ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಕರ್ನಾಟಕದಲ್ಲಿ ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ ಯಮಹಾ
ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಕರ್ನಾಟಕದಲ್ಲಿ ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ ಯಮಹಾ, ಇದರ ಜೊತೆಗೆ ವಿಶೇಷ ಇನ್ಶೂರೆನ್ಸ್ ಆಫರ್ ನೀಡಲಾಗಿದೆ. ಯಮಹಾದ ಯಾವ ಬೈಕ್ ಹಾಗೂ ಸ್ಕೂಟರ್ ಮೇಲೆ ಆಫರ್ ನೀಡಲಾಗಿದೆ?

ಯಮಹಾ ದೀಪಾವಳಿ ಆಫರ್
ಯಮಹಾ ದೀಪಾವಳಿ ಆಫರ್
ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಲವು ಆಟೋ ಕಂಪನಿಗಳು ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಆಫರ್ ನೀಡುತ್ತಿದೆ. ಇದೀಗ ಯಮಹಾ ಇಂಡಿಯಾ ವಿಶೇಷವಾಗಿ ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಆಫರ್ ಘೋಷಿಸಿದೆ. ಈ ಶುಭ ಸಂದರ್ಭದಲ್ಲಿ ಗ್ರಾಹಕರ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಯಮಹಾ ತನ್ನ ಜನಪ್ರಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮೆ ಆಫರ್ ಗಳು ಮತ್ತು ಕ್ಯಾಶ್ ಬ್ಯಾಕ್ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ.
ಆಫರ್ ಜೊತೆಗೆ ಜಿಎಸ್‌ಟಿ ಲಾಭ
ಆಫರ್ ಜೊತೆಗೆ ಜಿಎಸ್‌ಟಿ ಲಾಭ
ಒಂದೆಡೆ ಜಿಎಸ್‌ಟಿ ಕಡಿತದ ಲಾಭ, ಮತ್ತೊಂದೆಡೆ ಆಫರ್ ಕಾರಣ ಇದು ಯಮಹಾ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಸೂಕ್ತ ಸಮಯ. ಅತೀ ಕಡಿಮೆ ಬೆಲೆಗೆ ಬೈಕ್ ಹಾಗೂ ಸ್ಕೂಟರ್ ಲಭ್ಯವಾಗುತ್ತಿದೆ. ಇದರೊಂದಿಗೆ ವಿಮೆ ಸೇರಿದಂತೆ ಇತರ ನಿರ್ವಹಣೆ ಕುರಿತು ಆಫರ್ ಕೂಡ ಇರುವ ಕಾರಣ ವಾಹನ ಮುಂದಿನ ದಿನಗಳಲ್ಲಿ ವಾಹನ ನಿರ್ವಹಣೆ ವೆಚ್ಚ ಕೂಡ ಕಡಿಮೆಯಾಗಲಿದೆ.
ಯಮಹಾದ ದೀಪಾವಳಿ ವಿಶೇಷ ಆಫರ್ ಗಳು:
ಯಮಹಾದ ದೀಪಾವಳಿ ವಿಶೇಷ ಆಫರ್ ಗಳು:
• R15 V4: ಈ ವಾಹನದ ಮೇಲೆ Rs. 15,734 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
• MT-15: ಈ ವಾಹನದ ಮೇಲೆ Rs. 14,964 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
• FZ-S Fi Hybrid: ಈ ವಾಹನದ ಮೇಲೆ Rs. 12,031 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,501 ಮೌಲ್ಯದ ವಿಮಾ ಪ್ರಯೋಜನ
• Fascino 125 Hybrid: Rs. 8,509 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 5,401 ಮೌಲ್ಯದ ವಿಮಾ ಪ್ರಯೋಜನ
• RayZR 125 Fi: Rs. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 3,799 ವರೆಗೆ ಪ್ರಯೋಜನ
ಹೈಬ್ರಿಡ್ ಸ್ಕೂಟರ್ ಮೇಲೆ ಕ್ಯಾಶ್‌ಬ್ಯಾಕ್
ಹೈಬ್ರಿಡ್ ಸ್ಕೂಟರ್ ಮೇಲೆ ಕ್ಯಾಶ್‌ಬ್ಯಾಕ್
ಎಲ್ಲಾ ದ್ವಿಚಕ್ರ ವಾಹನಗಳ ಮೇಲೆ ವಿಶೇಷ ವಿಮಾ ಪ್ರಯೋಜನಗಳು ಮತ್ತು RayZR 125 Fi ಹೈಬ್ರಿಡ್ ಸ್ಕೂಟರ್ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಗಳು ನೀಡಲಾಗಿದೆ. ಪ್ರತೀ ರೈಡ್ ನಲ್ಲಿಯೂ ಹೆಚ್ಚು ಹುಮ್ಮಸ್ಸನ್ನು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಭಾರತದಲ್ಲಿ ಯಮಹಾ ವಾಹನಗಳು ಅತ್ಯಂತ ಜನಪ್ರಿಯವಾಗಿದೆ.
ಸೀಮಿತ ಅವಧಿಯ ಆಫರ್
ಸೀಮಿತ ಅವಧಿಯ ಆಫರ್
ಯಮಹಾ ಬೇರೆ ಬೇರೆ ರಾಜ್ಯದಳಲ್ಲಿ ಬೇರೆ ಬೇರೆ ಆಫರ್ ನೀಡಿದೆ. ಆದರೆ ಕರ್ನಾಟಕದಲ್ಲಿ ಅತ್ಯುತ್ತಮ ಆಫರ್ ನೀಡುವ ಮೂಲಕ ಈ ದೀಪಾವಳಿ ಸಂಬ್ರಮ ಡಬಲ್ ಮಾಡಿದೆ. ಇತ್ತ ಯಮಹಾ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಇದು ಸೀಮಿತ ಅವಧಿಯ ಆಫರ್ ಆಗಿದೆ. ಹೀಗಾಗಿ ಆಫರ್ ಬೆಲೆಯಲ್ಲಿ ಖರೀದಿಸಲು ಇಚ್ಚಿಸುವವರ ಸಮೀಪದ ಡೀಲರ್ ಸಂಪರ್ಕಿಸಿ.