ಕೆಂಪುಡುಗೆಯಲ್ಲಿ ನವವಧು ಹರ್ಷಿಕಾ: ಫ್ಯಾಷನ್ ಡ್ರೆಸ್ ಧರಿಸಿದ್ದರೂ ಮಾಂಗಲ್ಯ ತೆಗೆಯದ ನಟಿಗೆ ಭೇಷ್ ಎಂದ ಫ್ಯಾನ್ಸ್!
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ-ಭುವನ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ರೆಡ್ ಡ್ರೆಸ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.
ಮದುವೆಯಾದ ಬಳಿಕ ವೆಕೇಷನ್‌ಗಾಗಿ ಹರ್ಷಿಕಾ ದಂಪತಿ ಅಮೆರಿಕಾದಲ್ಲಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ರ‍್ಯಾಂಪ್ ವಾಕ್ ಮಾಡಿದ ಬಳಿಕ ಕೆಲ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.
ರೆಡ್ ಕಲರ್ ಉಡುಗೆಯಲ್ಲಿ ಹರ್ಷಿಕಾ ಗ್ಲ್ಯಾಮರಸ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಫ್ಯಾಷನ್ ಡ್ರೆಸ್ ಧರಿಸಿದ್ದರೂ ಕೂಡ ತನ್ನ ಮಾಂಗಲ್ಯವನ್ನ ತೆಗೆಯದೇ ಫೋಟೋಗೆ ಪೋಸ್ ಕೊಟ್ಟಿರೋದು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ರೆಡ್ ಡ್ರೆಸ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಸ್ಟೈಲಿಶ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲೈಕ್ಸ್‌ಗಳ ಸುರಿಮಳೆಯಾಗಿದೆ.
ಫೋಟೋಗಳನ್ನು ನಟಿ ಹರ್ಷಿಕಾ ಪೂಣಚ್ಚ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಥಾಕ್(ಮಾಂಗಲ್ಯ ಸರ) ಗೆ ಶೂಟ್ ಆಗುವ ರೀತಿ ಡಿಸೈನರ್ ವೇರ್ ಸಿದ್ಧಪಡಿಸಿದ ಫ್ಯಾಷನ್ ಡಿಸೈನರ್‌ಗೆ ನಟಿ ಥ್ಯಾಂಕ್ಸ್ ಹೇಳಿದ್ದಾರೆ.
ಆಗಸ್ಟ್ 24ರಂದು ಮದುವೆಯಾಗುವ ಮೂಲಕ ಫ್ಯಾನ್ಸ್‌ಗೆ ಹರ್ಷಿಕಾ-ಭುವನ್ ಗುಡ್ ನ್ಯೂಸ್ ನೀಡಿದ್ದರು. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದಾರೆ.
ಭುವನ್ ನಟನೆ- ನಿರ್ದೇಶನದ ಹೊಸ ಸಿನಿಮಾಗೆ ಹರ್ಷಿಕಾ ಪೂಣಚ್ಚ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಮಾಲಾಶ್ರೀಗೆ ಜೊತೆಯಾಗಿ ‘ಮಾರಕಾಸ್ತ್ರ’ ಚಿತ್ರಕ್ಕೆ ಹರ್ಷಿಕಾ ಸಾಥ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ.