MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕೇವಲ ಒಂದೇ ಪೋಸ್ಟ್‌ನಿಂದ ಶಕೀಬ್ ಅಲ್ ಹಸನ್ ವೃತ್ತಿಬದುಕು ದುರಂತ ಅಂತ್ಯ! ಸ್ಟಾರ್ ಆಲ್ರೌಂಡರ್ ಕ್ರಿಕೆಟ್‌ನಿಂದ ಬ್ಯಾನ್

ಕೇವಲ ಒಂದೇ ಪೋಸ್ಟ್‌ನಿಂದ ಶಕೀಬ್ ಅಲ್ ಹಸನ್ ವೃತ್ತಿಬದುಕು ದುರಂತ ಅಂತ್ಯ! ಸ್ಟಾರ್ ಆಲ್ರೌಂಡರ್ ಕ್ರಿಕೆಟ್‌ನಿಂದ ಬ್ಯಾನ್

ಢಾಕಾ: ಬಾಂಗ್ಲಾದೇಶ ಪರ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದ ಅನುಭವಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಕ್ರಿಕೆಟ್ ವೃತ್ತಿ ಬದುಕು ದುರಂತ ಅಂತ್ಯ ಕಂಡಿದೆ. ಶಕೀಬ್ ಮಾಡಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್‌, ಅವರು ಇನ್ನು ಯಾವತ್ತೂ ಬಾಂಗ್ಲಾದೇಶ ಜೆರ್ಸಿ ತೊಡದಂತೆ ಮಾಡಿದೆ.

2 Min read
Author : Naveen Kodase
Published : Oct 01 2025, 12:11 PM IST
Share this Photo Gallery
  • FB
  • TW
  • Linkdin
  • Whatsapp
19
ಶಕೀಬ್ ಅಲ್ ಹಸನ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯ
Image Credit : Getty

ಶಕೀಬ್ ಅಲ್ ಹಸನ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯ

ಬಾಂಗ್ಲಾದೇಶದ ದಿಗ್ಗಜ ಆಲ್ರೌಂಡರ್, ಮಾಜಿ ನಾಯಕ ಶಕೀಬ್ ಅಲ್ ಹಸನ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯವಾಗಿದೆ. ಅವರು ಇನ್ನು ಮುಂದೆ ಬಾಂಗ್ಲಾದೇಶ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕನಸು ನುಚ್ಚುನೂರಾಗಿದೆ.

29
ಶಕೀಬ್‌ಗೆ ಬಿಗ್‌ ಶಾಕ್ ಕೊಟ್ಟ ಆಸಿಫ್!
Image Credit : Getty

ಶಕೀಬ್‌ಗೆ ಬಿಗ್‌ ಶಾಕ್ ಕೊಟ್ಟ ಆಸಿಫ್!

ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ಮೊಹಮ್ಮದ್ ಈ ಕುರಿತಂತೆ ಅಧಿಕೃತವಾಗಿ ಸ್ಪಷ್ಟಪಡಿಸಿದ್ದು, ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್, ಇನ್ನು ಮುಂದೆ ಯಾವತ್ತೂ ಬಾಂಗ್ಲಾದೇಶ ಪರ ಆಡುವುದಿಲ್ಲ ಎಂದು ಘೋಷಿಸಿದ್ದಾರೆ.

Related Articles

Related image1
ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?
Related image2
ದಯವಿಟ್ಟು ಪಾಕ್ ಎದುರಿನ ಗೆಲುವನ್ನು 'ಆಪರೇಷನ್ ತಿಲಕ್' ಎನ್ನಬೇಡಿ! ಏಷ್ಯಾಕಪ್ ಹೀರೋ ಹೀಗಂದಿದ್ದೇಕೆ?
39
ಅವಾಮಿ ಲೀಗ್ ಪಕ್ಷದ ಸಂಸದ ಶಕೀಬ್
Image Credit : Getty

ಅವಾಮಿ ಲೀಗ್ ಪಕ್ಷದ ಸಂಸದ ಶಕೀಬ್

ಶಕೀಬ್ ಅಲ್ ಹಸನ್ ಕಳೆದ ವರ್ಷದ ಜನವರಿಯಿಂದ ಆಗಸ್ಟ್‌ವರೆಗೆ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಲ್ಲಿ ಶಕೀಬ್ ಪದಚ್ಯುತಗೊಂಡಿದ್ದರು.

49
ಕಳೆದ 12 ತಿಂಗಳಿನಿಂದ ಶಕೀಬ್‌ಗಿಲ್ಲ ಬಾಂಗ್ಲಾ ತಂಡದಲ್ಲಿ ಸ್ಥಾನ
Image Credit : Instagram

ಕಳೆದ 12 ತಿಂಗಳಿನಿಂದ ಶಕೀಬ್‌ಗಿಲ್ಲ ಬಾಂಗ್ಲಾ ತಂಡದಲ್ಲಿ ಸ್ಥಾನ

ಇದಾದ ನಂತರ ಕಳೆದ 12 ತಿಂಗಳಿನಿಂದ ಶಕೀಬ್ ಅಲ್ ಹಸನ್, ಬಾಂಗ್ಲಾದೇಶ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ. 

59
ಏಷ್ಯಾಕಪ್‌ಗೂ ಸಿಗಲಿಲ್ಲ ಶಕೀಬ್‌ಗೆ ಸ್ಥಾನ
Image Credit : Getty

ಏಷ್ಯಾಕಪ್‌ಗೂ ಸಿಗಲಿಲ್ಲ ಶಕೀಬ್‌ಗೆ ಸ್ಥಾನ

ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಟೂರ್ನಿಗೂ ಶಕೀಬ್ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಫ್ರಾಂಚೈಸಿ ಲೀಗ್ ಟಿ20 ಟೂರ್ನಿಯಲ್ಲಿ ಶಕೀಬ್ ಆಡುತ್ತಿದ್ದಾರೆ.

69
ಶೇಖ್ ಹಸೀನಾಗೆ ಶುಭಕೋರಿದ್ದೆ ತಪ್ಪಾಯ್ತಾ?
Image Credit : Getty

ಶೇಖ್ ಹಸೀನಾಗೆ ಶುಭಕೋರಿದ್ದೆ ತಪ್ಪಾಯ್ತಾ?

ಭಾನುವಾರ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಹುಟ್ಟುಹಬ್ಬದ ಸಂದೇಶವನ್ನು ಶಕೀಬ್ ಅಲ್ ಹಸನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ಮೊಹಮ್ಮದ್ ಈ ಘೋಷಣೆ ಮಾಡಿದ್ದಾರೆ.

79
ಶಕೀಬ್ ಹಾಗೂ ಆಸಿಫ್ ನಡುವೆ ಮುಸುಕಿನ ಗುದ್ದಾಟ
Image Credit : our own

ಶಕೀಬ್ ಹಾಗೂ ಆಸಿಫ್ ನಡುವೆ ಮುಸುಕಿನ ಗುದ್ದಾಟ

ಶಕೀಬ್ ಹಾಗೂ ಆಸಿಫ್ ನಡುವೆ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಒಬ್ಬ ವ್ಯಕ್ತಿಗೆ ಪುನರ್ವಸತಿ ಕಲ್ಪಿಸದಿದ್ದಕ್ಕಾಗಿ ನೀವೆಲ್ಲರೂ ನನ್ನನ್ನು ತುಂಬಾ ನಿಂದಿಸಿದ್ದೀರಿ. ಆದರೆ ನಾನು ಹೇಳಿದ್ದು ಸರಿ. ಚರ್ಚೆ ಅಂತ್ಯ." ಎಂದು ಆಸಿಫ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

89
ತಿರುಗೇಟು ಕೊಟ್ಟ ಶಕೀಬ್
Image Credit : Getty

ತಿರುಗೇಟು ಕೊಟ್ಟ ಶಕೀಬ್

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಶಕೀಬ್, 'ಯಾರೋ ಒಬ್ಬರು ಕೊನೆಗೂ ಒಪ್ಪಿಕೊಂಡಿದ್ದಾರೆ, ಅವರ ಕಾರಣದಿಂದಾಗಿ ನಾನು ಮತ್ತೆ ಎಂದಿಗೂ ಬಾಂಗ್ಲಾದೇಶದ ಜೆರ್ಸಿಯನ್ನು ಧರಿಸಲು ಸಾಧ್ಯವಿಲ್ಲ, ಅವರ ಕಾರಣದಿಂದಾಗಿ ನಾನು ಮತ್ತೆ ಬಾಂಗ್ಲಾದೇಶಕ್ಕಾಗಿ ಆಡಲು ಸಾಧ್ಯವಿಲ್ಲ. ಬಹುಶಃ ನಾನು ಒಂದು ದಿನ ನನ್ನ ತಾಯ್ನಾಡಿಗೆ ಹಿಂತಿರುಗುತ್ತೇನೆ. ಲವ್ ಯು ಬಾಂಗ್ಲಾದೇಶ' ಎಂದು ಕಮೆಂಟ್ ಮಾಡಿದ್ದಾರೆ.

99
ಶಕೀಬ್‌ಗೆ ಆಸಿಫ್ ಶಾಕ್‌
Image Credit : Getty

ಶಕೀಬ್‌ಗೆ ಆಸಿಫ್ ಶಾಕ್‌

ಶಕೀಬ್ ಅವರನ್ನು ಮತ್ತೆ ಆಯ್ಕೆ ಮಾಡದಂತೆ ಬಿಸಿಬಿಗೆ ನಿರ್ದೇಶನ ನೀಡುವುದಾಗಿ ಆಸಿಫ್ ದೃಢಪಡಿಸಿದ್ದಾರೆ ಎಂದು ಢಾಕಾ ಸುದ್ದಿವಾಹಿನಿ ವರದಿ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಬಾಂಗ್ಲಾದೇಶ
ಕ್ರೀಡೆಗಳು
Latest Videos
Recommended Stories
Recommended image1
ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ್ರಾ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್?
Recommended image2
ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ!
Recommended image3
ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ?
Related Stories
Recommended image1
ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?
Recommended image2
ದಯವಿಟ್ಟು ಪಾಕ್ ಎದುರಿನ ಗೆಲುವನ್ನು 'ಆಪರೇಷನ್ ತಿಲಕ್' ಎನ್ನಬೇಡಿ! ಏಷ್ಯಾಕಪ್ ಹೀರೋ ಹೀಗಂದಿದ್ದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved