- Home
- Entertainment
- Cine World
- Urfi Javed Bold look: ಸೊಂಟದ ಪಕ್ಕವೇ ಡ್ರೆಸ್ ತೂತು, ಬಟ್ಟೆ ಇಲ್ಲದೆ ಓಡಾಡು ಎಂದ ನೆಟ್ಟಿಗರು
Urfi Javed Bold look: ಸೊಂಟದ ಪಕ್ಕವೇ ಡ್ರೆಸ್ ತೂತು, ಬಟ್ಟೆ ಇಲ್ಲದೆ ಓಡಾಡು ಎಂದ ನೆಟ್ಟಿಗರು
ನಟಿ ಉರ್ಫಿ ಜಾವೇದ್ (Urfi Javed) ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಬೇಬಿ ಪಿಂಕ್ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು.ಉರ್ಫಿ ಜಾವೇದ್ ಬೋಲ್ಡ್ ಸ್ಲಿಟ್ ಪಿಂಕ್ ಬಣ್ಣದ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಿತ್ರ ಡ್ರೆಸ್‌ಗಾಗಿ ಉರ್ಫಿ ಮತ್ತೊಮ್ಮೆ ಸಿಕ್ಕಾಪಟ್ಟೆ ಟ್ರೋಲ್ (Troll) ಆಗುತ್ತಿದ್ದಾರೆ.

ಬಿಗ್ ಬಾಸ್ OTT ಸ್ಪರ್ಧಿಗಳಲ್ಲಿ ಒಬ್ಬರಾದ ಕಿರುತೆರೆ ನಟಿ ಉರ್ಫಿ ಜಾವೇದ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಕಳೆದ ರಾತ್ರಿ, ಅವರು ಧರಿಸಿದ್ದ ಬೋಲ್ಡ್ ಬೇಬಿ ಪಿಂಕ್ ಸ್ಕರ್ಟ್‌ನ ಗಮನ ಸೆಳೆಯುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಹಂಚಿಕೊಂಡಿದ್ದಾರೆ.
ಉರ್ಫಿ ಗುಲಾಬಿ ಬಣ್ಣದ ಸ್ಯಾಟಿನ್ ಸ್ಕರ್ಟ್ ಧರಿಸಿದ್ದಾರೆ. ಮುಂಭಾಗದ ಕಟ್-ಔಟ್‌ನೊಂದಿಗೆ ಬೇಬಿ ಪಿಂಕ್ ಸ್ಯಾಟಿನ್ ಕ್ರಾಪ್ ಟಾಪ್‌ನಲ್ಲಿ ತನ್ನ ತೊಡೆಯನ್ನು ಎಕ್ಸ್‌ಪೋಸ್ ಮಾಡಿದ್ದಾರೆ ನಟಿ. ಅವರು ಫೋಟೋಗೆ 'What time is it ? ಎಂದು ಕ್ಯಾಪ್ಷನ್‌ನೀಡಿದ್ದಾರೆ.
ಈ ಫೋಟೋಗಳನ್ನು ಪೋಸ್ಟ್ ಮಾಡಿದ ತಕ್ಷಣ, ನೆಟ್ಟಿಗರು ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಬೋಲ್ಡ್ ಉಡುಗೆ ತೊಟ್ಟಿದ್ದಕ್ಕೆ ಜನ ನಟಿಯನ್ನು ಟ್ರೋಲ್ ಮಾಡಿದ್ದಾರೆ.'ನೀವು ಬ್ರಾ ಧರಿಸುವುದಿಲ್ಲ ಮತ್ತು ಈಗ ನೀವು ಪ್ಯಾಂಟಿಯನ್ನೂ ಧರಿಸುವುದಿಲ್ಲ' ಎಂದು ಒಬ್ಬರು ಬರೆದಿದ್ದಾರೆ. 'ಡ್ರೆಸ್ಸಿಂಗ್ ತುಂಬಾ ಕೊಳಕಾಗಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
'ಇದಕ್ಕಿಂತ ಬಟ್ಟೆಯಿಲ್ಲದೆ ಓಡಾಡು ಎಂದು' ಇನ್ನೊಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ. 'ನಾಚಿಕೆಯಿಲ್ಲದ ಜೀವಿ ನೀನು ಮನುಷ್ಯ ಎಂದೂ ನಾನು ಹೇಳಲು ಬಯಸುವುದಿಲ್ಲ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಅರೇ ನೀವು ಫೇಮಸ್ ಆಗಲು ಏನು ಬೇಕಾದರೂ ಮಾಡುತ್ತೀಯಾ, ಇದು ಏನು ಮಾಡುತ್ತಿದ್ದಿಯಾ?' ಎಂದು ಮತ್ತೊಬ್ಬರು ಬರೆದರೆ, ಒಬ್ಬ ಸಾಮಾಜಿಕ ಬಳಕೆದಾರರು 'ಇದಕ್ಕೆ ಯಾವ ಫ್ಯಾಶನ್ ಎಂದು ಹೇಳುತ್ತಾರೆ' ಎಂದು ನಟಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ಕಳೆದ ವಾರ, ಉರ್ಫಿ ಪ್ರಿಯಾಂಕಾ ಚೋಪ್ರಾರನ್ನು ಕಾಪಿ ಮಾಡಿದ ಕಾರಣಕ್ಕಾಗಿ ಟ್ರೋಲ್ ಮಾಡಲ್ಪಟ್ಟರು ಮತ್ತು ಅವರ ವಿಚಿತ್ರ ಫ್ಯಾಷನ್ ಮತ್ತು ಬೋಲ್ಡ್ ಆಯ್ಕೆಗಳಿಂದಾಗಿ ನೆಗೆಟಿವ್ ಆಗಿ ಸುದ್ದಿ ಮಾಡಲು ಉರ್ಫಿ ಜಾವೇದ್ ಹೆಸರುವಾಸಿ. ಉರ್ಫಿ ಒಮ್ಮೆ ಸೂಪರ್ ಮಾಡೆಲ್ ಕೆಂಡಾಲ್ ಜೆನ್ನರ್ಸ್‌ನಿಂದ ಸ್ಫೂರ್ತಿ ಪಡೆದ ಕಪ್ಪು ಕಟ್-ಔಟ್ ಡ್ರೆಸ್‌ಗಾಗಿ ಟ್ರೋಲ್‌ಗೆ ಒಳಗಾಗಿದ್ದರು.
ಉರ್ಫಿ ಕೇವಲ 24 ವರ್ಷ ವಯಸ್ಸಿನ 'ಬಡೆ ಭಯ್ಯಾ ಕಿ ದುಲ್ಹನಿಯಾ' ಮೂಲಕ ಟಿವಿಗೆ ಎಂಟ್ರಿ ಕೊಟ್ಟರು. ನಂತರ ಬೇಪನ್ನಾಹ್, ಮೇರಿ ದುರ್ಗಾ ಮತ್ತು ಪಂಚ್ ಬೀಟ್ ಸೀಸನ್ 2 ಗಳಲ್ಲಿ ಕಾಣಿಸಿಕೊಂಡರು. ಅವರು ಜನಪ್ರಿಯ ಟಿವಿ ಶೋಗಳಾದ ಕಸೌತಿ ಜಿಂದಗಿ ಕೇ ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.