ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ: ಬಿಗ್ ಬಾಸ್‌ಗೆ ಹೋಗ್ತೀರಾ ಎಂದು ಕೇಳಿದ ಫ್ಯಾನ್ಸ್?
ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟು ನಟಿ ಮೇಘಾ ಶೆಟ್ಟಿ ಮಿಂಚುತ್ತಿದ್ದು, ಮಾದಕ ನೋಟದ ಮೂಲಕ ಪಡ್ಡೆ ಹೈಕ್ಲ ಹೃದಯ ಕದಿಯುತ್ತಿದ್ದ ಮೇಘಾ ಶೆಟ್ಟಿ ಇದೀಗ ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಮನೆ ಮಾತಾಗಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ಬ್ಯೂಟಿಫುಲ್ ಫೋಟೋಗಳು ವೈರಲ್ ಆಗಿದೆ.
ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟು ನಟಿ ಮೇಘಾ ಶೆಟ್ಟಿ ಮಿಂಚುತ್ತಿದ್ದು, ಮಾದಕ ನೋಟದ ಮೂಲಕ ಪಡ್ಡೆ ಹೈಕ್ಲ ಹೃದಯ ಕದಿಯುತ್ತಿದ್ದ ಮೇಘಾ ಶೆಟ್ಟಿ ಇದೀಗ ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿದ ನೆಟ್ಟುಗರು ಸೂಪರ್, ನೈಸ್ ಎಂದು ಕಾಮೆಂಟ್ ಹಾಕಿದ್ದು, ಸದ್ಯ ಫೋಟೋಗಳು ಸಖತ್ ವೈರಲ್ ಆಗಿವೆ. ಚೆಂದವಾಗಿ ಕಾಣ್ತಾ ಇದೀರಿ, ಬಿಗ್ ಬಾಸ್‌ಗೆ ಹೋಗ್ತೀರಾ ಎಂದು ಫ್ಯಾನ್ಸ್ ಹೇಳಿದ್ದಾರೆ.
ಗ್ರೀನ್ ಲಂಗ, ಬ್ಲೂ ಕಲರ್ ದಾವಣಿಯಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಬಳೆ, ಕಿವಿಯೋಲೆ ಹಾಕಿದ್ದಾರೆ. ಲಂಗ ದಾವಣಿಯಲ್ಲಿ ಮೇಘಾ ಶೆಟ್ಟಿ ಫೋಟೋಗೆ ಭರ್ಜರಿ ಪೋಸ್ ನೀಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದು, ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಅಲ್ಲದೇ ವಿಭಿನ್ನ ರೂಪದಲ್ಲಿ ಫ್ಯಾನ್ಸ್ ಹೃದಯ ಕೂಡಾ ಕದಿಯುತ್ತಿದ್ದಾರೆ.