ಬಾತ್ ಟಬ್‌ನಲ್ಲಿ ಹಾಟ್ ಪೋಸ್ ಕೊಟ್ಟ ನಿಶ್ವಿಕಾ ನಾಯ್ಡು: ಆಣೆ ಮಾಡಿ ಹೇಳುತಿನಿ... ನೀವು ಸೂಪರ್ ರೀ ಎಂದ ಫ್ಯಾನ್ಸ್!
ಗುರು ಶಿಷ್ಯರು ಚಿತ್ರ ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಇದೀಗ ಎಲ್ಲರ ದಿಲ್ ಕದ್ದಿದ್ದಾರೆ. ತಮ್ಮ ನೃತ್ಯದಿಂದಲೇ ಎಲ್ಲರ ಮನದಲ್ಲಿರೋ ನಿಶ್ವಿಕಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.
ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಇದೀಗ ನಿಶ್ವಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ಬಾತ್ ಟಬ್ ಬಳಿ ಸೆಕ್ಸಿಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ನಿಶ್ವಿಕಾ ಬ್ಲ್ಯಾಕ್ ಡ್ರೆಸ್‌ನಲ್ಲಿ ಬಾತ್ ಟಬ್‌ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ನಿಶ್ವಿಕಾ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಸೆಕ್ಸಿ, ಹಾಟ್, ಬ್ಯೂಟಿಫುಲ್ ಅಂತೆಲ್ಲಾ ಕಾಮೆಂಟಿಸಿದ್ದು, ಲೈಕ್ಸ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿದ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಯುವ ನಟಿ. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿದ್ದಾರೆ.
ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಿಶ್ವಿಕಾರ ಮೊದಲ ಚಿತ್ರ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. ವಿಶೇಷವೆಂದರೆ ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು.
'ಗುರು ಶಿಷ್ಯರು' ಚಿತ್ರದ ಸೂಜಿ ಅಂದ್ರೆ ಕನ್ನಡಿಗರಿಗೆ ತುಂಬಾ ಇಷ್ಟ. ಬೋಲ್ಡ್ ಲುಕ್ ಮೂಲಕ ಸಿನಿ ಪ್ರೇಕ್ಷಕರಿಗೆ ನಿಶ್ವಿಕಾ ʼದಿಲ್ ಪಸಂದ್ʼ ತಿನಿಸಿದರು. ಸದ್ಯ ಯೋಗಾರಜ್ ಭಟ್ ನಿರ್ದೇಶನದ ಕರಟಕ ದಮನಕ ಸಿನಿಮಾದಲ್ಲಿ ಡಾ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.