- Home
- Sports
- Cricket
- ಐಪಿಎಲ್‌ನಿಂದ ರವಿಚಂದ್ರನ್ ಅಶ್ವಿನ್ ಗಳಿಸಿದ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಐಪಿಎಲ್‌ನಿಂದ ರವಿಚಂದ್ರನ್ ಅಶ್ವಿನ್ ಗಳಿಸಿದ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರು: ಐಪಿಎಲ್‌ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್, ಐಪಿಎಲ್‌ಗೂ ವಿದಾಯ ಘೋಷಿಸಿದ್ದಾರೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಗಳಿಸಿದ ಒಟ್ಟು ಮೊತ್ತವೆಷ್ಟು ನೋಡೋಣ ಬನ್ನಿ.

ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 12 ರುಪಾಯಿಗೆ ಸಿಎಸ್‌ಕೆ ಪಾಲಾದರು.
ಇಲ್ಲಿಂದ 2010ರವರೆಗೂ ಅಶ್ವಿನ್, ಸಿಎಸ್‌ಕೆ ಫ್ರಾಂಚೈಸಿಯಿಂದ ಪ್ರತಿ ಸೀಸನ್‌ನಲ್ಲಿ 12 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಿದ್ದರು.
ಮೂರು ವರ್ಷಗಳಲ್ಲಿ ಅದ್ಭುತ ಆಲ್ರೌಂಡರ್ ಆಗಿ ರೂಪುಗೊಂಡ ಅಶ್ವಿನ್ ಅವರನ್ನು, 2011ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಫ್ರಾಂಚೈಸಿಯು 3.91 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತು.
ಇನ್ನು 2014ರ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅಶ್ವಿನ್‌ಗೆ 7.5 ಕೋಟಿ ರುಪಾಯಿ ನೀಡಿತು. ಇನ್ನು 2016-17ರಲ್ಲಿಯೂ ಇದೇ ಮೊತ್ತಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದರು.
2018ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 7.6 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. 2019ರ ಐಪಿಎಲ್‌ವರೆಗೂ ಅಶ್ವಿನ್ ಪಂಜಾಬ್ ತಂಡದಲ್ಲಿದ್ದರು.
2020ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 7.6 ಕೋಟಿ ನೀಡಿ ಅಶ್ವಿನ್ ಅವರನ್ನು ಕರೆತಂದಿತು. 2021ರ ವರೆಗೆ ಅಶ್ವಿನ್ ಡೆಲ್ಲಿ ತಂಡದ ಜತೆಗಿದ್ದರು.
ಇನ್ನು 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 5 ಕೋಟಿ ರುಪಾಯಿ ನೀಡಿ ಅಶ್ವಿನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು.
ಇದಾದ ಬಳಿಕ 2025ರ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 9.75 ಕೋಟಿ ರುಪಾಯಿ ನೀಡಿ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಕಳೆದ 18 ಸೀಸನ್ ಐಪಿಎಲ್‌ನಿಂದ ರವಿಚಂದ್ರನ್ ಅಶ್ವಿನ್ ಬರೋಬ್ಬರಿ 97.24 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.