ಹೈಬ್ರಿಡ್ ತಂತ್ರಜ್ಞಾನದ ಸ್ಕೂಟರ್ ಲಾಂಚ್ ಮಾಡಿದ ಯಮಹಾ, ಬೆಲೆ ಎಷ್ಟು?
ಕಾರಿನಂತೆ ಇದೀಗ ಸ್ಕೂಟರ್‌ನಲ್ಲೂ ಹೈಬ್ರಿಡ್ ತಂತ್ರಜ್ಞಾನ ಬಂದಿದೆ. ಯಮಹಾ ಇದೀಗ ಎರಡೂ ಹೈಬ್ರಿಡ್ ಸ್ಕೂಟರ್ ಲಾಂಚ್ ಮಾಡಿದೆ. ಇದರ ಬೆಲೆ ಎಷ್ಟು?

ಯಮಹಾ ಭಾರತದಲ್ಲಿ ಸ್ಕೂಟರ್ ಹಾಗೂ ಬೈಕ್ ಮೂಲಕ ಗ್ರಾಹಕರ ಸೆಳೆಯುತ್ತಿದೆ. ಕಾರಿನಂತೆ ಹೈಬ್ರಿಡ್ ತಂತ್ರಜ್ಞಾನದ ಸ್ಕೂಟರ್ ನೀಡುವ ಮೂಲಕ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ಹೈಬ್ರಿಡ್ ಸ್ಕೂಟರ್ ಅಪ್‌ಗ್ರೇಡೆಟ್ ವರ್ಶನ್ ಬಿಡುಗಡೆ ಮಾಡಿದೆ. ಯಮಹಾ ತನ್ನ 125 ಸಿಸಿ Fi ಹೈಬ್ರಿಡ್ ಸ್ಕೂಟರ್ ಅಪ್‌ಡೇಟೆಡ್ ವರ್ಷನ್ ಬಿಡುಗಡೆ ಮಾಡಿದೆ. Fascino 125 Fi ಹೈಬ್ರಿಡ್ ಮತ್ತು RayZR 125 Fi ಹೈಬ್ರಿಡ್ ಈಗ ಅತ್ಯಾಧುನಿಕ ಸ್ಮಾರ್ಟ್ ಫೀಚರ್ ಗಳು ಮತ್ತು ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ. ಸವಾರರಿಗೆ ಆಕರ್ಷಕ ಮತ್ತು ಆರಾಮದಾಯಕ ರೈಡಿಂಗ್ ಅನುಭವವನ್ನು ಒದಗಿಸುತ್ತದೆ.
ಯಮಹಾ ಹೈಬ್ರಿಡ್ ಸ್ಕೂಟರ್ ಬೆಲೆ
Fascino S 125 Fi ಹೈಬ್ರಿಡ್ (TFT/ TBT): 1,02,790 ರೂಪಾಯಿ
Fascino S 125 Fi ಹೈಬ್ರಿಡ್: 95,850 ರೂಪಾಯಿ
Fascino 125 Fi ಹೈಬ್ರಿಡ್: 80,750 ರೂಪಾಯಿ
RayZR ಸ್ಟ್ರೀಟ್ ರ್ಯಾಲಿ 125 Fi ಹೈಬ್ರಿಡ್: 92,970 ರೂಪಾಯಿ
RayZR 125 Fi ಹೈಬ್ರಿಡ್: 79,340 ರೂಪಾಯಿ
2025ರ ಯಮಹಾ ಹೈಬ್ರಿಡ್ ಸ್ಕೂಟರ್ ಶ್ರೇಣಿಯು ಈಗ ‘Enhanced Power Assist’ ಫೀಚರ್ ಅನ್ನು ಹೊಂದಿದೆ. ಇದನ್ನು ಯಮಹಾದ ನವೀನ ಹೈಬ್ರಿಡ್ ತಂತ್ರಜ್ಞಾನದ ಮೇಲೆ ನಿರ್ಮಿಸಲಾಗಿದೆ. ಹೆಚ್ಚಿನ ಕಾರ್ಯಕ್ಷಮತೆಯ ಬ್ಯಾಟರಿಯಿಂದ ಚಾಲಿತವಾಗಿರುವ ಈ ಹೈಬ್ರಿಡ್ ಸ್ಕೂಟರ್ ಗಳು ದೀರ್ಘಕಾಲದವರೆಗೆ ಹೆಚ್ಚಿನ ಟಾರ್ಕ್ ಅನ್ನು ಒದಗಿಸುತ್ತವೆ. ಇದರಿಂದಾಗಿ ಅತ್ಯುತ್ತಮ ಆಕ್ಸಿಲರೇಷನ್ ಮತ್ತು ಸುಧಾರಿತ ಕಾರ್ಯಕ್ಷಮತೆ ದೊರೆಯುತ್ತದೆ. ಅದರಲ್ಲೂ ವಿಶೇಷವಾಗಿ ಭಾರವನ್ನು ಹೊತ್ತಿರುವಾಗ ಅಥವಾ ಎತ್ತರದ ಪ್ರದೇಶಗಳನ್ನು ಏರುವಾಗ ಅತ್ಯುತ್ತಮ ರೈಡಿಂಗ್ ಅನುಭವ ಒದಗಿಸುತ್ತವೆ. ಸ್ಮಾರ್ಟ್ ಮೋಟರ್ ಜನರೇಟರ್ (ಎಸ್ ಎಂ ಜಿ) ತಂತ್ರಜ್ಞಾನ, ಸೈಲೆಂಟ್ ಸ್ಟಾರ್ಟ್ ಮತ್ತು ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್) ಹೊಂದಿರುವ ಈ ಸ್ಕೂಟರ್‌ಗಳು ಉನ್ನತ ಇಂಧನ ದಕ್ಷತೆ ಜೊತೆಗೆ ಉತ್ತಮ ರೈಡಿಂಗ್ ಸೌಕರ್ಯವನ್ನು ನೀಡುತ್ತವೆ.
ಇದರ ಜೊತೆಗೆ, ಪ್ರೀಮಿಯಂ ವೇರಿಯೆಂಟ್ ಆದ Fascino S ನಲ್ಲಿ ಈಗ ಟರ್ನ್-ಬೈ-ಟರ್ನ್ (ಟಿಬಿಟಿ) ನ್ಯಾವಿಗೇಷನ್ ಇರುವ ಕಲರ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ದೊರೆಯಲಿದೆ. ಇದು ಸವಾರರಿಗೆ ಹೆಚ್ಚಿನ ಅನುಕೂಲತೆ ಮತ್ತು ಅತ್ಯುತ್ತಮ ಕನೆಕ್ಟಿವಿಟಿ ಸೌಲಭ್ಯ ಒದಗಿಸಲಿದೆ. ಕಲರ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ವೈ- ಕನೆಕ್ಟ್ ಆಪ್ ಮೂಲಕ ಸ್ಮಾರ್ಟ್‌ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಈ ಮೂಲಕ ಸವಾರರು ಯಾವಾಗಲೂ ಕನೆಕ್ಟೆಡ್ ಆಗಿರಬಹುದು. ಗೂಗಲ್ ಮ್ಯಾಪ್ಸ್ ಜೊತೆಗೆ ಸಂಯೋಜಿತವಾಗಿರುವ ಈ ಇನ್ ಸ್ಟ್ರುಮೆಂಟ್ ನಲ್ಲಿ ಟಿಬಿಟಿ ನ್ಯಾವಿಗೇಷನ್ ಸೌಲಭ್ಯ ಲಭ್ಯ. ವಿಶೇಷವಾಗಿ ಇದರಲ್ಲಿ ಅತ್ಯುತ್ತಮ ಮ್ಯಾಪ್ ಸೌಲಭ್ಯ ಲಭ್ಯವಿದ್ದು, ಈ ಮೂಲಕ ಸವಾರರು ಸುಗಮವಾಗಿ ಮತ್ತು ತೊಂದರೆಯಿಲ್ಲದೆ ರೈಡಿಂಗ್ ಅನುಭವ ಹೊಂದಬಹುದು.
Fascino S 125 Fi Hybrid ಈಗ ಆಕರ್ಷಕ ಮ್ಯಾಟ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. Fascino 125 Fi Hybrid ನ ಡಿಸ್ಕ್-ಬ್ರೇಕ್ ವೇರಿಯೆಂಟ್ ಮೆಟಾಲಿಕ್ ಲೈಟ್ ಗ್ರೀನ್ ಬಣ್ಣದಲ್ಲಿ ದೊರೆಯುತ್ತದೆ. ಡ್ರಮ್-ಬ್ರೇಕ್ ವೇರಿಯೆಂಟ್ ಆಕರ್ಷಕವಾದ ಮೆಟಾಲಿಕ್ ವೈಟ್ ಬಣ್ಣದಲ್ಲಿ ಲಭ್ಯ. ಜೊತೆಗೆ, RayZR 125 Fi Hybrid Street Rally ಸ್ಕೂಟರ್ ಮ್ಯಾಟ್ ಗ್ರೇ ಮೆಟಾಲಿಕ್ ಶೇಡ್ ನಲ್ಲಿ ಲಭ್ಯವಿದೆ ಮತ್ತು RayZR 125 Fi Hybrid ನ ಡಿಸ್ಕ್ ವೇರಿಯೆಂಟ್ ಸಿಲ್ವರ್ ವೈಟ್ ಕಾಕ್‌ಟೇಲ್ ಶೇಡ್ ನಲ್ಲಿ ಸಿದ್ಧಗೊಂಡಿದೆ.