ಪತಿಯಿಂದ ದೂರವಿರೋ ಮೌನಿ ರಾಯ್… ಸೋಶಿಯಲ್ ಮೀಡಿಯಾದಲ್ಲಿ ತೋಡಿಕೊಂಡ್ರು ವಿರಹ ವೇದನೆ
ಮೌನಿ ರಾಯ್ ಇತ್ತೀಚೆಗೆ ತನ್ನ ಪತಿ ಸೂರಜ್ ನಂಬಿಯಾರ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಾವು ಗಂಡನಿಂದ ದೂರವಿದ್ದು, ವಿರಹವೇದನೆ ಅನುಭವಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಹಿಂದಿಯ ನಾಗಿಣಿ ಖ್ಯಾತಿಯ ನಟಿ ಮೌನಿ ರಾಯ್ (Mouni Roy) ಹೆಚ್ಚಾಗಿ ತನ್ನ ಸುಂದರವಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ಅವರು ತಮ್ಮ ಪತಿ ಸೂರಜ್ ನಂಬಿಯಾರ್ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡುವ ಮೂಲಕ ತಮ್ಮ ವಿರಹ ವೇದನೆ ಬಗ್ಗೆ ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಳ್ಳುವುದುದರ ಜೊತೆಗೆ, ಮೌನಿ ತನ್ನ ಪತಿಯಿಂದ ಪ್ರತ್ಯೇಕವಾಗಿ ಕೆಲಸ ಮಾಡಬೇಕಾದಾಗ ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಅನ್ನೋದನ್ನು, ಅಂದ್ರೆ ತಮ್ಮ ವಿರಹ ವೇದನೆಯ ಬಗ್ಗೆ ವಿವರಣೆ ನೀಡಿದ್ದಾರೆ.
ಮೊದಲ ಚಿತ್ರದಲ್ಲಿ, ಮೌನಿ ಮತ್ತು ಸೂರಜ್ (Suraj Nambiar) ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ್ದಾರೆ. ಸೂರಜ್ ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡರೆ, ಮೌನಿ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಎರಡನೇ ಚಿತ್ರದಲ್ಲಿ, ಇಬ್ಬರೂ ಪರಸ್ಪರ ಅಪ್ಪಿಕೊಂಡು ರೊಮ್ಯಾಂಟಿಕ್ ಪೋಸ್ ನೀಡಿರೋದು ಕಾಣಬಹುದು.
ಈ ಚಿತ್ರಗಳನ್ನು ಹಂಚಿಕೊಂಡ ಮೌನಿ, "ನಾವು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಬೇಕಾಗಿ ಬಂದಾಗ, ನಾನು ನನ್ನ ಗಂಡನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆವಾಗ ನಮ್ಮ ಈ ಫೋಟೊಗಳನ್ನು ನಾನು ಪ್ರೀತಿಸುತ್ತೇನೆ (I miss my husband when we have to work in different countries and i really like these photos of us x) ಎಂದು ಬರೆದುಕೊಂಡಿದ್ದಾರೆ.
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ 2022 ರ ಜನವರಿಯಲ್ಲಿ ಗೋವಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ವಿವಾಹವಾದರು. ಸಾಂಪ್ರದಾಯಿಕ ಬಂಗಾಳಿ ಮತ್ತು ಮಲಯಾಳಂ ಪದ್ಧತಿಗಳ ಪ್ರಕಾರ ಮದುವೆ ನಡೆಯಿತು. ಅವರ ವೆಡ್ಡಿಂಗ್ ಲುಕ್ (wedding look) ಭಾರಿ ವೈರಲ್ ಆಗಿತ್ತು.
ಇನ್ನು ಕರಿಯರ್ ಬಗ್ಗೆ ಹೇಳೋದಾದ್ರೆ ಮೌನಿ ಶೀಘ್ರದಲ್ಲೇ ಸಂಜಯ್ ದತ್ (Sanjay Dutt) ಅವರೊಂದಿಗೆ 'ದಿ ಭೂತ್ನಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಆಕ್ಷನ್-ಹಾರರ್ ಹಾಸ್ಯ ಚಿತ್ರವಾಗಿದ್ದು, ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸನ್ನಿ ಸಿಂಗ್ ಮತ್ತು ಪಾಲಕ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಸಿದ್ಧಾಂತ್ ಸಚ್ ದೇವ್ ನಿರ್ದೇಶಿಸಿದ್ದಾರೆ.
ಟಿವಿ ಸೀರಿಯಲ್ ಮೂಲಕ ತಮ್ಮ ವೃತ್ತಿಜೀವನವನ್ನು (career life) ಪ್ರಾರಂಭಿಸಿದ ಮೌನಿ ರಾಯ್ ನಂತರ ಚಲನಚಿತ್ರಗಳು ಮತ್ತು ಒಟಿಟಿಯತ್ತ ಸಾಗಿ ದೊಡ್ಡ ಹೆಸರನ್ನೇ ಮಾಡಿದ್ದಾರೆ. ಮೌನಿ ಇಲ್ಲಿವರೆಗೂ ಅಕ್ಷಯ್ ಕುಮಾರ್ ಅವರಿಂದ ಹಿಡಿದು ಇತರ ಅನೇಕ ಟಾಪ್ ಸ್ಟಾರ್ಸ್ ಜೊತೆಗೂ ಕೆಲಸ ಮಾಡಿದ್ದಾರೆ.