ಈ ಮೂರು ತಂಡಗಳು ಏಷ್ಯಾಕಪ್‌ನಿಂದ ಔಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಬೆಂಗಳೂರು: 2025ರ ಏಷ್ಯಾಕಪ್ ಟೂರ್ನಿ ಆರಂಭವಾಗಿ ಕೇವಲ ಮೂರು ದಿನಗಳು ಕಳೆದಿವೆ. ಹೀಗಿರುವಾಗಲೇ ಸೂಪರ್ 4 ಹಂತದ ಲೆಕ್ಕಾಚಾರ ಜೋರಾಗಿದೆ. ಈ ನಡುವೆ, ಈ ಮೂರು ತಂಡಗಳು ಸೂಪರ್ 4 ಹಂತದ ರೇಸ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿವೆ.'

ಏಷ್ಯಾಕಪ್ ಸೂಪರ್ 4 ರೇಸ್:
17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ದುಬೈ ಹಾಗೂ ಅಬುದಾಬಿಯಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಹೀಗಿರುವಾಗಲೇ ಮೂರು ತಂಡಗಳು ಏಷ್ಯಾಕಪ್ ಸೂಪರ್ 4 ರೇಸ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿವೆ.
ಬಾಂಗ್ಲಾದೇಶ-ಹಾಂಕಾಂಗ್ ಮ್ಯಾಚ್
2025ರ ಏಷ್ಯಾಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಭರ್ಜರಿ ಗೆಲುವು ದಾಖಲಿಸಿದೆ.
ಸತತ ಎರಡು ಸೋಲು ಕಂಡ ಹಾಂಕಾಂಗ್
ಇನ್ನು 'ಬಿ'ಗುಂಪಿನಲ್ಲಿರುವ ಹಾಂಕಾಂಗ್ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿದೆ. ಹೀಗಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ತಂಡದ ಸೂಪರ್ 4 ಕನಸು ಬಹುತೇಕ ಅಂತ್ಯವಾಗಿದೆ.
ಯುಎಇ ಸೂಪರ್ 4 ಹಾದಿ ಕಠಿಣ
ಇನ್ನೊಂದೆಡೆ 'ಎ' ಗುಂಪಿನಲ್ಲಿ ಯುಎಇ ತಂಡದ ಸೂಪರ್ 4 ಕನಸು ಬಹುತೇಕ ಭಗ್ನವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಭಾರತ ಎದರು ಸೋಲು ಕಂಡ ಯುಎಇ
ಯುಎಇ ತಂಡವು ಭಾರತ ಎದುರು 9 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದೀಗ ಯುಎಇ ತಂಡವು ಇನ್ನೊಂದು ಮ್ಯಾಚ್ ಸೋತರೂ ಸೂಪರ್ 4 ಹಂತದ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಪಾಕಿಸ್ತಾನ-ಓಮಾನ್ ಮುಖಾಮುಖಿ
ಏಷ್ಯಾಕಪ್ ಟೂರ್ನಿಯಲ್ಲಿಂದು ಪಾಕಿಸ್ತಾನ ಹಾಗೂ ಓಮಾನ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು 99% ಗೆಲ್ಲುವ ಸಾಧ್ಯತೆಯಿದೆ. ಎರಡೂ ತಂಡಗಳು ಮೊದಲ ಸಲ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಓಮಾನ್ ತಂಡಕ್ಕೆ ಅಗ್ನಿ ಪರೀಕ್ಷೆ
ಇಂದು ಓಮಾನ್ ತಂಡದ ಎದುರು ಪಾಕಿಸ್ತಾನ ಗೆದ್ದರೇ, ಓಮಾನ್ ಸೂಪರ್ 4 ಕನಸಿನ ಹಾದಿ ಮತ್ತಷ್ಟು ಕಠಿಣವಾಗಲಿದೆ. ಯಾಕೆಂದರೆ ಭಾರತ ಎದುರೂ ಓಮಾನ್ ಸೋತರೇ, ಮೂರನೇ ತಂಡವಾಗಿ ಗ್ರೂಪ್ ಹಂತದಲ್ಲೇ ಹೊರಬೀಳಲಿದೆ.
ಸೂಪರ್ 4 ಹಂತಕ್ಕೇರುವ ತಂಡಗಳು ಯಾವುವು?
ಸದ್ಯದ ಪ್ರದರ್ಶನ ಗಮನಿಸಿದರೆ, ಈಗಿರುವ ಯಾವ ನಾಲ್ಕು ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಬಹುದು ಎನ್ನುವುದನ್ನು ಕಮೆಂಟ್ ಮೂಲಕ ತಿಳಿಸಿ.