ಜಿಎಸ್ಟಿ ಕಡಿತದಿಂದ ಕೈಗೆಟುಕುವ ಬೆಲೆಯಲ್ಲಿ ಹೋಂಡಾ ಆ್ಯಕ್ಟಿವಾ, ಇಲ್ಲಿದೆ ಬೆಲೆ ಲಿಸ್ಟ್
ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ಬೆಲೆಯಲ್ಲಿ ಹೋಂಡಾ ಆ್ಯಕ್ಟಿವಾ, ಇಲ್ಲಿದೆ ಬೆಲೆ ಲಿಸ್ಟ್ ಜಿಎಸ್‌ಟಿ ಕಡಿತದಿಂದ ಸ್ಕೂಟರ್ ಬೆಲೆಗಳು ಗಣನೀಯವಾಗಿ ಇಳಿಕೆಯಾಗುತ್ತಿದೆ. ಜನಪ್ರಿಯ ಹಾಗೂ ಅತೀ ಹೆಚ್ಚು ಮಾರಾಟವಾಗುವ ಹೋಂಡಾ ಆ್ಯಕ್ಟಿವಾ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

18 ಸಾವಿರ ರೂಗೂ ಅಧಿಕ ಕಡಿತ
18 ಸಾವಿರ ರೂಗೂ ಅಧಿಕ ಕಡಿತ
ದೇಶಾದ್ಯಂತ ಜಿಎಸ್‌ಟಿ ಕಡಿತದ ಕ್ರಾಂತಿಕಾರಕ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದರಿಂದ ಹಲವು ವಸ್ತುಗಳ ಬೆಲೆ ಕಡಿಮೆಯಾಗುತ್ತಿದೆ. ಪ್ರಮುಖವಾಗಿ ವಾಹನ ಮಾರಾಟದಲ್ಲಿ ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ. ಕಾರಣ ಹಲವು ವಾಹನಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ. ಈ ಪೈಕಿ ಹೋಂಡಾ ಸ್ಕೂಟರ್ ಹಾಗೂ ಬೈಕ್ ಮೇಲೆ ಬೆಲೆಯೂ ಇಳಿಕೆಯಾಗುತ್ತಿದೆ. ಹೋಂಡಾ ಸ್ಕೂಟರ್ ಹಾಗೂ ಬೈಕ್ ಮೇಲೆ ಗರಿಷ್ಠ 18 ಸಾವಿರ ರೂಪಾಯಿಗೂ ಅಧಿಕ ಕಡಿತವಾಗುತ್ತಿದೆ.
ಹೋಂಡಾ ಆ್ಯಕ್ಟಿವಾ ಬೆಲೆ
ಹೋಂಡಾ ಆ್ಯಕ್ಟಿವಾ ಬೆಲೆ
ಹೋಂಡಾ ಆ್ಯಕ್ಟಿವಾ ಬೆಲೆಯಲ್ಲೂ ಭಾರಿ ಇಳಿಕೆಯಾಗುತ್ತಿದೆ. ಪ್ರಮುಖವಾಗಿ ಹೋಂಡಾ ಆ್ಯಕ್ಚಿವಾ 110 ಸ್ಕೂಟರ್ ಬೆಲೆ 7,874 ರೂಪಾಯಿ ಕಡಿತವಾಗಿದೆ. ಹೀಗಾಗಿ ಹೋಂಡಾ ಆ್ಯಕ್ಟೀವಾ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹೋಂಡಾ ಆ್ಯಕ್ಟೀವಾ ಭಾರತದಲ್ಲಿ ಅತೀ ಹೆಚ್ಚು ಮಾರಾಟದ ದಾಖಲೆ ಹೊಂದಿದೆ. ಇದೀಗ ಈ ಬೆಲೆ ಕಡಿತ ಗ್ರಾಹಕರ ಖರೀದಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.
ಹೋಂಡಾ ಆ್ಯಕ್ಟಿವಾ 125
ಹೋಂಡಾ ಆ್ಯಕ್ಟಿವಾ 125
ಹೋಂಡಾ ಆ್ಯಕ್ಟೀವಾದ ಮತ್ತೊಂದು ವೇರಿಯೆಂಟ್ 125 ಸ್ಕೂಟರ್ ಬೆಲೆಯೂ ಇಳಿಕೆಯಾಗಿದೆ. 125 ಸ್ಕೂಟರ್ ಬೆಲೆ 8,259 ರೂಪಾಯಿ ಇಳಿಕೆಯಾಗಿದೆ. ಇತ್ತ ಹೋಂಡಾ ಡಿಯೋ 110 ಸ್ಕೂಟರ್ ಬೆಲೆಯಲ್ಲಿ 7,157 ರೂಪಾಯಿ ಕಡಿತವಾಗಿದೆ.ಹೋಂಡಾ ಡಿಯೋ 125 ಸ್ಕೂಟರ್ ಬೆಲೆ 8,042 ರೂಪಾಯಿ ಇಳಿಕೆಯಾಗಿದೆ.
ಹೋಂಡಾ ಬೈಕ್ ಬೆಲೆಯಲ್ಲೂ ಇಳಿಕೆ
ಹೋಂಡಾ ಬೈಕ್ ಬೆಲೆಯಲ್ಲೂ ಇಳಿಕೆ
ಹೋಂಡಾ ಶೈನ್ 100 ಬೈಕ್ ಬೆಲೆ 5,672 ರೂಪಾಯಿ ಇಳಿಕೆಯಾಗಿದೆ. ಇನ್ನು ಹೊಂಡಾ ಶೈನ್ 100 ಡಿಎಕ್ಸ್ ಬೈಕ್ ಬೆಲೆ 6256 ಕಡಿತವಾಗಿದೆ. ಹೋಂಡಾ ಲಿವೋ 110 ಬೈಕ್ ಬೆಲೆ 7,165 ರೂಪಾಯಿ ಇಳಿಕೆಯಾಗಿದೆ. ಹೋಂಡಾ ಶೈನ್ 125 ಬೈಕ್ ಬೆಲೆ7443 ರೂಪಾಯಿ ಇಳಿಕೆಯಾಗಿದೆ.
ಹೋಂಡಾ ಎಸ್‌ಪಿ to ಸಿಬಿ 350
ಹೋಂಡಾ ಎಸ್‌ಪಿ to ಸಿಬಿ 350
ಹೋಂಡಾ ಎಸ್‌ಪಿ 125 ಬೈಕ್ ಬೆಲೆ 8447 ರೂಪಾಯಿ ಇಳಿಕೆಯಾಗಿದೆ. ಇನ್ನು ಹೋಂಡಾ ಸಿಬಿ 125 ಹಾರ್ನೆಟ್ ಬೈಕ್ ಬೆಲೆ 9229 ರೂಪಾಯಿ ಇಳಿಕೆಯಾಗಿದೆ. ಹೋಂಡಾ ಯುನಿಕಾರ್ನ್ ಬೆಲೆ 9,948 ರೂಪಾಯಿ ಇಳಿಕೆಯಾಗಿದೆ. ಇನ್ನು ಹೋಂಡಾ ಎನ್‌ಎಕ್ಸ್ 200 ಬೈಕ್ ಬೆಲೆ 13,978 ರೂಪಾಯಿ ಇಳಿಕೆಯಾಗಿದೆ. ಹೋಂಡಾ ಸಿಬಿ 250 ಹೈನೆಸ್ ಬೆಲೆ 18,598 ರೂಪಾಯಿ ಹಾಗೂ ಸಿಬಿ350 ಆರ್‌ಎಸ್ ಬೆಲೆ 18,857 ರೂಪಾಯಿ ಇಳಿಕೆಯಾಗಿದೆ.