ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ಕೆಲಸಗಳನ್ನು ತಪ್ಪಿಯೂ ಮಾಡಬಾರದು
ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಪತ್ನಿ ಗರ್ಭಿಣಿಯಾಗಿರುವ ಸಮಯದಲ್ಲಿ ಪತಿ ಕೆಲವೊಂದು ಕೆಲಸಗಳನ್ನು ತಪ್ಪಿಯೂ ಮಾಡಬಾರದು ಎನ್ನಲಾಗುತ್ತದೆ. ಅಂತಹ ಕೆಲಸಗಳು ಯಾವುವು ಅನ್ನೋದನ್ನು ನಾವು ನೋಡೋಣ.

ಹಿಂದೂ ಧರ್ಮದಲ್ಲಿ ಜೀವನದ ಪ್ರತಿಯೊಂದು ಹಂತದಲ್ಲೂ ಒಂದೊಂದು ಆಚರಣೆ, ಸಂಪ್ರದಾಯ, ಶಾಸ್ತ್ರಗಳನ್ನು ಪಾಲಿಸಿಕೊಂಡು ಬರಲಾಗುತ್ತದೆ. ಅದರಲ್ಲೂ ಗರ್ಭಿಣಿಯಾಗಿದ್ದಾಗ, ಹಲವು ಕೆಲಸಗಳನ್ನು ಮಾಡಬಾರದು ಅನ್ನೋದನ್ನೂ ಕೂಡ ಶಾಸ್ತ್ರಗಳು ಹೇಳುತ್ತೆ. ಕೇವಲ ಗರ್ಭಿಣಿ ಮಹಿಳೆ ಮಾತ್ರವಲ್ಲ, ಗರ್ಭಿಣಿ ಮಹಿಳೆಯ ಪತಿ ಕೂಡ ಕೆಲವೊಂದು ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಯಾವುವು ಅನ್ನೋದನ್ನು ತಿಳಿಯೋಣ.
ಕ್ಷೌರ ಮಾಡಿಸಿಕೊಳ್ಳುವುದು ಸಹ ತಪ್ಪು : ಪತ್ನಿ ಗರ್ಭಿಣಿಯಾಗಿದ್ದಾಗ ಕೂದಲು ಕತ್ತರಿಸುವುದು, ಗಡ್ಡವನ್ನು ತೆಗೆಯುವುದು ಮೊದಲಾದ ಯಾವುದೇ ಕೆಲಸವನ್ನು ಪತಿ ಮಾಡಬಾರದು. ಅದರಲ್ಲೂ ತಲೆ ಬೋಳಿಸುವಂತಹ ಕೆಲಸ ಖಂಡಿತವಾಗಿಯೂ ಮಾಡಬಾರದು. ಇದರಿಂದ ಕೆಡುಕಾಗುತ್ತೆ ಎನ್ನುವ ನಂಬಿಕೆ ಇದೆ.
ಸಮುದ್ರ ಸ್ನಾನ ಮಾಡಬಾರದು : ಹಿಂದೂ ಶಾಸ್ತ್ರಗಳ ಪ್ರಕಾರ ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಸಮುದ್ರ ಸ್ನಾನ ಮಾಡಬಾರದು. ಈ ನಂಬಿಕೆಗಳ ಪ್ರಕಾರ ಯಾವುದೇ ಪುರಾವೆಗಳು ಇಲ್ಲ. ಆದರೆ ಪತ್ನಿ ಗರ್ಭಿಣಿ ಆಗಿರುವಾಗ ಪತಿಯಾದವನು ಸಮುದ್ರ ಸ್ನಾನ ಮಾಡಿದರೆ, ಅದರಿಂದ ನಕಾರಾತ್ಮಕ ಪ್ರಭಾವ (negative effect) ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ.
ಮರವನ್ನು ಕತ್ತರಿಸಬಾರದು : ನಮ್ಮ ಹಿಂದೂ ಧರ್ಮದಲ್ಲಿ ಮರ ಗಿಡ ಕಲ್ಲು ಮಣ್ಣು ಎಲ್ಲವನ್ನು ಪೂಜಿಸಲಾಗುತ್ತದೆ. ಎಲ್ಲ ವಸ್ತುಗಳಲ್ಲೂ ಜೀವವಿದೆ ಎಂದು ಅವುಗಳಿಗೆ ದೈವಿಕ ಸ್ಥಾನವನ್ನು ನೀಡಲಾಗುತ್ತದೆ. ಹಾಗಾಗಿ ಮರಗಳಲ್ಲೂ ದೇವರನ್ನು ಅಥವಾ ಜೀವವನ್ನು ಕಾಣುವುದರಿಂದ ತಮ್ಮ ಪತ್ನಿ ಒಂದು ಜೀವಕ್ಕೆ ಜೀವ ನೀಡುವ ಸಮಯದಲ್ಲಿ, ಪತಿಯಾದವನು ಮರವನ್ನು ಕಡೆಯಬಾರದು. ಇದರಿಂದ ಹುಟ್ಟುವ ಮಗುವಿಗೆ ತೊಂದರೆಯಾಗಲಿದೆ.
ಅಂತ್ಯ ಸಂಸ್ಕಾರ ಮಾಡುವುದು ಹಾಗೂ ಅಂತ್ಯಸಂಸ್ಕಾರಕ್ಕೆ ಹೋಗುವುದು ಸಹ ತಪ್ಪು : ಪತ್ನಿ ಗರ್ಭಿಣಿಯಾಗಿರುವ ಸಮಯದಲ್ಲಿ ಪತಿ ಸಂಬಂಧಿಕರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದು ಅಥವಾ ಶವಕ್ಕೆ ಹೆಗಲನ್ನು ನೀಡುವುದು ಯಾವುದೇ ಕೆಲಸವನ್ನು ಮಾಡುವುದು ಸರಿಯಲ್ಲ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ.
ತೀರ್ಥಯಾತ್ರೆ ಮಾಡುವುದು ಸರಿಯಲ್ಲ : ಸಾಮಾನ್ಯವಾಗಿ ತೀರ್ಥ ಯಾತ್ರೆ ಎಂದರೆ ನಮ್ಮ ಶಾಸ್ತ್ರದಲ್ಲಿ ಗಂಡ -ಹೆಂಡತಿ ಇಬ್ಬರೂ ಜೊತೆಯಾಗಿ ಹೋಗುವುದು ಎನ್ನುವ ನಂಬಿಕೆ ಇದೆ. ಹಾಗಾಗಿ ಪತ್ನಿಯು ಗರ್ಭಿಣಿಯಾಗಿದ್ದಾಗ ಆಕೆಯನ್ನು ಬಿಟ್ಟು ತೀರ್ಥಯಾತ್ರೆಗೆ ತೆರಳೋದು ತಪ್ಪು. ಒಂದು ವೇಳೆ ಈ ಸಮಯದಲ್ಲಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಅಂತ ಸಂದರ್ಭದಲ್ಲಿ ಗಂಡ ಜೊತೆ ಇರದೇ ಇರುವುದು ಸರಿಯಲ್ಲ. ಅಲ್ಲದೆ ಮಗು ಜನಿಸಿದರೆ ಸೂತಕದಿಂದಾಗಿ ದೇವಸ್ಥಾನಕ್ಕೆ ಹೋಗುವುದು ಕೂಡ ತಪ್ಪಾಗುತ್ತದೆ. ಹಾಗಾಗಿ ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ತೀರ್ಥಯಾತ್ರೆಗೆ ಹೋಗಬಾರದು.