ಈ ರುದ್ರಾಕ್ಷಿ ಧರಿಸಿದರೆ ಶೈಕ್ಷಣಿಕ ಯಶಸ್ಸು ಕಟ್ಟಿಟ್ಟ ಬುತ್ತಿ....
ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ರುದ್ರಾಕ್ಷಿ ಧರಿಸುವುದರಿಂದ ಅನೇಕ ಲಾಭಗಳಿವೆ. ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇರುವ ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಬಿದ್ದ ಹನಿಯಿಂದ ಉದ್ಭವವಾಯಿತೆಂಬ ಉಲ್ಲೇಖ ಭಾರತೀಯ ಪುರಾಣದಲ್ಲಿದೆ. ಪಾಸಿಟಿವ್ ಎನರ್ಜಿ ಹೆಚ್ಚಿಸುವ ರುದ್ರಾಕ್ಷಿ, ಸಮಸ್ಯೆ ದೂರು ಮಾಡಬಲ್ಲದು. ಅದರಲ್ಲಿಯೂ ಅದೃಷ್ಟವನ್ನೇ ಬದಲಾಯಿಸುವ ಶಕ್ತಿ ಗಣೇಶ ರುದ್ರಾಕ್ಷಿಗಿದೆ. ಇದನ್ನು ಧರಿಸಿದಾಗ ನಮ್ಮಲ್ಲಿನ ಋಣಾತ್ಮಕ ಅಂಶಗಳು ಕಳೆದು, ಹಿಡಿದ ಕೆಲಸದಲ್ಲಿ ಯಶ ಸಿಗುವುದು ಗ್ಯಾರಂಟಿ. ಈ ಗಣೇಶ ರುದ್ರಾಕ್ಷಿ ಧರಿಸುವುದರಿಂದ ಮತ್ತೇನು ಲಾಭ ಇವೆ?
ಮಾಮೂಲಿ ರುದ್ರಾಕ್ಷಿಯಂತೆಯೇ ಇದ್ದು ಗಣೇಶನ ಸೊಂಡಿಲನಂತೆ ಆಕಾರವೊಂದು ಮೂಡಿರುತ್ತದೆ. ನೋಡಲು ಗಣೇಶನ ರೀತಿಯೇ ಕಾಣುತ್ತದೆ.
ಮಾನಸಿಕ ಕ್ಷೋಭೆಯಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಪರಿಣಾಮ ಬೀರಬಲ್ಲದು.
ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಓದಿನಲ್ಲಿ ಆಸಕ್ತಿ ಇಲ್ಲದವರಿಗೂ ಆಸಕ್ತಿ ಮೂಡಿಸಿ, ಶಿಕ್ಷಣದಲ್ಲಿ ಯಸಸ್ಸು ಸಿಗುವಂತೆ ಮಾಡುತ್ತದೆ ಈ ರುದ್ರಾಕ್ಷಿ.
ರಾಶಿಯ ಅಧಿಪತಿ ಬುಧಗ್ರಹವಾಗಿದ್ದು, ನೀಚ ಸ್ಥಾನದಲ್ಲಿದ್ದರೆ ಈ ರುದ್ರಾಕ್ಷಿಯನ್ನು ಧರಿಸಬೇಕು. ಬುಧನ ಕೃಪೆ ನಿಮ್ಮದಾಗಲಿದೆ.
ಈ ರುದ್ರಾಕ್ಷಿಗೆ ಶಕ್ತಿ ಎಷ್ಟಿದೆ ಎಂದರೆ, ಧರಿಸಿರುವ ವ್ಯಕ್ತಿಯೊಂದಿಗೆ ಇದ್ದರೂ ಧನಾತ್ಮಕ ಶಕ್ತಿ ಮತ್ತೊಬ್ಬರಿಗೆ ಫ್ಲೋ ಆಗುತ್ತದೆ.
7. ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಈ ರುದ್ರಾಕ್ಷಿ ಧರಿಸಿ.
ಗಣೇಶನ ಕೃಪೆ ಇರುವುದರಿಂದ ಹಿಡಿದ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೇ ಪ್ರಭಾವ ಬೀರುತ್ತಾರೆ ಈ ರುದ್ರಾಕ್ಷಿ ಧರಿಸಿರುವವರು.
ವಿಘ್ನ ನಿವಾರಕನ ಕೃಪೆಯೊಂದಿಗೆ ಶಿವನ ಕೃಪೆಗೂ ಪಾತ್ರರಾಗಲು ಗಣೇಶ ರುದ್ರಾಕ್ಷಿ ಧರಿಸಿ.
ಗಣೇಶ ರುದ್ರಾಕ್ಷಿ ಕೇತು ಗ್ರಹದ ಅಶುಭ ಪ್ರಭಾವದಿಂದಲೂ ಪಾರು ಮಾಡುತ್ತದೆ.
ಇಂಥ ಪ್ರಭಾವಿ ಗಣೇಶ ರುದ್ರಾಕ್ಷಿ ಧರಿಸುವ ಮೂಹೂರ್ತವನ್ನು ಜ್ಯೋತಿಷಿಗಳ ಹತ್ತಿರ ಕೇಳಿವುದೊಳಿತು. ಗಣೇಶ ಹಬ್ಬದಂದು ಧಾರಣೆ ಮಾಡಲು ಶುಭ ಫಲ ಹೆಚ್ಚು ಎಂದು ಹೇಳುತ್ತಾರೆ. ಕೆಂಪು ದಾರ ಅಥವಾ ಬಂಗಾರ, ಬೆಳ್ಳಿಯೊಂದಿಗೆ ಇದನ್ನು ಧರಿಸಬಹುದು. ದೇವರ ಮುಂದಿಟ್ಟು ಪೂಜಿಸಿದರೂ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.