ವೈಟ್ ಡ್ರೆಸ್ನಲ್ಲಿ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್: ನಿನ್ನ ಮದುವೆ ಆಗೋನು ಪುಣ್ಯ ಮಾಡಿರ್ತಾನೆ ಎಂದ ಫ್ಯಾನ್ಸ್
ಸ್ಯಾಂಡಲ್ವುಡ್ನ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್ ಬಿಳಿ ಬಣ್ಣದ ಉಡುಗೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಖ್ಯಾತ ಛಾಯಾಗ್ರಾಹಕ ಸಂದೀಪ್ ಎಂ.ವಿ ಕ್ಯಾಮರಾದಲ್ಲಿ ನಟಿಯ ಸೌಂದರ್ಯ ಸೆರೆಯಾಗಿದೆ.
ಸ್ಯಾಂಡಲ್ವುಡ್ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಬಗೆ ಬಗೆಯ ಫೋಟೋಶೂಟ್ ಮೂಲಕ ಕನ್ನಡಿಗರಿಗೆ ಮತ್ತಷ್ಟು ಸನಿಹವಾಗಿದ್ದಾರೆ.
ಆಶಿಕಾ ಹಂಚಿಕೊಳ್ಳುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗನೆ ಜಾಗ ಗಿಟ್ಟಿಸಿಕೊಳ್ಳುತ್ತವೆ. ಇವರ ಹೊಸ ಚಿತ್ರಗಳಿಗಾಗಿಯೇ ಫ್ಯಾನ್ಸ್ ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ.
ಈ ಚೆಲುವೆ ತಮ್ಮ ವಿಭಿನ್ನ ಫ್ಯಾಷನ್ ಸೆನ್ಸ್ ಅನ್ನು ಫೋಟೋಗಳ ಮೂಲಕವೇ ರಿವೀಲ್ ಮಾಡುತ್ತಾರೆ. ಇನ್ಸ್ಟಾದಲ್ಲಿ 1.9 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಸಂಪಾದಿಸಿರುವ ಬೆಡಗಿ ಈವರೆಗೆ ಸುಮಾರು 700ಕ್ಕೂ ಹೆಚ್ಚು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಆಶಿಕಾ ರಂಗನಾಥ್ ಬಿಳಿ ಬಣ್ಣದ ಉಡುಗೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಖ್ಯಾತ ಛಾಯಾಗ್ರಾಹಕ ಸಂದೀಪ್ ಎಂ.ವಿ ಕ್ಯಾಮರಾದಲ್ಲಿ ನಟಿಯ ಸೌಂದರ್ಯ ಸೆರೆಯಾಗಿದೆ.
ವಿವಿಧ ಭಂಗಿಯಲ್ಲಿ ಕೂತು ಆಶಿಕಾ ರಂಗನಾಥ್ ತಮ್ಮ ಅಂದವನ್ನು ಪ್ರದರ್ಶಿಸಿದ್ದಾರೆ. ಇವರ ಬ್ಯೂಟಿಗೆ ಅಭಿಮಾನಿಗಳು ಲೈಕ್ಸ್ ಮೂಲಕವೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರಗಳನ್ನು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ನೋಡಿ ಮೆಚ್ಚಿಕೊಂಡಿದ್ದಾರೆ.
ನಾಗಾರ್ಜುನ ಅವರ ‘ನಾ ಸಾಮಿ ರಂಗ’ ಸಿನಿಮಾಗೆ ಆಶಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಫೋಟೋ ಶೂಟ್ ಕೂಡಾ ನಡೆದಿದೆ. ಆಶಿಕಾ ಈ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.