ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ
ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ, ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ ಅತ್ಯಂತ ಆಕರ್ಷಕ ಅವಕಾಶ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಈಕ್ವಿಟಿ ಮೌಲ್ಯ
ಮುಕೇಶ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್ ಇದೀಗ ಹೂಡಿಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಐಪಿಒ ಬಿಡುಗಡೆ ಮಾಡುವ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ‘ಪ್ರೀಮಿಯಂ ಮೌಲ್ಯಮಾಪನ ಆಗಿರಲಿದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ಭವಿಷ್ಯ ನುಡಿದಿದೆ. ಹಣಕಾಸು ವರ್ಷ 21ರ ಹೈ-ಪ್ರೊಫೈಲ್ ಈಕ್ವಿಟಿ ಏರಿಕೆಯಂತೆಯೇ 2027ರ ಸೆಪ್ಟೆಂಬರ್ ವೇಳೆಗೆ ಕಂಪನಿಯ ಈಕ್ವಿಟಿ ಮೌಲ್ಯವನ್ನು 14,800 ಕೋಟಿ ಅಮೆರಿಕನ್ ಡಾಲರ್ ಗೆ ನಿಗದಿಪಡಿಸಿದೆ. ಅಂದರೆ ಇವತ್ತಿಗೆ ಅಮೆರಿಕದ ಡಾಲರ್ ಮೌಲ್ಯವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕಾದಲ್ಲಿ, 12,99,640 ಕೋಟಿ ರೂಪಾಯಿ (12.99 ಲಕ್ಷ ಕೋಟಿ ರೂಪಾಯಿ).
ಷೇರು ಮಾರುಕಟ್ಟೆ ಲಿಸ್ಟಿಂಗ್
ಜಿಯೋದಿಂದ ಸುಧಾರಿತ ದರ, 5ಜಿ ಅಳವಡಿಕೆಗೆ ನವೀಕರಿಸಿದ ಪ್ರಯತ್ನಗಳಿಂದ ಜಿಯೋ ಪ್ರೀಮಿಯಂ ಟ್ರೆಂಡ್ ವಿಸ್ತರಿಸುತ್ತದೆ. ಇದರ ಜೊತೆಗೆ ಜಿಯೋ ಪ್ಲಾಟ್ ಫಾರ್ಮ್ಸ್ ಪ್ರಸ್ತಾವಿತ ಲಿಸ್ಟಿಂಗ್, ಮೌಲ್ಯಮಾಪನದ ಮೇಲೆ ಸಂಭವನೀಯ ಸಕಾರಾತ್ಮಕ ಪ್ರಭಾ ಇರಲಿೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರಗಳನ್ನು ಹೊಂದಿರುವ ಘಟಕ ಜಿಯೋ ಪ್ಲಾಟ್‌ಫಾರ್ಮ್ಸ್ 2026ರ ಮೊದಲಾರ್ಧದಲ್ಲಿ ಐಪಿಒ ಮತ್ತು ಷೇರು ಮಾರುಕಟ್ಟೆ ಲಿಸ್ಟಿಂಗ್ ಗೆ ಸಜ್ಜಾಗುತ್ತಿದೆ. ಈ ಷೇರು ಮಾರಾಟವು ದೇಶದ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿಯೇ ದೊಡ್ಡದಾಗಿರಲಿದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.
ಮುಕೇಶ್ ಅಂಬಾನಿ ಸಂತಸ
ಇದು ಎಲ್ಲ ಹೂಡಿಕೆದಾರರಿಗೆ ಅತ್ಯಂತ ಆಕರ್ಷಕ ಅವಕಾಶವಾಗಲಿದೆ ಎಂದು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಭವಿಷ್ಯದ ಜಿಯೋ ಯೋಜನೆಗಳು "ಇನ್ನಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿವೆ ಎಂದಿದ್ದಾರೆ. ಜೆಪಿಎಲ್ ಐಪಿಒ ಪ್ರೀಮಿಯಂ ಮೌಲ್ಯಮಾಪನಗಳಲ್ಲಿ ಬರಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಇದು ಹಣಕಾಸು ವರ್ಷ 21ರಲ್ಲಿ 65ರಿಂದ 70 ಬಿಲಿಯನ್ (ಆರೂವರೆಯಿಂದ ಏಳು ಸಾವಿರ ಕೋಟಿ) ಯುಎಸ್‌ಡಿ ಮೌಲ್ಯಮಾಪನದಲ್ಲಿ ಕಂಪನಿಯ ಈಕ್ವಿಟಿ ಹೆಚ್ಚಳವನ್ನು ಉಲ್ಲೇಖಿಸಿದೆ.
ಮುಕೇಶ್ ಅಂಬಾನಿ ಸಂತಸ
ಜಿಯೋದಲ್ಲಿದೆ ಮೆಟಾ, ಗೂಗಲ್ ಪಾಲು
ಜಿಯೋದಲ್ಲಿದೆ ಮೆಟಾ, ಗೂಗಲ್ ಪಾಲು
ಸದ್ಯಕ್ಕೆ ಜೆಪಿಎಲ್ ನ ಶೇ 66.3ರಷ್ಟು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಒಡೆತನದಲ್ಲಿದೆ. ಜೆಪಿಎಲ್ ಈ ಹಿಂದೆ ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ, ಇಂಟೆಲ್ ಕ್ಯಾಪಿಟಲ್ ಮತ್ತು ಕ್ವಾಲ್ಕಾಮ್ ವೆಂಚರ್ಸ್ ಸೇರಿ 13 ಹೂಡಿಕೆದಾರರಿಂದ ಸುಮಾರು 1,52,056 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಒಟ್ಟು ಶೇ 32.9ರಷ್ಟು ಪಾಲನ್ನು ಈ ಕಂಪನಿಗಳು ಪಡೆದುಕೊಂಡಿದ್ದವು. ಜಿಯೋ ಪ್ಲಾಟ್‌ಫಾರ್ಮ್ ನಲ್ಲಿ ಫೇಸ್‌ಬುಕ್ (ಈಗ ಮೆಟಾ) ಶೇ 10 ರಷ್ಟು ಪಾಲನ್ನು ಹೊಂದಿದ್ದರೆ, ಗೂಗಲ್ ಶೇ 7.7 ರಷ್ಟು ಪಾಲನ್ನು ಹೊಂದಿದೆ. ಇತರೆ ಹೂಡಿಕೆದಾರರು ಉಳಿದ ಶೇ 16 ರಷ್ಟು ಪಾಲನ್ನು ಹೊಂದಿದ್ದಾರೆ.