ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಮೇಜರ್ ಚೇಂಜ್? ಸುಳಿವು ಬಿಟ್ಟುಕೊಟ್ಟ ಗೌತಮ್ ಗಂಭೀರ್!
2026ರ ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಕೋಚ್ ಗೌತಮ್ ಗಂಭೀರ್ ಸಿದ್ಧತೆ ನಡೆಸುತ್ತಿದ್ದಾರೆ. ಮೂರು ಮಾದರಿಗಳಿಗೂ ಒಬ್ಬರೇ ನಾಯಕ ಇರಬೇಕೆಂಬ ಯೋಜನೆಯೂ ಇದೆ.

2026ರ ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾ ಟಿ20 ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಹೆಡ್‌ಕೋಚ್ ಗೌತಮ್ ಗಂಭೀರ್ ಸಿದ್ಧತೆ ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ನಾಯಕ, ಮೆಂಟರ್ ಆಗಿ ಕೆಲಸ ಮಾಡಿದ ಅನುಭವದಿಂದ ಗಂಭೀರ್ ಭಾರತ ಟಿ20 ತಂಡವನ್ನು ಪುನರ್ರಚಿಸಲು ಬಯಸುತ್ತಿದ್ದಾರೆ ಎನ್ನಲಾಗಿದೆ. ಏಷ್ಯಾಕಪ್ ಮತ್ತು ನಂತರದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ಹೊಸ ನೀತಿಯಂತೆ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈಗ ಭಾರತ ಕ್ರಿಕೆಟ್ ವಲಯದಲ್ಲಿ ಇದೇ ಚರ್ಚೆಯ ವಿಷಯವಾಗಿದೆ.
ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾದಗಿನಿಂದ ಮೂರು ಮಾದರಿಗಳಿಗೂ ಒಬ್ಬರೇ ನಾಯಕ ಇರಬೇಕೆಂಬ ನೀತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಗಿಲ್ ಟೆಸ್ಟ್ ನಾಯಕರಾಗಿದ್ದರೆ, ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿದ್ದಾರೆ. ಏಷ್ಯಾಕಪ್ ನಂತರ ಶುಭ್‌ಮನ್ ಗಿಲ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಹೀಗಾದರೆ ಸೂರ್ಯಕುಮಾರ್ ಯಾದವ್ ಸ್ಥಾನದಲ್ಲಿ ಗಿಲ್ ಹೊಸ ನಾಯಕತ್ವ ವಹಿಸಿಕೊಳ್ಳಬಹುದು.
ಭಾರತ ತಂಡದಲ್ಲಿ ಇನ್ನು ಮುಂದೆ ಪ್ರತ್ಯೇಕ ಫಿನಿಷರ್ ಪಾತ್ರ ಇರುವುದಿಲ್ಲ ಎನ್ನಲಾಗಿದೆ. ಪ್ರತಿಯೊಬ್ಬ ಆಟಗಾರನಿಗೂ ಅವರ ಪ್ರತಿಭೆಗೆ ಅನುಗುಣವಾಗಿ ಪಾತ್ರ ನೀಡಬೇಕೆಂದು ಗಂಭೀರ್ ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ವಲಯಗಳು ತಿಳಿಸಿವೆ. ಶಿವಂ ದುಬೆ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಕೇವಲ ಫಿನಿಷರ್ ಪಾತ್ರಕ್ಕೆ ಸೀಮಿತಗೊಳಿಸದೆ, ಅಗತ್ಯವಿದ್ದರೆ ಮೊದಲೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಏಷ್ಯಾಕಪ್‌ನಿಂದಲೇ ಈ ಬದಲಾವಣೆಗಳು ಆರಂಭವಾಗಬಹುದು.
ಕಳೆದ ವರ್ಷ ವಿಶ್ವಕಪ್ ನಂತರ ರೋಹಿತ್ ಶರ್ಮಾ ಟಿ20ಯಿಂದ ನಿವೃತ್ತಿ ಹೊಂದಿದ ನಂತರ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ಸಿಕ್ಕಿತು. ಅವರ ನಾಯಕತ್ವದಲ್ಲಿ ಭಾರತ 22 ಪಂದ್ಯಗಳಲ್ಲಿ 17 ಗೆಲುವು ಸಾಧಿಸಿದೆ. ಆದರೆ, ಎಲ್ಲಾ ಮಾದರಿಗಳಿಗೂ ಒಬ್ಬರೇ ನಾಯಕ ಎಂಬ ನೀತಿ ಜಾರಿಯಾದರೆ, ಕೇವಲ ಟಿ20ಯಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ.
ಟಿ20 ಮಾದರಿಗೆ ಸೂಕ್ತವಾದ ಆಟಗಾರರನ್ನು ಗುರುತಿಸಿ ಅವರಿಗೆ ನಿರಂತರ ಅವಕಾಶ ನೀಡಬೇಕೆಂದು ಗಂಭೀರ್ ಬಯಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದ್ದರೆ, ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮುಂತಾದ ಆಟಗಾರರ ಆಯ್ಕೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ.