- Home
- Sports
- Cricket
- Big Bash League: ಈ ತಂಡದ ಪರ ಕಣಕ್ಕಿಳಿಯಲು ರೆಡಿಯಾದ ರವಿಚಂದ್ರನ್ ಅಶ್ವಿನ್! ಅಧಿಕೃತ ಘೋಷಣೆಯೊಂದೇ ಬಾಕಿ
Big Bash League: ಈ ತಂಡದ ಪರ ಕಣಕ್ಕಿಳಿಯಲು ರೆಡಿಯಾದ ರವಿಚಂದ್ರನ್ ಅಶ್ವಿನ್! ಅಧಿಕೃತ ಘೋಷಣೆಯೊಂದೇ ಬಾಕಿ
ಬೆಂಗಳೂರು: ಇತ್ತೀಚೆಗಷ್ಟೇ ಐಪಿಎಲ್‌ಗೆ ವಿದಾಯ ಹೇಳಿ ತಾವು ಜಾಗತಿಕ ಮಟ್ಟದ ಟೂರ್ನಿಯಲ್ಲಿ ಆಡಲು ರೆಡಿ ಎನ್ನುವ ಸ್ಷಷ್ಟ ಸಂದೇಶ ನೀಡಿದ್ದ ರವಿಚಂದ್ರನ್ ಅಶ್ವಿನ್, ಇದೀಗ ಮುಂಬರುವ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ.

ಹೊಸ ಸಾಹಸಕ್ಕೆ ಮುಂದಾದ ಅಶ್ವಿನ್
ಭಾರತದ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇದೀಗ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಈ ಮೂಲಕ ಭಾರತದ ಲೆಜೆಂಡರಿ ಆಟಗಾರ ಜಾಗತಿಕ ಮಟ್ಟದ ಟಿ20 ಲೀಗ್‌ನಲ್ಲಿ ತಮ್ಮ ಹೆಜ್ಜೆಗುರುತು ದಾಖಲಿಸಲು ರೆಡಿಯಾಗಿದ್ದಾರೆ.
ಸಿಡ್ನಿ ಥಂಡರ್ಸ್ ಕೂಡಿಕೊಳ್ಳಲಿರುವ ಅಶ್ವಿನ್
ಹೌದು, 39 ವರ್ಷದ ರವಿಚಂದ್ರನ್ ಅಶ್ವಿನ್ ಮುಂಬರುವ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಥಂಡರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಈ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು 'ಫಾಕ್ಸ್ ಸ್ಪೋರ್ಟ್ಸ್' ವರದಿ ಮಾಡಿದೆ.
ಬಿಗ್‌ಬ್ಯಾಶ್ ಆಫರ್
ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟೋಡ್ ಗ್ರೀನ್‌ಬರ್ಗ್, ಈ ತಿಂಗಳ ಆರಂಭದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಭೇಟಿ ಮಾಡಿ, ಬಿಗ್‌ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದಾರೆ ಎಂದು ವರದಿಯಾಗಿದೆ.
ILT20 ಲೀಗ್ ಹರಾಜಿಗೆ ಹೆಸರು ನೋಂದಾಯಿಸಿರುವ ಅಶ್ವಿನ್
ರವಿಚಂದ್ರನ್ ಅಶ್ವಿನ್ ಈಗಾಗಲೇ ILT20 ಲೀಗ್ ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ಈ ಟೂರ್ನಿಯು ಜನವರಿ 04ಕ್ಕೆ ಕೊನೆಯಾಗಲಿದೆ. ಇನ್ನು ಬಿಗ್‌ಬ್ಯಾಶ್ ಲೀಗ್ ಟೂರ್ನಿಯು ಮುಂಬರುವ ಡಿಸೆಂಬರ್ 14ರಿಂದ ಜನವರಿ 18ರವರೆಗೆ ನಡೆಯಲಿದೆ.
ದ್ವಿತಿಯಾರ್ಧದಲ್ಲಿ ಸಿಡ್ನಿ ಥಂಡರ್ಸ್ ಕೂಡಿಕೊಳ್ಳುವ ಸಾಧ್ಯತೆ
ಹೀಗಾಗಿ ರವಿಚಂದ್ರನ್ ಅಶ್ವಿನ್, ಮುಂಬರುವ ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ದ್ವಿತಿಯಾರ್ಧದಲ್ಲಿ ಸಿಡ್ನಿ ಥಂಡರ್ಸ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಿಸಿಸಿಐ ಕಠಿಣ ರೂಲ್ಸ್
ಟೀಂ ಇಂಡಿಯಾ ಆಟಗಾರರು, ಐಪಿಎಲ್ ಆಡುವ ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರರು ವಿದೇಶಿ ಟೂರ್ನಿ ಆಡಬಹುದಾಗಿದೆ.
ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ
ಅನಿಲ್ ಕುಂಬ್ಳೆ(619) ಬಳಿಕ ರವಿಚಂದ್ರನ್ ಅಶ್ವಿನ್ ಭಾರತ ಟೆಸ್ಟ್ ಕ್ರಿಕೆಟ್ ಕಂಡ ಎರಡನೇ ಅತ್ಯುತ್ತಮ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಅಶ್ವಿನ್ 537 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಗರಿಷ್ಠ ಟೆಸ್ಟ್ ವಿಕೆಟ್ ಕಬಳಿಸಿದ ಬೌಲರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಐಪಿಎಲ್‌ನಲ್ಲೂ ಸ್ಟಾರ್
ಇನ್ನು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟಾರೆ 221 ಪಂದ್ಯಗಳಲ್ಲಿ ಕಣಕ್ಕಿಳಿದು 187 ವಿಕೆಟ್ ಕಬಳಿಸಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಒಂದು ಅರ್ಧಶತಕ ಸಹಿತ 833 ರನ್ ಬಾರಿಸಿದ್ದಾರೆ.