2 ಮಕ್ಕಳ ತಂದೆ ಮದ್ವೆಯಾದ ಅತಿಲೋಕ ಸುಂದರಿ ಶ್ರಿದೇವಿ ಲವ್ ಸ್ಟೋರಿ ಇದು..
ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮಿಂಚಿದವರು ನಟಿ ಶ್ರೀದೇವಿ. ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಬೋನಿ ಕಪೂರ್‌ಗೆ ಎರಡನೆ ಹೆಂಡತಿಯಾಗಿ ವೈವಾಹಿಕ ಜೀವನ ಶುರುಮಾಡಿ, ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದರು ಶ್ರೀದೇವಿ. ಕೆಲವು ವರ್ಷಗಳ ಹಿಂದೆ, ಶ್ರೀದೇವಿ ಅವರೊಂದಿಗಿನ ತಮ್ಮ ಪ್ರೇಮ ಕಥೆಯನ್ನು ಬೋನಿ ಕಪೂರ್ ತೆರೆದಿಟ್ಟರು. ಶ್ರೀದೇವಿ ಜೊತಗಿನ ಸಂಬಂಧವನ್ನು ತಮ್ಮ ಮಾಜಿ ಪತ್ನಿಗೆ ಹೇಗೆ ಹೇಳಿದರು ಎಂಬುದನ್ನು ಸಹ ಬೋನಿ ಕಪೂರ್ ವಿವರಿಸಿದ್ದಾರೆ

ಬಾಲಿವುಡ್ ನಿರ್ದೇಶಕ ಬೋನಿ ಕಪೂರ್ ಮತ್ತು ಶ್ರೀದೇವಿಯವರ ಲವ್‌ಲೈಫ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಸುದ್ದಿಯಾದ ಪ್ರೇಮಕಥೆಗಳಲ್ಲಿ ಒಂದಾಗಿದೆ.

ಬಿಹೈಂಡ್‌ವುಡ್ಸ್ ಟಿವಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಶ್ರೀದೇವಿಯನ್ನು ನೆನಪಿಸಿಕೊಂಡಿದ್ದಾರೆ ಬೋನಿ. 'ಅವಳು ತನ್ನ ಜೀವಿತಾವಧಿಯಲ್ಲಿ ದಂತಕಥೆಯಾಗಿದ್ದಳು. ಸತ್ತ ನಂತರವೂ ದಂತಕಥೆಯಾಗಿ ಉಳಿದಿದ್ದಾಳೆ. ಅವಳು ಜಗತ್ತಿಗೆ ಹೋಗಿರಬಹುದು, ಆದರೆ ನನಗೆ, ನಮಗಾಗಿ, ಅವಳು ಇನ್ನೂ ಸುತ್ತಮುತ್ತ ಇದ್ದಾಳೆ. ಅವಳು ನಮ್ಮನ್ನು ಚೆನ್ನಾಗಿ ಹಾರೈಸುತ್ತಾಳೆ ಮತ್ತು ನೋಡಿಕೊಳ್ಳುತ್ತಾಳೆ,' ಎಂದಿದ್ದಾರೆ ಬೋನಿ.

2013ರ ಇಂಡಿಯಾ ಟುಡೆ ವುಮನ್ ಸಮ್ಮಿತ್‌ನಲ್ಲಿ , ಬೋನಿ ಕಪೂರ್ ಶ್ರೀದೇವಿಯನ್ನು ಹೇಗೆ ಪ್ರೀತಿಸಲು ಪ್ರಾರಂಭಿಸಿದ್ದರು ಎಂಬುವುದು ರಿವೀಲ್ ಆಗಿತ್ತು.

ನನ್ನ ಮತ್ತು ಶ್ರೀ ನಡುವಿನ ಪ್ರೇಮ ಅಂಕುರವಾದ ವಿಷಯ ಹೇಳಲು ನನಗೋ ಖುಷಿ. ಅವಳಿಗೂ ಇದು ಇಷ್ಟವೇ ಆಗುತ್ತಿರಲಿಲ್ಲ. ನಾನು ಅವಳ ಪ್ರೀತಿಗೆ ಬಿದ್ದ ಕ್ಷಣಗಳನ್ನು ಸದಾ ಹಸಿರಾಗಿಡಲು ಯತ್ನಿಸುತ್ತೇನೆ. ನಾನು ಯಾವಾಗ ಅವಳನ್ನು ತೆರೆ ಮೇಲೆ ನೋಡಿದನೋ, ಅವತ್ತೇ ಪ್ರೀತಿ ಚಿಗುರಿತ್ತು. ಅವಳ ನಟನೆಯೊ ತಮಿಳು ಚಿತ್ರವನ್ನು 70ರ ದಶಕದಲ್ಲಿ ನೋಡಿದಾಗಲೇ ನನ್ನಲ್ಲಿ ಅವಳ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ನನ್ನ ಚಿತ್ರದಲ್ಲಿ ಅವಳೇ ನಟಿಯಾಗಬೇಕೆಂದು ಅವತ್ತೇ ನಾನು ನಿರ್ಧರಿಸಿದ್ದೆ, ಎಂದಿದ್ದರು ಖುಷಿ, ಜಾನ್ವಿ ಅಪ್ಪ ಬೋನಿ.

ಬೋನಿ ಹೊಸ ಸಿನಿಮಾ ಪ್ರಾರಂಭಿಸಲು ಸಜ್ಜಾಗಿದ್ದರು, ಅದರಲ್ಲಿ ರಿಷಿ ಕಪೂರ್‌ನ್ನು ಸೇರಿಸಿಕೊಳ್ಳಲು ಯೋಜಿಸಿದ್ದರು. ಹೇಗಾದರೂ, ಅವರು ರಿಷಿ ಸಹಿ ಹಾಕುವ ಮೊದಲು, ಬೋನಿ ಶ್ರೀದೇವಿ ಈ ಸಿನಿಮಾದ ಪಾತ್ರಕ್ಕೆ ಒಪ್ಪುತ್ತಾರಾ ಎಂದು ಯತ್ನಿಸಿದ್ದರು.

ಶ್ರಿದೇವಿಯನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಒಪ್ಪಿಸಲು ಬೋನಿ, ಚೆನ್ನೈಗೆ ಪ್ರಯಾಣ ಬೆಳೆಸಿದ್ದರೆ. ಆದರೆ, ಆಗ ಶ್ರೀದೇವಿ ಸಿಂಗಾಪುರದಲ್ಲಿದ್ದರು.

ನಂತರ, ಶ್ರೀದೇವಿ ಅನಿಲ್ ಕಪೂರ್ ಜೊತೆ ಮಿಸ್ಟರ್ ಇಂಡಿಯಾಕ್ಕೆ ಸಹಿ ಹಾಕಿದರು. ಬೋನಿ ಮಿಸ್ಟರ್ ಇಂಡಿಯಾದ ಸೆಟ್‌ಗಳಿಗೆ ಹೋಗಿ ಶ್ರೀದೇವಿಯನ್ನು ಮೊದಲ ಬಾರಿಗೆ ಭೇಟಿಯಾದಾಗ, ನನ್ನ ಹಲೇ ಕನಸು ನನಸಾಗುವಂತಿತ್ತು ಎಂದು ಹೇಳಿದ್ದರು ಬೋನಿ ಕಪೂರ್.

'ಅವಳು ಅಂತರ್ಮುಖಿ ಮತ್ತು ಅಪರಿಚಿತರೊಂದಿಗೆ ಸುಲಭವಾಗಿ ಮಾತಾನಾಡುತ್ತಿರಲಿಲ್ಲ ಮತ್ತು ನಾನು ಆಗ ಅಪರಿಚಿತನಾಗಿದ್ದೆ. ಆದರೆ, ಮುರುಕು ಹಿಂದಿ ಮತ್ತು ಮುರುಕು ಇಂಗ್ಲಿಷ್‌ನಲ್ಲಿ ಅವಳು ಆಡಿದ ಕೆಲವು ಮಾತುಗಳು, ನನ್ನ ಮನ ಮುಟ್ಟಿದವು,' ಎಂದು ಹೇಳಿದ್ದಾರೆ ಶ್ರೀದೇವಿಯ ಪತಿ ಬೋನಿ.

ಶ್ರೀದೇವಿಯ ತಾಯಿ ಹಣಕಾಸಿನ ವಿಚಾರಗಳನ್ನು ನಿರ್ಧರಿಸುತ್ತಿದ್ದ ದಿನಗಳನ್ನು ಬೋನಿ ನೆನಪಿಸಿಕೊಂಡರು, ಆದ್ದರಿಂದ ಶ್ರೀದೇವಿ ತಾಯಿಯನ್ನು ಭೇಟಿ ಮಾಡಲು ಚೆನ್ನೈಗೆ ಹೋದರು.

ಆ ಸಮಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ನಟಿ ಎಂಬ ಕಾರಣಕ್ಕೆ ಆಕೆಯ ತಾಯಿ 10 ಲಕ್ಷ ರೂ. ಕೇಳಿದರು. ಅದಕ್ಕೆ ಕಪೂರ್, 'ಇಲ್ಲ, ನಾನು ಅವಳಿಗೆ 11 ಲಕ್ಷ ರೂ ಕೋಡುತ್ತೇನೆ, ಎಂದು ಹೇಳಿ ಅವಳ ತಾಯಿಗೂ ಹತ್ತಿರವಾದೆ,' ಎಂದು ಹಳೇ ನೆನಪನ್ನು ಹಂಚಿಕೊಂಡಿದ್ದರು ನಿರ್ದೇಶಕ.

ಸಿನಿಮಾ ಸೆಟ್‌ಗಳಲ್ಲಿ ಶ್ರೀದೇವಿಯ ಕೇರ್ ತೆಗೆದುಕೊಳ್ಳುತ್ತಿದ್ದರು ಬೋನಿ. ಎಲ್ಲವೂ ಅವಳಿಗೆ ಕಂಫರ್ಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. 'ನಾನು ಆಗ ಮದುವೆಯಾಗಿದ್ದೆ ಮತ್ತು ನನ್ನ ಮಾಜಿ ಹೆಂಡತಿಗೆ ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಕನ್ಫೆಸ್ ಮಾಡಿಕೊಂಡೆ,' ಎಂದಿದ್ದಾರೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ.

ಮಿಸ್ಟರ್ ಇಂಡಿಯಾದ ಸೆಟ್‌ಗಳಲ್ಲಿ ಮಾತ್ರವಲ್ಲ, ಇತರ ಸಿನಿಮಾಗಳ ಶೂಟಿಂಗ್ ಸಮಯದಲ್ಲೂ ಬೋನಿ ಶ್ರೀದೇವಿಯ ಜೊತೆಗೆ ಇರುತ್ತಿದ್ದರು.

ಶ್ರೀದೇವಿ ನಿಧನದ ನಂತರವೂ ಬೋನಿ ದಿವಂಗತ ನಟಿಯನ್ನು ತುಂಬಾ ಪ್ರೀತಿಸುತ್ತಾರೆ. ಬಾಲಿವುಡ್ ನಿರ್ಮಾಪಕ ತನ್ನ ಪ್ರೀತಿಯ, ಸುಂದರ ಹೆಂಡತಿಯ ಬಗ್ಗೆ ಮಾತನಾಡದ ಯಾವುದೇ ಸಂದರ್ಶನವಿಲ್ಲ, ಮೀಡಿಯಾ ಸಂವಾದ ಇಲ್ಲ.

ಶ್ರೀದೇವಿ ಬೋನಿ ಕಪೂರ್ ಫ್ಯಾಮಿಲಿ ಪೋಟೋ.

ಶ್ರೀದೇವಿ ಬೋನಿ ಕಪೂರ್ ಫ್ಯಾಮಿಲಿ ಪೋಟೋ.