ (Sanskrit) ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಇದಕ್ಕೆ ಬ್ರಹ್ಮಾಂಡ ಎಂದೂ ಅರ್ಥವಿದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿಯು ಜ್ಞಾನವರ್ಧಕ, ತೇಜೋ ವರ್ಧಕ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಅಭಯವರ ಲಕ್ಷ್ಮೀ ಚಪ್ಪರ ಮಂಚದಲ್ಲಿ ರುಗ್ಮಿಣಿ ಅಲಂಕಾರ - 10.10.2021 ಆದಿತ್ಯವಾರದ ಅಲಂಕಾರ ದೃಶ್ಯ ಹೀಗಿತ್ತು.
ಈ ಹಿಂದಿನ ಮೂರು ದಿನಗಳಲ್ಲಿ ಪಾರ್ವತೀ ದೇವಿಯ (Goddess Parvathi) ಮೂರು ಅವತಾರಗಳನ್ನು ನೋಡಿದೆವು- ಹಿಮವಂತನ ಮಗಳಾದ ಶೈಲಪುತ್ರೀ, ನಂತರ ಶಿವನನ್ನು ಆರಾಧಿಸಿ ಪೂಜಿಸಿ ಮೆಚ್ಚಿಸುವ ಬ್ರಹ್ಮಚಾರಿಣೀ, ನಂತರ ಭಯಂಕರ ಸ್ವರೂಪದ ಶಿವನನ್ನು ಮದುವೆಯ ಮಂಟಪದಲ್ಲಿ ಅದೇ ಸ್ವರೂಪ ತಾಳಿ ಒಲಿಸಿಕೊಳ್ಳುವ ಚಂದ್ರಘಂಟಾ, ನಂತರ ರಾಕ್ಷಸರನ್ನು ನಾಶ ಮಾಡುವ ಸ್ವರೂಪದ ಕೂಷ್ಮಾಂಡಾ ದೇವಿ. ಐದನೇ ದಿನದಂದು ದೇವಿಯು ಸ್ಕಂದಮಾತೆಯಾಗಿ ಕಾಣಿಸಿಕೊಳ್ಳುತ್ತಾಳೆ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ರುಗ್ಮಿಣಿ ಪ್ರೇ, ಅಲಂಕಾರ - 11.10.2021 ಸೋಮವಾರದ ಅಲಂಕಾರ ದೃಶ್ಯ ಹೀಗಿತ್ತು.
ನವರಾತ್ರಿ ಹಬ್ಬದ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ಮಹಿಷಾಸುರ ಮರ್ದಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ. ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಶ್ರೀ ಶಾರದೆ ಅಲಂಕಾರ - 12.10.2021 ಮಂಗಳವಾರ ಅಲಂಕಾರ ದೃಶ್ಯ ಹೀಗಿತ್ತು.
ಶಾರದಾ ದೇವಿ ವಿದ್ಯಾಧಿದೇವತೆ. ಅಂದು ಪುಸ್ತಕ, ಗ್ರಂಥ, ಪಠ್ಯ ಸಂಬಂಧಿ ವಸ್ತುಗಳನ್ನು ತಾಯಿ ಶಾರದೆ ಮುಂದಿಟ್ಟು ಪೂಜಿಸಲಾಗುಗುತ್ತದೆ.
ಕಾಲರಾತ್ರಿ ದೇವಿಯು ದುರ್ಗಾಮಾತೆಯ ಏಳನೇ ಅವತಾರವಾಗಿದ್ದಾಳೆ. ಕಾಲ ಎಂದರೆ ಸಮಯ ಹಾಗೂ ಸಾವು ಎಂಬುದರ ಸೂಚಕ. ಕಾಲರಾತ್ರಿಯು ಕಾಲದ ಸಾವು ಎಂಬುದನ್ನು ಹೇಳುತ್ತದೆ. ತಾಯಿ ಕಾಲರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ ಬೆಳಕೆಂಬ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ. ತಾಯಿಯು ಕತ್ತಲೆಯನ್ನು ಪ್ರತಿನಿಧಿಸುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ ಶಾಂತಿ, ಧೈರ್ಯವನ್ನು ತುಂಬುತ್ತಾಳೆ.
ಶ್ರೀ ಕೃಷ್ಣ ದರ್ಶನ - ಶ್ರೀ ಅದಮಾರು ಪರ್ಯಾಯ - ಶ್ರೀ ಮಹಾಲಕ್ಷ್ಮೀ ಅಲಂಕಾರ - 06.08.2021 ಬುಧವಾರದ ಅಲಂಕಾರ ದೃಶ್ಯ ಹೀಗಿತ್ತು.
ನವರಾತ್ರಿಯ(Navratri) ಎಂಟನೇ ದಿನ ಮಹಾಗೌರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ತಾಯಿ ಗೌರಿಯ(Gauri) ವಯಸ್ಸು ಯಾವಾಗಲೂ ಹದಿನಾರು ಆಗಿರುತ್ತದೆ. ಗೌರಿಯು ಗಿರಿಗಳ ಪುತ್ರಿ. ಅವಳು ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ. ಚಂದ್ರನ ತೇಜಸ್ಸು ಆಕೆಯ ಮುಖದಲ್ಲಿ ಲಾಸ್ಯವಾಡುತ್ತಿರುತ್ತದೆ. ಆಕೆ ಮತ್ತೊಂದು ಕೈಯ್ಯಲ್ಲಿ ಭಕ್ತರಿಗೆ ಆಶೀರ್ವಾದ ಮಾಡುತ್ತಿರುತ್ತಾಳೆ.