ನಿನ್ನೆ ಇಳಿಕೆಯಾದ ಬೆಲೆಯಲ್ಲಿಯೇ ಇಂದು ಖರೀದಿಸಿ 22K, 24K ಚಿನ್ನ; ಈ ಚಾನ್ಸ್ ಮಿಸ್ ಮಾಡ್ಕೋಬೇಡಿ
Gold And Silver Price Today: ಇಂದು ಚಿನ್ನಾಭರಣ ಪ್ರಿಯರಿಗೆ ನಿನ್ನೆಯ ದರದಲ್ಲಿಯೇ ಚಿನ್ನ ಖರೀದಿಸುವ ಅವಕಾಶ. ಅದೇ ರೀತಿ ಚಿನ್ನದ ಜೊತೆ ಬೆಳ್ಳಿಯನ್ನು ಸಹ ಖರೀದಿಸಿ ಸಂಭ್ರಮಿಸಿ

ಇಂದು ನೀವು ನಿನ್ನೆಯ ದರದಲ್ಲಿಯೇ ಚಿನ್ನವನ್ನು ಖರೀದಿಸಬಹುದಾಗಿದೆ. ಬಟ್ಟೆ ಶಾಪಿಂಗ್‌ಗೆ ಹಾಕುವ ಹಣಕ್ಕೆ ಮತ್ತೊಂದಿಷ್ಟು ದುಡ್ಡು ಸೇರಿಸಿ ಚಿನ್ನವನ್ನು ಖರೀದಿಸಬಹುದು. ಈ ಹಣ ನಿಮಗೆ ಕಡಿಮೆ ಸಮಯಲ್ಲಿಯೇ ಒಳ್ಳೆಯ ರಿಟರ್ನ್ ನೀಡಲಿದೆ.
ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಮೂಲಕ ಏರಿಕೆಯ ಓಟಕ್ಕೆ ಬ್ರೇಕ್ ಬಿದ್ದಿತ್ತು. 8 ದಿನಗಳ ಬಳಿಕ ಚಿನ್ನದ ದರ ಕುಸಿತಗೊಂಡಿತ್ತು. ಆದ್ರೆ ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗ್ರಾಹಕರು ಇಂದು ಸಹ ಕಡಿಮೆಯಾದ ದರದಲ್ಲಿಯೇ ಚಿನ್ನವನ್ನು ಖರೀದಿ ಮಾಡುವ ಅವಕಾಶವಿದ್ದು, ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ.
ದೇಶದಲ್ಲಿಂದು ಚಿನ್ನದ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,445 ರೂಪಾಯಿ
8 ಗ್ರಾಂ: 75,560 ರೂಪಾಯಿ
10 ಗ್ರಾಂ: 94,450 ರೂಪಾಯಿ
100 ಗ್ರಾಂ: 9,44,500 ರೂಪಾಯಿ
ದೇಶದಲ್ಲಿಂದು ಚಿನ್ನದ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,304 ರೂಪಾಯಿ
8 ಗ್ರಾಂ: 82,432 ರೂಪಾಯಿ
10 ಗ್ರಾಂ: 1,03,040 ರೂಪಾಯಿ
100 ಗ್ರಾಂ: 10,30,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 94,450 ರೂಪಾಯಿ, ದೆಹಲಿ: 94,600 ರೂಪಾಯಿ, ಮುಂಬೈ: 94,450 ರೂಪಾಯಿ, ಕೋಲ್ಕತ್ತಾ: 94,450 ರೂಪಾಯಿ, ಬೆಂಗಳೂರು: 94,450 ರೂಪಾಯಿ, ಹೈದರಾಬಾದ್: 94,450 ರೂಪಾಯಿ, ವಡೋದರ: 94,450 ರೂಪಾಯಿ, ಪುಣೆ: 94,450 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಮಾರುಕಟ್ಟೆಯ ತಜ್ಞರ ಪ್ರಕಾರ, ಹಂತ ಹಂತವಾಗಿ ಬೆಳ್ಳಿಯ ಉಪಲಬ್ದತೆಯಲ್ಲಿ ಕುಸಿತ ಕಾಣಿಸುತ್ತಿದೆ. ನಿರಂತರವಾಗಿ 5 ವರ್ಷದಿಂದ ಬೆಳ್ಳಿಯ ಬೇಡಿಕೆಯನ್ನು ಪೂರ್ಣ ಮಾಡಲಾಗುತ್ತಿಲ್ಲ. ಈ ಹಿನ್ನೆಲೆ ಬೆಳ್ಳಿ ಬೆಲೆಯೂ ಏರಿಕೆ ಕಾಣುತ್ತಿದೆ. ಇಂದಿನ ಬೆಳ್ಳಿ ದರ ಹೀಗಿದೆ.
10 ಗ್ರಾಂ: 1,170 ರೂಪಾಯಿ
100 ಗ್ರಾಂ: 11,700 ರೂಪಾಯಿ
1000 ಗ್ರಾಂ: 1,17,000 ರೂಪಾಯಿ
ಷೇರುದಾರರು ಬೆಲೆ ಏರಿಕೆಯಾಗುವರೆಗೂ ತಮ್ಮಲ್ಲಿಯ ಬೆಳ್ಳಿಯನ್ನು ಮಾರಾಟ ಮಾಡಲ್ಲ. ಹೂಡಿಕೆದಾರರು ಬೆಳ್ಳಿಯನ್ನು ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಬಯಸುತ್ತಾರೆ. ಇದರಿಂದ ಬೆಳ್ಳಿ ಬೇಡಿಕೆ ಪ್ರಮಾಣ ಏರಿಕೆಯಾಗುತ್ತಲಿರುತ್ತದೆ. ಕೇವಲ ಚಿನ್ನ ಮಾತ್ರವಲ್ಲ ಇಂದು ಬೆಳ್ಳಿ ಮೇಲಿನ ಹೂಡಿಕೆ ಲಾಭದಾಯಕವಾಗಲಿದೆ.