ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಸಂಪತ್ತು ಇಷ್ಟೊಂದಾ?
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ED ವಿಚಾರಣೆಗೆ ಬರಲು ಸಮನ್ಸ್ ಜಾರಿ ಮಾಡಿದೆ. ಆನ್‌ಲೈನ್ ಬೆಟ್ಟಿಂಗ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನೋಟಿಸ್ ನೀಡಲಾಗಿದೆ. ನಾವಿಂದು ಶಿಖರ್ ಧವನ್ ಆಸ್ತಿ, ಸಂಪತ್ತು ಎಷ್ಟು ಎನ್ನುವುದನ್ನು ನೋಡೋಣ.

ಮಾಜಿ ಭಾರತೀಯ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರನ್ನು ಆನ್‌ಲೈನ್ ಬೆಟ್ಟಿಂಗ್ 1xBet ನೊಂದಿಗೆ ಗುರುತಿಸಿಕೊಂಡ ಸಂಬಂಧ ED ವಿಚಾರಣೆಗೆ ನೋಟಿಸ್. ಶಿಖರ್ ಧವನ್ ಅವರ ನಿವ್ವಳ ಮೌಲ್ಯ, ಕಾರುಗಳು ಮತ್ತು ವಾಚ್ ಸಂಗ್ರಹಗಳನ್ನು ನೋಡೋಣ.
ಮಾಜಿ ಭಾರತೀಯ ಆರಂಭಿಕ ಆಟಗಾರನನ್ನು BCCI ಒಪ್ಪಂದದಲ್ಲಿ C ದರ್ಜೆಗೆ ಸೇರಿಸಲಾಗಿತ್ತು, ಇದು ಅವರಿಗೆ ವಾರ್ಷಿಕ 1 ಕೋಟಿ ಗಳಿಸುತ್ತಿದ್ದರು. ಧವನ್ IPL ನಲ್ಲಿ ಒಟ್ಟು 91 ಕೋಟಿ ರುಪಾಯಿ ಗಳಿಸಿದ್ದಾರೆ.
ಶಿಖರ್ ಧವನ್ ಹಲವಾರು ವ್ಯಾಪಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಬಹು ಆಸ್ತಿಗಳನ್ನು ಹೊಂದಿದ್ದಾರೆ. Yashaa Global Capital, Da One Sports, ಮತ್ತು Shikhar Dhawan Foundation ನ ಸ್ಥಾಪಕರಾಗಿದ್ದಾರೆ.
ಶಿಖರ್ ಧವನ್ ಭಾರತ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರು. 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಧವನ್, ಎಲ್ಲಾ ಮಾದರಿಗಳಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.