- Home
- Entertainment
- Cine World
- ಸಾಯಿ ಪಲ್ಲವಿಗೆ ಯಾವ ಕಾರಣಕ್ಕೆ ಜನರಿಂದ ಪ್ರೀತಿ, ಗೌರವ ಸಿಗ್ತಿತ್ತೋ, ಈಗ ಅದೇ ಕಾರಣಕ್ಕೆ ಬೈಗುಳಗಳ ಸುರಿಮಳೆ
ಸಾಯಿ ಪಲ್ಲವಿಗೆ ಯಾವ ಕಾರಣಕ್ಕೆ ಜನರಿಂದ ಪ್ರೀತಿ, ಗೌರವ ಸಿಗ್ತಿತ್ತೋ, ಈಗ ಅದೇ ಕಾರಣಕ್ಕೆ ಬೈಗುಳಗಳ ಸುರಿಮಳೆ
Actress Sai Pallavi: ಇದ್ದರೆ ನಟಿ ಸಾಯಿ ಪಲ್ಲವಿ ಥರ ಇರಬೇಕು ಎಂದು ಅನೇಕರು ಹೇಳಿದ್ದುಂಟು. ಸಿನಿಮಾದಲ್ಲೇ ಇರಲಿ, ಹೊರಗಡೆಯೇ ಇರಲಿ, ಅವರು ಎಂದೂ ಲಿಮಿಟ್ ಮೀರಿ ಬಟ್ಟೆ ಹಾಕಿದವರಲ್ಲ. ಆದರೆ ಈ ಬಾರಿ ಅನೇಕರಿಂದ ಟೀಕೆಗೆ ಒಳಗಾಗಿದ್ದಾರೆ. ಇದಕ್ಕೂ ಕಾರಣವಿದೆ.

ಸಹಜ ಸುಂದರಿ
ಮಾಯಿಶ್ಚರೈಸರ್, ಕಾಜಲ್, ಅಬ್ಬಬ್ಬಾ ಅಂದರೆ ಲಿಪ್ ಬಾಮ್ ಹಚ್ಚುವ ಸಾಯಿ ಪಲ್ಲವಿ ನಿಜಕ್ಕೂ ಸರಳ ಸುಂದರಿ. ಈಗ ಅವರು ಧರಿಸಿದ ಬಟ್ಟೆಯಿಂದಲೇ ಟ್ರೋಲ್ ಆಗಿದ್ದು, ರಾಮಾಯಣ ಸಿನಿಮಾದಲ್ಲಿ ಅವರಿಗೆ ಸೀತೆ ಪಾತ್ರ ಕೊಡಬಾರದಿತ್ತು ಎಂದು ಹೇಳುತ್ತಿದ್ದಾರೆ.
ಹಾಲಿಡೇಯಲ್ಲಿ ಅಕ್ಕ-ತಂಗಿ
ಸಾಯಿ ಪಲ್ಲವಿ ಹಾಗೂ ಅವರ ಸಹೋದರಿ ಪೂಜಾ ಕನ್ನನ್ ಇಬ್ಬರೂ ಇತ್ತೀಚೆಗೆ ಬೀಚ್ ಬಳಿ ಒಂದಿಷ್ಟು ಸಮಯ ಕಳೆದಿದ್ದಾರೆ. ಕೆಲ ತಿಂಗಳುಗಳ ಹಿಂದೆ ಪೂಜಾಗೆ ಮದುವೆಯಾಗಿದೆ. ಈಗ ಈ ಹಾಲಿಡೇಯಲ್ಲಿ ಸಾಯಿ ಪಲ್ಲವಿ ಅವರು ಸ್ವಿಮ್‌ಸೂಟ್ ಧರಿಸಿದ್ದಾರೆ. ಪೂಜಾ ಅವರು ಸ್ವಿಮ್ ಸೂಟ್ ಧರಿಸಿದ್ದರು.
ಸ್ವಿಮ್‌ಸೂಟ್‌ನಲ್ಲಿ ಸಾಯಿ ಪಲ್ಲವಿ
ಕೆಲವರು ಸಾಯಿ ಪಲ್ಲವಿ ಡ್ರೆಸ್‌ನ್ನು ವಿರೋಧಿಸಿದ್ದಾರೆ. ಸಾಯಿ ಪಲ್ಲವಿಯಿಂದ ಈ ರೀತಿ ನಿರೀಕ್ಷೆ ಮಾಡಿರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಆಗ ಓರ್ವರು "ಸಾಯಿ ಪಲ್ಲವಿ ಬೀಚ್‌ಗೆ ಹೋಗಿ, ಸೀರೆ ಧರಿಸಬೇಕು ಅಂತ ಹೇಳ್ತೀರಾ? ಎಂದಿದ್ದಾರೆ.
ಫೋಟೋ ವೈರಲ್
ಪೂಜಾ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅಕ್ಕ-ತಂಗಿ ಬೀಚ್ ಬಳಿ ಕುಳಿತು ನಗುವ ದೃಶ್ಯವಿದೆ. ಈ ಫೋಟೋವನ್ನು ಸಾಯಿ ಪಲ್ಲವಿ ತೆಗೆದಿದ್ದಾರೆ. ಒಂದು ಫೋಟೋದಲ್ಲಿ ಸಾಯಿ ಪಲ್ಲವಿ ಅವರು ಸ್ವಿಮ್‌ಸೂಟ್ ಹಾಕಿದ್ದು ಕಾಣಿಸುತ್ತಿದೆ, ಮತ್ತೊಂದರಲ್ಲಿ ವೇಟ್‌ಸೂಟ್ ಧರಿಸಿರುವ ಥರ ಕಾಣ್ತಿದೆ.
ಎಲ್ಲ ಹೀರೋಯಿನ್ ಥರ ಇವರೂನಾ?
ಫೋಟೋ ಶೇರ್ ಮಾಡುತ್ತಿದ್ದಂತೆಯೇ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಸ್ವಿಮ್‌ಸೂಟ್ ಧರಿಸಿದ್ದಕ್ಕಾಗಿ ಕೆಲವರು ಟೀಕಿಸಿ ಕಾಮೆಂಟ್ ಮಾಡಿದ್ದಾರೆ. ಎಲ್ಲ ಹೀರೋಯಿನ್‌ಗಳಂತೆ ಇವರು ಕೂಡ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ತೆರೆ ಮೇಲೆ ಟ್ರೆಡಿಷನಲ್ ಆಗಿದ್ದರೆ, ತೆರೆ ಹಿಂದೆ ಬಿಕಿನಿ ಧರಿಸಿದ್ದಾರೆ.
ಸಾಯಿ ಪಲ್ಲವಿ ಬಗ್ಗೆ ಸಮರ್ಥನೆ
ಕೆಲವರು ಇದೇ ಸಮಯಕ್ಕೆ ಸಾಯಿ ಪಲ್ಲವಿ ಅವರ ಫೋಟೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. “ಏನು ಬಟ್ಟೆ ಧರಿಸಬೇಕು ಎನ್ನೋದು ಅವರ ಇಚ್ಛೆ. ನೀರಿನಲ್ಲಿ ನೀವು ಏನು ಹಾಕಬೇಕು ಅಂತ ಡಿಸೈಡ್ ಮಾಡ್ತೀರಾ? ಅವರ ಸ್ವಾತಂತ್ರ್ಯ, ಅವರ ಆಯ್ಕೆ” ಎಂದು ಕಾಮೆಂಟ್ ಮಾಡಿದ್ದಾರೆ.