ವಾರ್ಷಿಕ 694 ಕೋಟಿ ರೂ ಇದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಸ್ಯಾಲರಿ ಹೈಕ್,ಈಗ ಎಷ್ಟು?
ವಾರ್ಷಿಕ 694 ಕೋಟಿ ರೂ ಇದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಸ್ಯಾಲರಿ ಹೈಕ್,ಈಗ ಎಷ್ಟು? ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ನಾಡೆಲ್ಲ ಸ್ಯಾಲರಿ ಶೇಕಡಾ 22ರಷ್ಟು ಹೆಚ್ಚಳವಾಗಿದೆ. ಇದೀಗ ನಾಡೆಲ್ಲ ವಾರ್ಷಿಕವಾಗಿ ಪಡೆಯುವ ಸ್ಯಾಲರಿ ಎಷ್ಟಾಗಿದೆ ಗೊತ್ತಾ?

ಭಾರತೀಯ ಮೂಲ ಸತ್ಯ ನಾಡೆಲ್ಲ ಸ್ಯಾಲರಿ ಹೆಚ್ಚಳ
ಭಾರತೀಯ ಮೂಲ ಸತ್ಯ ನಾಡೆಲ್ಲ ಸ್ಯಾಲರಿ ಹೆಚ್ಚಳ
ವಿಶ್ವದ ಅತೀ ದೊಡ್ಡ ಟೆಕ್ ಕಂಪನಿಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದು. ಭಾರತ ಸೇರಿದಂತೆ ವಿಶ್ವಾದ್ಯಂತ ಮೈಕ್ರೋಸಾಫ್ಟ್ ಕಂಪನಿ ಹರಡಿಕೊಂಡಿದೆ. ಸಾಫ್ಟ್‌ವೇರ್ ಡೆಲವಪ್‌ಮೆಂಟ್, ಟೆಕ್ ಸೊಲ್ಯೂಶನ್ ಸೇರಿ ಮೈಕ್ರೋಸಾಫ್ಟ್ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಈ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಭಾರತೀಯ ಸತ್ಯ ನಾಡೆಲ್ಲಾ. ಇದೀಗ ಸತ್ಯ ನಾಡೆಲ್ಲ ಮತ್ತೆ ಸದ್ದು ಮಾಡುತ್ತಿದ್ದಾರೆ. ಕಾರಣ ಅವರ ವೇತನ.
694 ಕೋಟಿ ರೂಪಾಯಿಯಿಂದ ಶೇಕಡಾ 22ರಷ್ಟು ಹೆಚ್ಚಳ
ಸದ್ಯ ಸತ್ಯ ನಾಡೆಲ್ಲಾ ವಾರ್ಷಿಕ ಸರಿಸುಮಾರು 694 ಕೋಟಿ ರೂಪಾಯಿ (79.1 ಮಿಲಿಯನ್ ಅಮೆರಿಕನ್ ಡಾಲರ್) ವೇತನ ಪಡೆಯುತ್ತಿದ್ದಾರೆ. ಆದರೆ ಇದೀಗ ಸತ್ಯ ನಾಡೆಲ್ಲಾ ಸ್ಯಾಲರಿಯನ್ನು ಶೇಕಡಾ 22ರಷ್ಟು ಹೆಚ್ಚಳ ಮಾಡಲಾಗಿದೆ. ಸ್ಯಾಲರಿ ಹೈಕ್ ಬಳಿಕ ಇದೀಗ ಸತ್ಯ ನಾಡೆಲ್ಲಾ ವಾರ್ಷಿಕ ಸ್ಯಾಲರಿ ಪ್ಯಾಕೇಜ್ ಬರೋಬ್ಬರಿ 847.31 ಕೋಟಿ ರೂಪಾಯಿ.
ಗರಿಷ್ಠ ಸ್ಯಾಲರಿ ಪಡೆಯುವ ಸಿಇಒ
ಗರಿಷ್ಠ ಸ್ಯಾಲರಿ ಪಡೆಯುವ ಸಿಇಒ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಗರಿಷ್ಠ ವೇತನ ಪಡೆಯುತ್ತಿರುವ ವಿಶ್ವದ ಸಿಇಒ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದಾರೆ. ವಾರ್ಷಿಕ 847.31 ಕೋಟಿ ರೂಪಾಯಿ (96.5 ಮಿಲಿಯನ್ ಅಮೆರಿಕನ್ ಡಾಲರ್ ) ವೇತನವಾಗಿ ಪಡೆಯಲಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸತ್ಯ ನಾಡೆಲ್ಲ ಸ್ಯಾಲರಿ ಇದೀಗ ಚರ್ಚೆಯಾಗುತ್ತಿದೆ.
ಮೈಕ್ರೋಸಾಫ್ಟ್ ಸ್ಟಾಕ್ಸ್‌ನಿಂದ 84 ಮಿಲಿಯನ್ ಡಾಲರ್
96.5 ಮಿಲಿಯನ್ ಅಮೆರಿಕನ್ ಡಾಲರ್ ಸತ್ಯ ನಾಡೆಲ್ಲ ಸ್ಯಾಲರಿ ಪ್ಯಾಕೇಜ್‌ನಲ್ಲಿ 84 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಮೈಕ್ರೋಸಾಫ್ಟ್ ಸ್ಟಾಕ್‌ನಿಂದ ಬರುತ್ತಿದೆ. ಇನ್ನು 9.5 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ನಗದು ರೂಪದಲ್ಲಿ ಪಡೆಯಲಿದ್ದಾರೆ. ಶೇಕಡಾಾ 23ರಷ್ಟು ಮೈಕ್ರೋಸಾಫ್ಟ್ ಸ್ಟಾಕ್ಸ್ ಹೊಂದಿದ್ದಾರೆ.
2024ಕ್ಕೆ ಹೋಲಿಸಿದರೆ ಶೇಕಡಾ 63ರಷ್ಟು ಹೆಚ್ಚಳ
2024ರ ಸ್ಯಾಲರಿಗೆ ಹೋಲಿಸಿದರೆ ಸತ್ಯ ನಾಡೆಲ್ಲಾ ಸ್ಯಾಲರಿ ಶೇಕಡಾ 63 ರಷ್ಟು ಹೆಚ್ಚಾಗಿದೆ. ಜುಲೈ ತಿಂಳಲ್ಲಿ ಸತ್ಯ ನಾಡೆಲ್ಲಾ ಸ್ಯಾಲರಿ ವಾರ್ಷಿಕ ವೇತನ ಪರಿಷ್ಕರಣೆಯಲ್ಲಿ ಶೇಕಡಾ 18ರಷ್ಟು ಹೆಚ್ಚಳ ಮಾಡಲಾಗಿತ್ತು. 2023-24ರ ಸಾಲಿನಲ್ಲಿ 48 ಮಿಲಿಯನ್ ಇದ್ದ ಸ್ಯಾಲರಿ 2024-25ರಲ್ಲಿ 79.1 ಮಿಲಿಯನ್‌ಗೆ ಹೆಚ್ಚಳವಾಗಿತ್ತು. ಇದೀಗ 96.5 ಮಿಲಿಯನ್ ಆಗಿದೆ.
ಕಳೆದ ಮೂರು ವರ್ಷದಲ್ಲಿ ಮೈಕ್ರೋಸಾಫ್ಟ್ ಷೇರು ಮೌಲ್ಯ ಡಬಲ್
ಕಳೆದ ಮೂರು ವರ್ಷದಲ್ಲಿ ಮೈಕ್ರೋಸಾಫ್ಟ್ ಷೇರು ಮೌಲ್ಯ ಡಬಲ್
ಕಳೆದ ಮೂರು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಷೇರು ಮೌಲ್ಯ ದುಪ್ಪಟ್ಟಾಗಿದೆ. ಓಪನ್ ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಮೈಕ್ರೋಸಾಫ್ಟ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಸೇವೆ ನೀಡುತ್ತಿದೆ. ಇದರೊಂದಿಗೆ ಮೈಕ್ರೋಸಾಫ್ಟ್ ಮೌಲ್ಯ ಕೂಡ ಹೆಚ್ಚಾಗಿದೆ. ಇತ್ತ ಸತ್ಯ ನಾಡೆಲ್ಲಾ ವೇತನವಾಗಿ ಪಡೆಯುವ ಮೊತ್ತ ಕೂಡ ಹೆಚ್ಚಾಗಿದೆ.