ಅಬ್ಬಬ್ಬಾ, ಕೊನೆಗೂ ಇಳಿಕೆಯಾಯ್ತು ಚಿನ್ನದ ಬೆಲೆ; ಒಂದಲ್ಲ, ಎರಡಲ್ಲ ಬರೋಬ್ಬರಿ 7 ಸಾವಿರ ಕುಸಿತ
Gold And Silver Price: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಇಳಿಕೆ ಕಂಡುಬಂದಿದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 7,600 ರೂ. ಮತ್ತು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 7,000 ರೂ. ಕುಸಿತ ಕಂಡಿದೆ.

ಆಗಸ್ಟ್ ಆರಂಭದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುತ್ತಲೇ ಇತ್ತು. ನಿರಂತರ ಬೆಲೆ ಏರಿಕೆಯಿಂದಾಗಿ ಚಿನ್ನ ಹಲವು ಸಾರ್ವಕಾಲಿಕ ದಾಖಲೆಗಳನ್ನು ಬರೆದುಕೊಂಡಿತ್ತು. ಆದ್ರೆ ಇಂದು ಚಿನ್ನಾಭರಣ ಪ್ರಿಯರು ಖುಷಿಪಡುವ ದಿನವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 7,000 ರೂ.ಗಳವರೆಗೆ ಇಳಿಕೆಯಾಗಿದೆ.
ಭಾರತದಲ್ಲಿ ನಗರದಿಂದ ನಗರಕ್ಕೆ ಚಿನ್ನದ ಬೆಲೆ ವ್ಯತ್ಯಾಸ ಆಗುತ್ತಿರುತ್ತದೆ. ಭಾರತ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,375 ರೂಪಾಯಿ
8 ಗ್ರಾಂ: 75,000 ರೂಪಾಯಿ
10 ಗ್ರಾಂ: 93,750 ರೂಪಾಯಿ
100 ಗ್ರಾಂ: 9,37,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,228 ರೂಪಾಯಿ
8 ಗ್ರಾಂ: 81,824 ರೂಪಾಯಿ
10 ಗ್ರಾಂ: 1,02,280 ರೂಪಾಯಿ
100 ಗ್ರಾಂ: 10,22,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 93,750 ರೂಪಾಯಿ, ದೆಹಲಿ: 93,390 ರೂಪಾಯಿ, ಕೋಲ್ಕತ್ತಾ: 93,750 ರೂಪಾಯಿ, ಬೆಂಗಳೂರು: 93,750 ರೂಪಾಯಿ, ಹೈದರಾಬಾದ್: 93,750 ರೂಪಾಯಿ, ವಡೋದರ: 93,800 ರೂಪಾಯಿ, ಅಹಮದಾಬಾದ್: 93,800 ರೂಪಾಯಿ, ಪುಣೆ: 93,750 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ?
ಮಾರುಕಟ್ಟೆಯ ತಜ್ಞರ ಪ್ರಕಾರ, ಹಂತ ಹಂತವಾಗಿ ಬೆಳ್ಳಿಯ ಉಪಲಬ್ದತೆಯಲ್ಲಿ ಕುಸಿತ ಕಾಣಿಸುತ್ತಿದೆ. ನಿರಂತರವಾಗಿ 5 ವರ್ಷದಿಂದ ಬೆಳ್ಳಿಯ ಬೇಡಿಕೆಯನ್ನು ಪೂರ್ಣ ಮಾಡಲಾಗುತ್ತಿಲ್ಲ. ಈ ಹಿನ್ನೆಲೆ ಬೆಳ್ಳಿ ಬೆಲೆಯೂ ಏರಿಕೆ ಕಾಣುತ್ತಿದೆ. ಇಂದಿನ ಬೆಳ್ಳಿ ದರ ಹೀಗಿದೆ.
10 ಗ್ರಾಂ: 1,170 ರೂಪಾಯಿ
100 ಗ್ರಾಂ: 11,700 ರೂಪಾಯಿ
1000 ಗ್ರಾಂ: 1,17,000 ರೂಪಾಯಿ
ಎಷ್ಟು ಇಳಿಕೆ?
* 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,600 ರೂ. ಇಳಿಕೆಯಾಗಿದೆ. ಅಂದ್ರೆ 1 ಗ್ರಾಂನಲ್ಲಿ 76 ರೂ. ಕುಸಿತವಾಗಿದೆ.
* 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಇಳಿಕೆಯಾಗಿದೆ. ಅಂದ್ರೆ 1 ಗ್ರಾಂ ಬೆಲೆಯಲ್ಲಿ 70 ರೂ. ಕುಸಿತವಾಗಿದೆ.
* ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ದರಗಳು ಸ್ಥಿರವಾಗಿವೆ.