- Home
- Sports
- Cricket
- ದ್ರಾವಿಡ್ ರಾಜಸ್ಥಾನ ರಾಯಲ್ಸ್‌ನಿಂದ ಹೊರಬೀಳಲು ಸಂಜು ಸ್ಯಾಮ್ಸನ್ ಕಾರಣ? ಇಂಟ್ರೆಸ್ಟಿಂಗ್ ಡೀಟೈಲ್ಸ್
ದ್ರಾವಿಡ್ ರಾಜಸ್ಥಾನ ರಾಯಲ್ಸ್‌ನಿಂದ ಹೊರಬೀಳಲು ಸಂಜು ಸ್ಯಾಮ್ಸನ್ ಕಾರಣ? ಇಂಟ್ರೆಸ್ಟಿಂಗ್ ಡೀಟೈಲ್ಸ್
ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಪದವಿಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಸಂಜು ಸ್ಯಾಮ್ಸನ್ ಕಾರಣ ಅಂತ ಹೇಳಲಾಗ್ತಿದೆ.

ರಾಯಲ್ಸ್‌ಗೆ ದ್ರಾವಿಡ್ ವಿದಾಯ
ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ. ಒಂದೇ ಸೀಸನ್ ನಂತರ ಅವರು ತಂಡ ಬಿಟ್ಟಿದ್ದಾರೆ. ಮೊದಲು ಆರ್‌ಆರ್‌ಗೆ ಆಟಗಾರ, ನಾಯಕ, ಮಾರ್ಗದರ್ಶಕರಾಗಿದ್ದರು.
ಐಪಿಎಲ್ 2025ರ ದುರ್ಬಲ ಪ್ರದರ್ಶನ ಕಾರಣನಾ?
2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ದ್ರಾವಿಡ್ ಕೋಚಿಂಗ್‌ನಲ್ಲಿ ತಂಡ 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿತ್ತು. ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು. ಭಾರತ ತಂಡದ ಕೋಚ್ ಆಗಿ ಉತ್ತಮ ಫಲಿತಾಂಶ ತಂದಿದ್ದ ದ್ರಾವಿಡ್‌ರಿಂದ ಆರ್‌ಆರ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು.
ರಾಜಸ್ಥಾನ ರಾಯಲ್ಸ್ ಜೊತೆ ದ್ರಾವಿಡ್ ಪಯಣ
ಸ್ಯಾಮ್ಸನ್ ಕಾರಣನಾ ದ್ರಾವಿಡ್ ರಾಜೀನಾಮೆ?
ಆಟಗಾರರ ಉಳಿಸಿಕೊಳ್ಳುವಿಕೆಯಲ್ಲಿ ದ್ರಾವಿಡ್ ಪಾತ್ರ
2025ರ ಸೀಸನ್‌ಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು. ಸ್ಯಾಮ್ಸನ್, ಜೈಸ್ವಾಲ್, ಜುರೆಲ್, ಪರಾಗ್, ಹೆಟ್ಮೇಯರ್‌ರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರದಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಆದರೆ ಗಾಯಗಳು ಮತ್ತು ಸೋಲುಗಳು ತಂಡದ ಮೇಲೆ ಪರಿಣಾಮ ಬೀರಿದವು.
ಬಟ್ಲರ್-ಚಹಲ್ ಕೈಬಿಟ್ಟಿದ್ದ ದ್ರಾವಿಡ್
ರಾಜಸ್ಥಾನ ರಾಯಲ್ಸ್‌ನ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಜೋಸ್ ಬಟ್ಲರ್, ಚಾಣಾಕ್ಷ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನನ್ನು 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ದ್ರಾವಿಡ್ ನೇತೃತ್ವದ ಟೀಂ ಮ್ಯಾನೇಜ್‌ಮೆಂಟ್ ತಂಡದಿಂದ ಕೈಬಿಟ್ಟಿದ್ದು ಸಂಜು ಮುನಿಸಿಗೆ ಕಾರಣವಾಗಿತ್ತು ಎನ್ನಲಾಗಿದೆ