ರಾಮಾಯಣದ ಸೀತೆ ಪಾತ್ರದಲ್ಲಿ ಮಿಂಚಲಿದ್ದಾರೆ ಮಿಸ್ ಯೂನಿವರ್ಸ್ ಇಂಡಿಯಾ Manika Vishwakarma!
ನಾಯಕರ ಕೈಯಲ್ಲಿ ಲಾಂಗು, ಮಚ್ಚು ಹಿಡಿಸುವ ಸಿನಿಮಾಗಳು ಒಂದೆಡೆಯಾದರೆ, ಜನರ ಮೇಲೆ ಉತ್ತಮ ಪ್ರಭಾವ ಬೀರುವ ಪೌರಾಣಿಕ ಚಿತ್ರಗಳು ಬರುತ್ತಿರುವ ನಡುವೆಯೇ ಇದೀಗ ರಾಮಾಯಣದ ಸುದ್ದಿಯೊಂದು ಹೊರಬಿದ್ದಿದೆ. ರಾಮಾಯಣದ ಸೀತೆ ಪಾತ್ರದಲ್ಲಿ ಮಿಂಚಲಿದ್ದಾರೆ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ. ಏನಿದು ವಿಷ್ಯ?

ಉತ್ತಮ ಪ್ರಭಾವ ಬೀರುವ ಸಿನಿಮಾಗಳು
ಇದೀಗ ಒಂದೆಡೆ ಹೊಡೆ, ಬಡಿ, ಲಾಂಗು, ಮಚ್ಚು ಹಿಡಿದ ಹೀರೋಗಳೇ ರಕ್ತಪಾತ ಹರಿಸುವ ಸಿನಿಮಾಗಳು ಒಂದೆಡೆಯಾದರೆ, ರಾಮಾಯಣ, ಮಹಾಭಾರತದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಜನರ ಮೇಲೆ ಉತ್ತಮ ಪ್ರಭಾವ ಬೀರುವ ಸಿನಿಮಾಗಳು ಮತ್ತೊಂದೆಡೆ ಶುರುವಾಗಿದೆ. ಸೀರಿಯಲ್ಗಳಿಂದ ಹಿಡಿದು ಸಿನಿಮಾಗಳಲ್ಲಿ ಭಕ್ತಿ ಪ್ರಧಾನ, ಪೌರಾಣಿಕ ಹಿನ್ನೆಲೆಯಿರುವ ಕಥೆಗಳ ಟ್ರೆಂಡ್ ಶುರುವಾಗಿದೆ.
ಹಲವು ಭಾಷೆಗಳಲ್ಲಿ ರಾಮಾಯಣ
ಇದಾಗಲೇ ಬಹುತೇಕ ಭಾಷೆಗಳಲ್ಲಿ ರಾಮಾಯಣ ಸಿನಿಮಾ ಮಿಂಚಿದೆ. ಕೆಲವು ಸೂಪರ್ ಹಿಟ್ ಕೂಡ ಆಗಿವೆ. ಯಶ್ (Yash's Ramayana) ಅವರ ಅಭಿನಯದ ರಾಮಾಯಣ ಇನ್ನೇನು ತೆರೆ ಕಾಣಬೇಕಿದೆ. ಇದಕ್ಕಾಗಿ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಕೊನೆಗೆ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮಣಿಕಾ ವಿಶ್ವಕರ್ಮ ಅವರೂ ಸೀತೆಯಾಗಿ ಆಯ್ಕೆಯಾಗಿದ್ದಾರೆ.
ಅಯೋಧ್ಯಾ ರಾಮಲೀಲಾ
ಹೌದು. ಹಾಗೆಂದು ಮಣಿಕಾ ಅವರು ಸಾಯಿ ಪಲ್ಲವಿಯ ಬದಲಾಗಿ ನಟಿಸುತ್ತಿಲ್ಲ, ಅಥವಾ ಯಶ್ ನಟನೆಯ, ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾವೂ ಅಲ್ಲ. ಮಣಿಕಾ ಅವರು ಸೀತೆಯಾಗಿ ಆಯ್ಕೆಯಾಗಿರುವುದು ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ಅಯೋಧ್ಯಾ ರಾಮಲೀಲಾ ನಾಟಕ ಪ್ರದರ್ಶನದಲ್ಲಿ. ಈ ಕುರಿತು ಖುದ್ದು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ರಾಜಸ್ಥಾನದ ಮೂಲದ ಮಣಿಕಾ ಅವರು ಈ ಸಾಲಿನ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅವರಿಗೆ ಈಗ ರಾಮಾಯಣದ ಸೀತಾ ಪಾತ್ರಕ್ಕೆ ಆಫರ್ ಸಿಕ್ಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ:
'ಈ ಪಾತ್ರವನ್ನು ನಿರ್ವಹಿಸಲು ತಾನು ಧನ್ಯಳಾಗಿದ್ದೇನೆ. ಶ್ರೀ ರಾಮನ ಆಶೀರ್ವಾದದೊಂದಿಗೆ, ನಾನು ಅಂತಿಮವಾಗಿ ಅಯೋಧ್ಯೆಗೆ ಸೀತಾ ಪಾತ್ರದಲ್ಲಿ ಹೋಗುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ' ಎಂದು ಜಾಲತಾಣದಲ್ಲಿ ಮಣಿಕಾ ಬರೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿ ನಡೆಯಲಿರುವ ಮುಂಬರುವ ವಾರ್ಷಿಕ ನಾಟಕ ಕಾರ್ಯಕ್ರಮವಾದ 'ಅಯೋಧ್ಯಾ ರಾಮಲೀಲಾ'ದಲ್ಲಿ (Ayodhya Ramaleela) ಸೀತಾ ಪಾತ್ರದಲ್ಲಿ ನಟಿಸಲಿರುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆಗೆ ಭೇಟಿ
'ನಾನು ಬಹಳ ದಿನಗಳಿಂದ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಅದು ಕೆಲವು ಕಾರಣಗಳಿಂದ ವಿಳಂಬವಾಗುತ್ತಲೇ ಇತ್ತು. ಈಗ, ಭಗವಂತನ ಆಶೀರ್ವಾದಿಂದ ಈ ಅವಕಾಶ ನನಗೆ ಸಿಕ್ಕಿದೆ. ಶ್ರೀ ರಾಮನ ಆಶೀರ್ವಾದದೊಂದಿಗೆ, ನಾನು ಅಂತಿಮವಾಗಿ ಅಯೋಧ್ಯೆಗೆ ಸೀತಾ ಪಾತ್ರದಲ್ಲಿ ಹೋಗುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ತಾಯಿ ಸೀತಾ ಪಾತ್ರ
ಜೈ ಶ್ರೀ ರಾಮ್, ನಾನು ಅಯೋಧ್ಯೆಯ ರಾಮಲೀಲಾದಲ್ಲಿ ತಾಯಿ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದೇನೆ. ಭಗವಾನ್ ಶ್ರೀ ರಾಮನ ಆಶೀರ್ವಾದ, ಬಜರಂಗಬಲಿಯ ಆಶೀರ್ವಾದ ಮತ್ತು ಅಯೋಧ್ಯೆಯ ಜನರ ಆಶೀರ್ವಾದದೊಂದಿಗೆ ನಾನು ಈ ಪಾತ್ರವನ್ನು ನಿರ್ವಹಿಸುತ್ತಿರುವುದು ನನ್ನ ಅದೃಷ್ಟ. ಈ ವರ್ಷದ ಅಯೋಧ್ಯಾ ರಾಮಲೀಲಾದಲ್ಲಿ ನನ್ನ ಸೀತಾ ತಾಯಿಯ ಪಾತ್ರವನ್ನು ವೀಕ್ಷಿಸಲು ಮರೆಯಬೇಡಿ ಎಂದು ನಿಮ್ಮೆಲ್ಲರಲ್ಲಿ ವಿನಮ್ರ ವಿನಂತಿಯಾಗಿದೆ' ಎಂದು ಅವರು ತಿಳಿಸಿದ್ದಾರೆ.
ಶ್ರೀರಾಮನ ಆಶೀರ್ವಾದ
ಈ ವರ್ಷ ನನಗೆ ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಭಗವಾನ್ ಶ್ರೀ ರಾಮನ ಆಶೀರ್ವಾದದಿಂದ, ವಿಶ್ವದ ಅತಿದೊಡ್ಡ ರಾಮಲೀಲಾದಲ್ಲಿ ಮಾ ಸೀತಾ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ ಮತ್ತು ನಾನು ತುಂಬಾ ಉತ್ಸುಕಳಾಗಿದ್ದೇನೆ' ಎಂದು ಮಣಿಕಾ ತಿಳಿಸಿದ್ದಾರೆ. ರಾಜಸ್ಥಾನ ನಿವಾಸಿ ಮಾಣಿಕಾ ವಿಶ್ವಕರ್ಮ ಅವರು 2025 ರ ಮಿಸ್ ಯೂನಿವರ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ಧನ್ಯವಾದ ಎಂದು ಮಾಣಿಕಾ ಹೇಳಿದರು. ಅಯೋಧ್ಯಾ ರಾಮಲೀಲಾ ಸಂಘಟಕರಾದ ಸುಭಾಷ್ ಮಲಿಕ್ (ಬಾಬಿ) ಅವರಿಗೆ ಮಾಣಿಕಾ ಧನ್ಯವಾದ ಅರ್ಪಿಸಿದರು. ಈ ವರ್ಷದ ರಾಮಲೀಲಾದಲ್ಲಿ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಪ್ರಸಿದ್ಧ ಹೆಸರುಗಳು ಒಟ್ಟಿಗೆ ಸೇರುತ್ತವೆ ಎಂದು ಆಯೋಜಕರಾದ ಸುಭಾಷ್ ಮಲಿಕ್ ಮತ್ತು ಶುಭಂ ಮಲಿಕ್ ಹೇಳಿದರು.
ಧನ್ಯವಾದ ಸಲ್ಲಿಸಿದ ನಟಿ
ಈ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ಧನ್ಯವಾದ ಎಂದು ಮಾಣಿಕಾ ಹೇಳಿದರು. ಅಯೋಧ್ಯಾ ರಾಮಲೀಲಾ ಸಂಘಟಕರಾದ ಸುಭಾಷ್ ಮಲಿಕ್ (ಬಾಬಿ) ಅವರಿಗೆ ಮಾಣಿಕಾ ಧನ್ಯವಾದ ಅರ್ಪಿಸಿದರು. ಈ ವರ್ಷದ ರಾಮಲೀಲಾದಲ್ಲಿ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಪ್ರಸಿದ್ಧ ಹೆಸರುಗಳು ಒಟ್ಟಿಗೆ ಸೇರುತ್ತವೆ ಎಂದು ಆಯೋಜಕರಾದ ಸುಭಾಷ್ ಮಲಿಕ್ ಮತ್ತು ಶುಭಂ ಮಲಿಕ್ ಹೇಳಿದರು.