ಮರುಳುಗಾಡಿನಲ್ಲಿ ಒಂಟೆಗಳ ಜೊತೆ KD ಲೇಡಿ ರೀಷ್ಮಾ ನಾಣಯ್ಯ: ಎದೆ ಬಡಿತ ಜೋರಾಯ್ತೆಂದ ಪಡ್ಡೆಹೈಕ್ಲು!
ದುಬೈಯಲ್ಲಿನ ಅಬುಧಾಬಿಯ ಡೆಸರ್ಟ್ ಸಫಾರಿ ಮಾಡಿರೋ KD ಲೇಡಿ ರೀಷ್ಮಾ ನಾಣಯ್ಯ ತುಂಬಾನೆ ಸಂತಸಪಟ್ಟಿದ್ದಾರೆ. ಆ ಸಂತಸ ಕ್ಷಣದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕೆಡಿ ಚಿತ್ರದ ನಟಿ ರೀಷ್ಮಾ ನಾಣಯ್ಯ ಸದ್ಯ ಅಬುಧಾಬಿಯಲ್ಲಿ ಡೆಸರ್ಟ್ ಸಫಾರಿ ಮಾಡಿದ್ದು ಮರಳಿನ ಮೇಲೆ ಕುಳಿತು ಭಿನ್ನ ವಿಭಿನ್ನ ಪೋಸ್‌ಗಳನ್ನು ಕೊಟ್ಟಿದ್ದು, ಜೊತೆ ಒಂಟೆಗಳ ಜೊತೆ ಮಸ್ತ್ ಆಗಿ ಮಿಂಚಿದ್ದಾರೆ.
ದುಬೈಯಲ್ಲಿನ ಅಬುಧಾಬಿಯ ಡೆಸರ್ಟ್ ಸಫಾರಿ ಮಾಡಿರೋ ರೀಷ್ಮಾ ನಾಣಯ್ಯ, ತುಂಬಾನೆ ಸಂತಸಪಟ್ಟಿದ್ದಾರೆ. ಆ ಸಂತಸ ಕ್ಷಣದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷವಾಗಿ ರೀಷ್ಮಾ ನಾಣಯ್ಯ ಒಂಟೆಗಳ ನಡುವೆ ಫೋಟೋಗೆ ಫೋಸ್ ಕೊಟ್ಟಿದ್ದು, ಅದಕ್ಕೆ ಸಂಬಂಧಿಸಿದ ಒಂದೇ ಒಂದು ವಿಡಿಯೋವನ್ನ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾದಲ್ಲೂ ರೀಷ್ಮಾ ನಾಣಯ್ಯ ಅಭಿನಯಸಿದ್ದಾರೆ. ಈ ಚಿತ್ರದ ಎಲ್ಲ ಕೆಲಸ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಬೇಕಿದೆ.
ನಟಿ ರೀಷ್ಮಾ ನಾಣಯ್ಯ ಕೆಡಿ ಚಿತ್ರದ ಮೂಲಕ ಹೊಸ ಅಲೆ ಎಬ್ಬಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಚ್‌ಲಕ್ಷ್ಮಿ ಪಾತ್ರದ ಮೂಲಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಜೋಡಿ ಆಗಿದ್ದಾರೆ.
ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅವರನ್ನ ಯಾವ ರೀತಿ ತೋರಿಸುತ್ತಾರೆ ಅನ್ನುವ ಕುತೂಹಲ ಕೂಡ ಮೂಡಿದೆ. ರೀಷ್ಮಾ ನಾಣಯ್ಯ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ನಟಿಸಿದ್ದರು. ಅವರ ಪಾತ್ರಕ್ಕೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿತ್ತು.