ಬಿಕಿನಿಯಲ್ಲಿ ಕಿರಿಕ್ ಬೆಡಗಿ, ಫೋಟೋ ನೋಡಿದ್ರೆ ಜೀವ ಝಲ್ ಅಂತದೆ, ಬಾಡಿ ಝುಮ್ ಅಂತದೆ!
ನಟಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ಎದೆಗೆ ಬೆಂಕಿ ಹಚ್ಚಿದ್ದು, ಮಾಲ್ಡೀವ್ಸ್ ಡೇಸ್ ಎಂಜಾಯ್ ಮಾಡ್ತಿದ್ದಾರೆ.
ಕನ್ನಡ ಚಿತ್ರರಂಗದ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸಂಯುಕ್ತಾ ಹೆಗ್ಡೆ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತ ಹೆಗ್ಡೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡದ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಟ್ರಾವೆಲಿಂಗ್ ಇಷ್ಟ ಪಡೋ ಸಂಯುಕ್ತಾ ಈ ಬಾರಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
ನಟಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ಎದೆಗೆ ಬೆಂಕಿ ಹಚ್ಚಿದ್ದು, ಮಾಲ್ಡೀವ್ಸ್ ಡೇಸ್ ಎಂಜಾಯ್ ಮಾಡ್ತಿದ್ದಾರೆ.
ಪಿಂಕ್ ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ಲುಕ್‌ನಲ್ಲಿ ಇದೇ ಮೊದಲೇನಲ್ಲ, ಈ ಹಿಂದೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸುದ್ದಿಯಾಗಿದ್ದರು.
ಸಂಯುಕ್ತಾ ಹೆಗ್ಡೆ ಫಿಟ್ನೆಸ್ ಫ್ರೀಕ್. ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ನಟನೆಯ ಜೊತೆಗೆ ಸಂಯುಕ್ತ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸಂಯುಕ್ತಾ ಹೆಗ್ಡೆ, ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ.
ಸಂಯುಕ್ತ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಮತ್ತೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ರಾಣಾ ಮತ್ತು ತುರ್ತು ನಿರ್ಗಮನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.