ಎಂಗೇಜ್ ಆದ 'ಮಿಲನ' ಧಾರಾವಾಹಿ ನಟ ಪ್ರಶಾಂತ್ ಭಾರದ್ವಾಜ್: ಹುಡುಗಿ ಯಾರು ಗೊತ್ತಾ?
ಪ್ರಶಾಂತ್ ಭಾರದ್ವಾಜ್ ಅವರು ವೈಷ್ಣವಿ ಮಧುಸೂದನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈಷ್ಣವಿ ಯಾರು ಎಂಬುದು ರಿವೀಲ್ ಆಗಬೇಕಿದೆ. ಅಷ್ಟೇ ಅಲ್ಲದೆ ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ.
ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಒಬ್ಬೊಬ್ಬರೇ ಕಲಾವಿದರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಸರದಿ ‘ಮಿಲನ’ ಸೀರಿಯಲ್ ನ ಹೀರೋ ಪ್ರಶಾಂತ್ ಭಾರದ್ವಾಜ್ ಅವರದ್ದು.
ಈ ನಟ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವೈಷ್ಣವಿ ಜೊತೆ ಪ್ರಶಾಂತ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹ್ಯಾಪಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ.
ಪ್ರಶಾಂತ್ ಭಾರದ್ವಾಜ್ ಅವರು ವೈಷ್ಣವಿ ಮಧುಸೂದನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈಷ್ಣವಿ ಯಾರು ಎಂಬುದು ರಿವೀಲ್ ಆಗಬೇಕಿದೆ. ಅಷ್ಟೇ ಅಲ್ಲದೆ ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಅಲ್ಲದೇ ಪ್ರಶಾಂತ್ ಜೊತೆ ಮದುವೆ ಆಗುತ್ತಿರುವ ಹುಡುಗಿಯ ಪರಿಚಯವನ್ನು ಕೇಳಿದ್ದಾರೆ.
ಒಲವೇ ಜೀವನ ಸಾಕ್ಷಾತ್ಕಾರ’, ‘ಆತ್ಮ ಬಂಧನ’, ‘ಯಜಮಾನಿ’ ಧಾರಾವಾಹಿ ಸೇರಿದಂತೆ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲೂ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ಭಾರದ್ವಾಜ್ ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಹೊಂದಿದ್ದು, ಅವರಿಗೆ ಈಗ ಪರಭಾಷೆಯಲ್ಲಿ ಕೂಡ ಬೇಡಿಕೆ ಇದ್ದು, ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ.
ಮಿಲನ ಸೀರಿಯಲ್ ಮೂಲ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಇದೀಗ ಹೊಸ ಬಾಳಿಗೆ ಕಾಲಿಡಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಮದುವೆ ಬಗ್ಗೆ ಅಪ್ ಡೇಟ್ ಹಂಚಿಕೊಳ್ಳಲಿದ್ದಾರೆ.