ಅಣಕಿಸೋದು, ಅಳಿಸೋದು, ಬೇರೆಯರನ್ನು ಬೇಜಾರ್ ಮಾಡುವ ರಾಶಿಗಳು; ಮನಸ್ಸು ನೋಯಿಸೋವರೆಗೂ ಬಿಡಲ್ಲ
ಕೆಲವರು ಯಾವಾಗ್ಲೂ ಬೇರೆಯವರನ್ನು ಬೇಜಾರ್ ಮಾಡ್ತಾನೆ ಇರ್ತಾರೆ. ಖುಷಿಯಾಗಿರೋರನ್ನ ಏನಾದ್ರೂ ಮಾಡಿ ಅಳಿಸಬೇಕು ಅಂತ ಅಂದುಕೊಳ್ಳುತ್ತಿರುತ್ತಾರೆ. ಜ್ಯೋತಿಷ್ಯದಲ್ಲೂ ಕೂಡ ಅಂಥ ಕೆಲವು ರಾಶಿಗಳಿವೆ. ಆ ರಾಶಿ ಯಾವವು ಎಂದು ನೋಡೋಣ ಬನ್ನಿ.

ರಾಶಿ ಸ್ವಭಾವ
ದೇಹಕ್ಕೆ ಆಗೋ ಗಾಯ ಸ್ವಲ್ಪ ದಿನದಲ್ಲಿ ವಾಸಿಯಾಗುತ್ತೆ. ಆದ್ರೆ ಮನಸ್ಸಿಗೆ ಆಗೋ ಗಾಯ ವಾಸಿಯಾಗೋಕೆ ವರ್ಷಾನುಗಟ್ಟಲೆ ಬೇಕಾಗುತ್ತದೆ. ಕೆಲವರಿಗೆ ಜೀವನಪೂರ್ತಿ ನೆನಪಿರುತ್ತೆ. ಆದ್ರೆ ಕೆಲವರು ಬೇರೆಯವರ ಬಗ್ಗೆ ಏನೂ ಯೋಚನೆ ಮಾಡಲ್ಲ. ಮಾತು, ಕೆಲಸದಿಂದ ಎಲ್ಲರನ್ನೂ ಬೇಜಾರ್ ಮಾಡ್ತಾರೆ. ಅವರು ಬೇಜಾರಾಗಿದ್ರೆ ಖುಷಿಪಡ್ತಾರೆ. ಜ್ಯೋತಿಷ್ಯದಲ್ಲೂ ಕೂಡ ಅಂಥ ರಾಶಿಗಳಿವೆ.
1.ಮೇಷ ರಾಶಿ
ಮೇಷ ರಾಶಿಯವರನ್ನ ಮಂಗಳ ಗ್ರಹ ಆಳುತ್ತೆ ಎಂದು ಜ್ಯೋತಿಷ್ಯ ಹೇಳುತ್ತದೆ. ತಾವು ಪಟ್ಟ ಕಷ್ಟ ಬೇರೆಯವರೂ ಪಡ್ಬೇಕು ಅಂತ ಅನ್ಕೊಂಡಿರ್ತಾರೆ. ಯಾರಾದ್ರೂ ಸುಖವಾಗಿ, ಶಾಂತವಾಗಿ ಇದ್ರೆ ಸಹಿಸಿಕೊಳ್ಳೋಕೆ ಆಗಲ್ಲ. ಮಾತು, ಕೆಲಸದಿಂದ ತೊಂದರೆ ಕೊಡುತ್ತಿರುತ್ತಾರೆ.
ಕೋಪನೂ ಕಂಟ್ರೋಲ್ ಮಾಡಿಕೊಳ್ಳೋಕೆ ಆಗಲ್ಲ. ಒಮ್ಮೆ ಯಾರನ್ನಾದ್ರೂ ಬೇಜಾರ್ ಮಾಡಬೇಕು ಅಂತ ಅನ್ಕೊಂಡ್ರೆ, ಆ ಕೆಲಸ ಆಗೋವರೆಗೂ ಬಿಡಲ್ಲ. ಮನಸ್ಸು ನೋಯಿಸೋವರೆಗೂ ಬಿಡಲ್ಲ.
2.ವೃಷಭ ರಾಶಿ
ವೃಷಭ ರಾಶಿಯವರನ್ನ ಶುಕ್ರ ಗ್ರಹ ಆಳುತ್ತೆ. ಇವರು ತುಂಬಾ ಮೊಂಡು ಜನ. ಯಾರನ್ನಾದ್ರೂ ಬೇಜಾರ್ ಮಾಡಬೇಕು ಅಂತ ಅನ್ಕೊಂಡ್ರೆ ಮಾಡೇ ಮಾಡ್ತಾರೆ. ಜಾಸ್ತಿ ಯೋಚನೆ ಮಾಡಲ್ಲ. ಬೇಜಾರ್ ಮಾಡೋ ವಿಷ್ಯದಲ್ಲಿ ಹಿಂದೆ ಸರಿಯಲ್ಲ. ಅಳಿಸೋವರೆಗೂ ಬಿಡಲ್ಲ.
3.ಮಿಥುನ ರಾಶಿ
ಮಿಥುನ ರಾಶಿಯವರನ್ನ ಬುಧ ಗ್ರಹ ಆಳುತ್ತೆ. ಎರಡು ರೀತಿಯ ವ್ಯಕ್ತಿತ್ವ ಇರೋರು. ಮನಸ್ಸು ಅರ್ಥ ಮಾಡಿಕೊಳ್ಳೋದು ಕಷ್ಟ. ಒಂದು ಸಲ ಫ್ರೆಂಡ್ಲಿ ಇರ್ತಾರೆ, ಇನ್ನೊಂದು ಸಲ ಭಯ ಹುಟ್ಟಿಸೋ ತರ ಇರ್ತಾರೆ. ಬೇರೆಯವ್ರನ್ನ ಏನಾದ್ರೂ ಮಾಡಿ ಅಳಿಸ್ಬೇಕು ಅನ್ನೋ ಆಸೆ ಜಾಸ್ತಿ. ಅವ್ರೇ ಅಳಿಸ್ತಾರೆ, ಅವ್ರೇ ಸಮಾಧಾನ ಮಾಡ್ತಾರೆ. ವಿಚಿತ್ರವಾಗಿ ವರ್ತಿಸ್ತಾರೆ.
4.ಧನಸ್ಸು ರಾಶಿ
ಧನಸ್ಸು ರಾಶಿಯವರು ಬೇರೆಯವ್ರನ್ನ ಅಣಕಿಸೋದ್ರಲ್ಲಿ, ಕಾಲೆಳೆಯೋದ್ರಲ್ಲಿ ಮುಂದಿರ್ತಾರೆ. ಎಲ್ಲವನ್ನೂ ತಮಾಷೆ ಅಂತ ತಿಳ್ಕೊಳ್ಳೋರು. ಬೇರೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲ್ಲ, ಗೌರವ ಕೊಡಲ್ಲ. ಮಾತು, ಕೆಲಸದಿಂದ ಬೇರೆಯವ್ರನ್ನ ಬೇಜಾರ್ ಮಾಡಿ, ಕೊನೆಗೆ ಅವ್ರೇ ಖುಷಿಪಡ್ತಾರೆ. ದೇಹಕ್ಕೆ ತೊಂದರೆ ಕೊಡೋಕೆ ಹೋಗಲ್ಲ, ಆದ್ರೆ ಮನಸ್ಸಿಗೆ ನೋವು ಕೊಡ್ತಾರೆ.
5.ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಖುಷಿಗೆ ಏನೂ ಯೋಚನೆ ಮಾಡಲ್ಲ. ಬೇರೆಯವರು ಏನು ಅಂತಾರೆ ಅಂತ ಪಕ್ಕಕ್ಕಿಡ್ತಾರೆ. ಯಾರ ಜೊತೆಗೂ ಕ್ರೂರವಾಗಿ ವರ್ತಿಸ್ತಾರೆ. ಯಾರನ್ನಾದ್ರೂ ಬೇಜಾರ್ ಮಾಡೋಕೆ ಕಾರಣ ಹುಡುಕ್ತಾರೆ. ಉದ್ದೇಶಪೂರ್ವಕವಾಗಿ ಯಾರನ್ನೂ ಬೇಜಾರ್ ಮಾಡೋಕೆ ಹೋಗಲ್ಲ, ಆದ್ರೆ ಅರಿವಿಲ್ಲದೆ ಮಾಡ್ತಾರೆ. ಬೇರೆಯವರನ್ನ ತಾವೇ ಕಂಟ್ರೋಲ್ ಮಾಡ್ಬೇಕು ಅಂತ ಅನ್ಕೊಂಡಿರ್ತಾರೆ.