ಕೇವಲ 10 ಸಾವಿರದಲ್ಲಿ 5 ವ್ಯವಹಾರ ಆರಂಭಿಸಿ ಪ್ರತಿ ತಿಂಗಳು 50 ಸಾವಿರ ನಿಮ್ಮದಾಗಿಸಿಕೊಳ್ಳಿ
ಕಡಿಮೆ ಬಂಡವಾಳದಲ್ಲಿ ಸ್ವಂತ ವ್ಯಾಪಾರ ಆರಂಭಿಸಲು ಬಯಸುವವರಿಗೆ ಈ ಲೇಖನವು ಮಾರ್ಗದರ್ಶನ ನೀಡುತ್ತದೆ. ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿ 5 ಲಾಭದಾಯಕ ವ್ಯವಹಾರಗಳಿಂದ ತಿಂಗಳಿಗೆ 50 ಸಾವಿರದವರೆಗೆ ಗಳಿಸುವುದು ಹೇಗೆಂದು ವಿವರಿಸಲಾಗಿದೆ.

ಸ್ವಂತ ಬ್ಯುಸಿನೆಸ್
ಇಂದು ಎಲ್ಲರೂ ಸ್ವಂತ ಬ್ಯುಸಿನೆಸ್ ಆರಂಭಿಸಬೇಕು ಎಂದು ಕನಸು ಕಾಣುತ್ತಾರೆ. ಬೇರೆಯವರ ಅಡಿಯಲ್ಲಿ ಕೆಲಸ ಮಾಡೋದಕ್ಕಿಂತ ತಮ್ಮದೇ ವ್ಯಾಪಾರ ಆರಂಭಿಸಿ ಮಾಲೀಕರಾಗಬೇಕು ಅನ್ನೋದು 9 ಟು 5 ಜಾಬ್ ಮಾಡೋರ ಆಸೆಯಾಗಿರುತ್ತದೆ. ಆದ್ರೆ ಬಂಡವಾಳದ ಕೊರತೆಯಿಂದ ಬಹುತೇಕರಿಗೆ ಸ್ವಂತ ಬ್ಯುಸಿನೆಸ್ ಆರಂಭಿಸಲು ಸಾಧ್ಯವಾಗಲ್ಲ.
10 ಸಾವಿರ ರೂಪಾಯಿ ಬಂಡವಾಳ
ಇಂದು ಕೇವಲ 10 ಸಾವಿರ ರೂಪಾಯಿಯಲ್ಲಿ ಆರಂಭಿಸಬಹುದಾದ ಐದು ವ್ಯಾಪಾರಗಳ ಬಗ್ಗೆ ಹೇಳುತ್ತಿದ್ದೇವೆ. ಈ ಐದು ವ್ಯವಹಾರಗಳಿಂದ ಪ್ರತಿ ತಿಂಗಳು ಅನಾಯಸವಾಗಿ ಕನಿಷ್ಠ 50 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಆ 5 ವ್ಯವಹಾರಗಳು ಯಾವವು ಎಂದು ನೋಡೋಣ ಬನ್ನಿ.
1.ಪರಿಸರ ಸ್ನೇಹಿ ಉತ್ಪನ್ನಗಳ ಮಾರಾಟ
ಇತ್ತೀಚೆಗೆ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ನ್ಯಾಚುರಲ್ ಸೋಪ್, ಬಿದಿರಿನ ಬುಟ್ಟಿ, ಸ್ಟ್ರಾ, ಚೀಲ ಇನ್ನಿತರ ವಸ್ತುಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು. ನೇರವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡಿ ಅತ್ಯಧಿಕ ಲಾಭ ನಿಮ್ಮದಾಗಿಸಿಕೊಂಡು ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
2.ಗೃಹಾಧಾರಿತ ಪೌಷ್ಟಿಕಾಂಶ ಮತ್ತು ಆರೋಗ್ಯ ಸಲಹಾ ಸಂಸ್ಥೆ
ಇತ್ತೀಚೆಗೆ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ಮನೆಯಾಧಾರಿತ ಆಹಾರಗಳನ್ನು ಹುಡುಕಿಕೊಂಡು ಜನರು ಹೋಗುತ್ತಿದ್ದಾರೆ. ಆನ್‌ಲೈನ್ ಮೂಲಕ ಆರೋಗ್ಯದ ಬಗ್ಗೆ ಸಲಹೆ ನೀಡಿ ಹಣ ಸಂಪಾದಿಸಬಹುದು. ಆನ್‌ಲೈನ್ ಕೋರ್ಸ್ ಆರಂಭಿಸಲು ಕನಿಷ್ಠ 10 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಒಬ್ಬ ಕ್ಲೈಂಟ್‌ನಿಂದ 5 ಸಾವಿರ ರೂ.ಗಳವರೆಗೆ ಶುಲ್ಕ ಪಡೆದುಕೊಳ್ಳಬಹುದು. ತಿಂಗಳಿಗೆ 10 ಕ್ಲೈಂಟ್ ಸಿಕ್ಕರೂ ಮಾಸಿಕವಾಗಿ 50 ಸಾವಿರ ರೂಪಾಯಿ ಸಂಪಾದಿಸಬಹುದು.
ತೋಟಗಾರಿಕೆ ಮತ್ತು ಸಾವಯವ
ತೋಟಗಾರಿಕೆ ಮತ್ತು ಸಾವಯವ ಉತ್ಪನ್ನಗಳಲ್ಲಿ ಆಸಕ್ತಿ ಹೊಂದಿದ್ದರೆ, ಸಾವಯವ ಸಸ್ಯ ಮತ್ತು ಗಿಡಮೂಲಿಕೆ ತೋಟಗಾರಿಕೆ ವ್ಯವಹಾರವನ್ನು ಪ್ರಾರಂಭಿಸಬಹುದು. ಬೀಜಗಳು, ಮಡಿಕೆ, ಸಸ್ಯಗಳನ್ನು ಪಾಲನೆ ಮಾಡಲು ಕನಿಷ್ಠ 10 ಸಾವಿರ ಬೇಕಾಗುತ್ತದೆ. ಒಂದು ಸಸ್ಯವನ್ನು 100 ರಿಂದ 500 ರೂ.ಗಳವರೆಗೆ ಮಾರಾಟ ಮಾಡಿ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಸಂಪಾದಿಸಬಹುದು.
4.ಬೇಕರಿ ಮತ್ತು ಆರೋಗ್ಯಕರ ತಿಂಡಿಗಳು
ಜನರು ಹೋಮ್ ಮೇಡ್ ಪ್ರೊಡಕ್ಟ್‌ನತ್ತ ಮುಖ ಮಾಡುತ್ತಿರುವ ಕಾರಣ ಆರೋಗ್ಯಕರ ಮತ್ತು ಪ್ರೀಮಿಯಂ ಗುಣಮಟ್ಟದ ಬೇಕರಿ ತಿಂಡಿಗಳನ್ನು ಮಾರಾಟ ಮಾಡಬಹುದು. ಮನೆಯಲ್ಲಿಯೇ ಕುಳಿತು ಆಹಾರ ತಯಾರಿಸಿ ಸ್ಥಳೀಯ ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಈ ವ್ಯವಹಾರ ಆರಂಭಿಸಲು ಕನಿಷ್ಠ 10 ಸಾವಿರ ರೂಪಾಯಿ ಬಂಡವಾಳದ ಅಗತ್ಯತೆ ಇರುತ್ತದೆ. ಪ್ರತಿ ಆರ್ಡರ್‌ಗೆ ₹200-500 ಶುಲ್ಕ ವಿಧಿಸಿದರೆ ಮತ್ತು ತಿಂಗಳಿಗೆ 100-150 ಆರ್ಡರ್ ಸ್ವೀಕರಿಸಿ ಮಾರಾಟ ಮಾಡಿದ್ರೆ ಸರಳವಾಗಿ 50 ಸಾವಿರ ರೂಪಾಯಿ ಸಂಪಾದಿಸಬಹುದು.
ಇದನ್ನೂ ಓದಿ: ಮನೆಯಲ್ಲೇ ಇದ್ದು ತಿಂಗಳಿಗೆ ₹50 ಸಾವಿರ ಗಳಿಸಿ; ಎಂದೂ ನಷ್ಟ ಅನುಭವಿಸದ ಚಾಕೋಲೇಟ್ ಬಿಸಿನೆಸ್ ಆರಂಭಿಸಿ!
5.ಮನೆ ಆಧಾರಿತ ಚರ್ಮದ ಆರೈಕೆ ಅಥವಾ ನೈಸರ್ಗಿಕ ಸೌಂದರ್ಯವರ್ಧಕಗಳು
ಫ್ಯಾಶನ್ ಜಗತ್ತಿನ ಸೆಳೆತ ನಿಮಗಿದ್ರೆ ಮನೆಯಲ್ಲಿಯೇ ತಯಾರಿಸಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಬಹುದು. ಉತ್ತಮ ಗುಣಮಟ್ಟದ ಫೇಸ್ ಪ್ಯಾಕ್‌ಗಳು, ಸ್ಕ್ರಬ್‌ಗಳು, ಬಾಡಿ ಲೋಷನ್‌ಗಳು ಮತ್ತು ನೈಸರ್ಗಿಕ ಕ್ರೀಮ್ ತಯಾರಿಸಿ ಮಾರೋದು ಇಂದಿನ ಲಾಭದಾಯಕ ವ್ಯವಹಾರಗಳಲ್ಲಿ ಒಂದಾಗಿದೆ. ಪ್ರತಿ ಉತ್ಪನ್ನಕ್ಕೆ ₹200-500 ಶುಲ್ಕ ವಿಧಿಸಿದರೆ ಮತ್ತು ತಿಂಗಳಿಗೆ 100-150 ಉತ್ಪನ್ನಗಳನ್ನು ಮಾರಾಟ ಮಾಡಿದರೆ, ನೀವು ₹50,000 ವರೆಗೆ ಗಳಿಸಬಹುದು.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಯಾವುದೇ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಮನೆಯಿಂದಲೇ ತಿಂಗಳಿಗೆ 50,000 ಗಳಿಸಿ: ಅತಿ ಹೆಚ್ಚು ಲಾಭ ತಂದುಕೊಡುವ ಮೈಕ್ರೋ ಕೃಷಿ