MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • Photos: ಸಾಂಸ್ಕೃತಿಕ ರಾಯಭಾರಿಯಾಗಿ ನಾಡಹಬ್ಬ ಆಚರಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Photos: ಸಾಂಸ್ಕೃತಿಕ ರಾಯಭಾರಿಯಾಗಿ ನಾಡಹಬ್ಬ ಆಚರಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Kempegowda International Airport ಬೆಂಗಳೂರು, ಒಂದು ವಾರಗಳ ಕಾಲ 'ನಾಡಹಬ್ಬ ದಸರಾ'ವನ್ನು ಅದ್ದೂರಿಯಾಗಿ ಆಚರಿಸಿತು. ಕರ್ನಾಟಕದ ಶ್ರೀಮಂತ ಜಾನಪದ ಕಲೆಗಳನ್ನು ಟರ್ಮಿನಲ್‌ಗಳಲ್ಲಿ ಪ್ರದರ್ಶಿಸಿ, ದೇಶ-ವಿದೇಶಗಳ ಪ್ರಯಾಣಿಕರಿಗೆ ಅನನ್ಯ ಸಾಂಸ್ಕೃತಿಕ ಅನುಭವವನ್ನು ನೀಡಲಾಯಿತು.

2 Min read
Author : Mahmad Rafik
Published : Oct 02 2025, 11:23 AM IST
Share this Photo Gallery
  • FB
  • TW
  • Linkdin
  • Whatsapp
112
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Image Credit : @blrairport_kn

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಒಂದು ವಾರಗಳ ಕಾಲ “ನಾಡಹಬ್ಬ ದಸರಾ”ವನ್ನು ಅದ್ದೂರಿಯಾಗಿ ಆಚರಿಸಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಿತು. ದೇಶ-ವಿದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಅನನ್ಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ಈ ಮೂಲಕ ಲಭ್ಯವಾಯಿತು.

212
ಟರ್ಮಿನಲ್‌ಗಳಲ್ಲಿ ಕರ್ನಾಟಕದ ಕಲಾ ವೈಭವ
Image Credit : @blrairport_kn X Account

ಟರ್ಮಿನಲ್‌ಗಳಲ್ಲಿ ಕರ್ನಾಟಕದ ಕಲಾ ವೈಭವ

ಸೆಪ್ಟೆಂಬರ್‌ 22ರಿಂದ ಸೆಪ್ಟೆಂಬರ್‌ 29ರವರೆಗೆ, ವಿಮಾನ ನಿಲ್ದಾಣದ ಟರ್ಮಿನಲ್‌ 1 ಮತ್ತು ಟರ್ಮಿನಲ್‌ 2 ಎರಡರಲ್ಲೂ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿತ್ತು. ಟರ್ಮಿನಲ್‌ಗಳಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಮೂಲಕ ಈ ಆಚರಣೆಯು ಅಪ್ಪಟ ಕರ್ನಾಟಕದ ಕಲೆ, ಸಂಸ್ಕೃತಿಗಳನ್ನು ಸಾರುವ ವೇದಿಕೆಯಾಯಿತು.

Related Articles

Related image1
ದಸರಾ ಜಂಬೂ ಸವಾರಿ ವೈಭವಕ್ಕೆ ಮಳೆಯ ಕರಿಛಾಯೆ! ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
Related image2
ಮಲೆನಾಡು ಬಯಲುಸೀಮೆ ಆಗುತ್ತಾ? ದಸರಾ ಸಂಭ್ರಮದ ಹೊತ್ತಲ್ಲಿ ಕೋಡಿಶ್ರೀ ಶಾಕಿಂಗ್ ಭವಿಷ್ಯ!
312
ಉಚಿತ ಪ್ರವೇಶ
Image Credit : @blrairport_kn X Account

ಉಚಿತ ಪ್ರವೇಶ

ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ನಾಗರಿಕರಿಗೂ ಮುಕ್ತ ಮತ್ತು ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರು ನಗರದಿಂದ ಆಗಮಿಸಿದ್ದ ನಾಗರಿಕರು ವಿಮಾನ ಟಿಕೆಟ್‌ ಇಲ್ಲದೆಯೂ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಸ್ವಾದಿಸಿ ಸಂಭ್ರಮಿಸಿದರು.

412
ಕಲಾ ಪ್ರದರ್ಶನಗಳ ಮೂಲಕ ಭವ್ಯ ಪ್ರಾರಂಭ
Image Credit : @blrairport_kn X Account

ಕಲಾ ಪ್ರದರ್ಶನಗಳ ಮೂಲಕ ಭವ್ಯ ಪ್ರಾರಂಭ

ನಾಡಹಬ್ಬ ದಸರಾ ಆಚರಣೆಯು ಕಣ್ಮನ ಸೆಳೆಯುವ ಜಾನಪದ ಕಲಾ ಪ್ರದರ್ಶನಗಳ ಮೂಲಕ ಭವ್ಯವಾಗಿ ಪ್ರಾರಂಭಗೊಂಡಿತು. ವೀರಾವೇಶಭರಿತ ಡೊಳ್ಳು ಕುಣಿತದ ಲಯಬದ್ಧ ಸದ್ದು ಮತ್ತು ಕಲಾವಿದರ ಶಕ್ತಿಪೂರ್ಣ ಹೆಜ್ಜೆಗಳು ವೀಕ್ಷಕರನ್ನು ರೋಮಾಂಚನಗೊಳಿಸಿದವು.

512
ಬೃಹತ್ ಗಾತ್ರದ ಗಾರುಡಿ ಗೊಂಬೆ
Image Credit : @blrairport_kn X Account

ಬೃಹತ್ ಗಾತ್ರದ ಗಾರುಡಿ ಗೊಂಬೆ

ಬೃಹತ್ ಗಾತ್ರದ ಗಾರುಡಿ ಗೊಂಬೆಗಳ ನೃತ್ಯವು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಗಮನ ಸೆಳೆಯಿತು. ಇದರ ಜೊತೆಗೆ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಬೇಡರ ನೃತ್ಯ ಮತ್ತು ತಮಟೆ ವಾದ್ಯಗಳ ಪ್ರದರ್ಶನಗಳು

612
ಕೆಐಎಎಫ್‌ ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ
Image Credit : @blrairport_kn X Account

ಕೆಐಎಎಫ್‌ ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ

ಅಷ್ಟೇ ಅಲ್ಲದೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಕೆಐಎಎಫ್) ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ, ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದಿಂದ ದಸರಾ ವೈಭವ ಪ್ರದರ್ಶನಗಳು ದಸರಾ ಸಂಭ್ರಮವನ್ನು ಹೆಚ್ಚಿಸಿದವು.

712
 ನವರಾತ್ರಿಯ ಕಥಾ ವರ್ಣನೆ
Image Credit : @blrairport_kn X Account

ನವರಾತ್ರಿಯ ಕಥಾ ವರ್ಣನೆ

ಶಾಸ್ತ್ರೀಯ ಸಂಯೋಜನೆಯ ಮೂಲಕ ನವರಾತ್ರಿಯ ಕಥಾ ವರ್ಣನೆ, ಸುಗಮ ಸಂಗೀತ, ಕಂಸವಧೆ ಯಕ್ಷಗಾನ ಪ್ರಸಂಗ, ವಾದ್ಯಗೋಷ್ಠಿ ಹಾಗೂ ಭರತನಾಟ್ಯ ನೃತ್ಯರೂಪಕದಂತಹ ವೈವಿಧ್ಯಮಯ ಕಾರ್ಯಕ್ರಮಗಳು ವೀಕ್ಷಕರಿಗೆ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ತಲುಪಿಸಲು ಯಶಸ್ವಿಯಾದವು.

812
ಸಾಂಪ್ರದಾಯಿಕ ತೊಗಲು ಗೊಂಬೆಯಾಟ
Image Credit : @blrairport_kn X Account

ಸಾಂಪ್ರದಾಯಿಕ ತೊಗಲು ಗೊಂಬೆಯಾಟ

ಟರ್ಮಿನಲ್ 2 ರ ಕಲಾ ಕಾರ್ಯಕ್ರಮದ ಭಾಗವಾಗಿರುವ ಹೂವಿನಹಳ್ಳಿ ಗ್ರಾಮದ 9ನೇ ತಲೆಮಾರಿನ ಗೊಂಬೆಯಾಟದ ಕಲಾವಿದರಾದ ಶ್ರೀ ಗುಂಡುರಾಜು ಅವರು ಸಾಂಪ್ರದಾಯಿಕ ತೊಗಲು ಗೊಂಬೆಯಾಟವನ್ನು ಪ್ರಸ್ತುತಪಡಿಸುವ ಮೂಲಕ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಅಮರ ಕಥೆಗಳು ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಪ್ರತಿಯೊಂದು ಪ್ರದರ್ಶನಗಳು ಮನರಂಜನೆಯ ಜೊತೆಗೆ, ನಮ್ಮ ನಾಡಿನ ಸಾಂಸ್ಕೃತಿಕ ಬೇರುಗಳ ಪರಿಚಯವನ್ನೂ ಮಾಡಿಕೊಟ್ಟವು.

912
ಕಲೆ ಮತ್ತು ಸಂಸ್ಕೃತಿಯ ಹೆಬ್ಬಾಗಿಲು
Image Credit : @blrairport_kn X Account

ಕಲೆ ಮತ್ತು ಸಂಸ್ಕೃತಿಯ ಹೆಬ್ಬಾಗಿಲು

ಈ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಪ್ರಯಾಣದ ಕೇಂದ್ರವಾಗಷ್ಟೇ ಆಗಿರದೇ, ಕಲೆ ಮತ್ತು ಸಂಸ್ಕೃತಿಯ ಹೆಬ್ಬಾಗಿಲು ಎಂಬುದನ್ನು ನಿರೂಪಿಸಿತು. ಜೊತೆಗೆ ಅಂತಾರಾಷ್ಟ್ರೀಯ ಸಂಜ್ಞಾ ಭಾಷಾ ದಿನ ಮತ್ತು ಶ್ರವಣದೋಷವುಳ್ಳವರ ವಾರಗಳಿಗೆ ದಸರಾ ಶುಭಕೋರುವ ಮೂಲಕ ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿಬಿಂಬಿಸಿತು.

1012
ಪ್ರಯಾಣಿಕರಿಗೆ ಸಾಂಸ್ಕೃತಿಕ ಸ್ವಾಗತ ಮತ್ತು ಅನುಭವ
Image Credit : @blrairport_kn X Account

ಪ್ರಯಾಣಿಕರಿಗೆ ಸಾಂಸ್ಕೃತಿಕ ಸ್ವಾಗತ ಮತ್ತು ಅನುಭವ

ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ಗಳಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತ ಸ್ವಾಗತ ನೀಡಿದವು.

1112
ಸಾಂಸ್ಕೃತಿಕ ರಾಯಭಾರಿ
Image Credit : @blrairport_kn X Account

ಸಾಂಸ್ಕೃತಿಕ ರಾಯಭಾರಿ

ಈ ಮೂಲಕ, ವಿಮಾನ ನಿಲ್ದಾಣವು ಕೇವಲ ಪ್ರಯಾಣದ ಕೇಂದ್ರವಾಗದೆ, ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿತು. 

ಕನ್ನಡದ ಸಿರಿ ಜಗತ್ತಿನೆಲ್ಲೆಡೆ ಪಸರಿಸಲಿ! 

ವಿವಿಧ ರಾಜ್ಯ ಮತ್ತು ದೇಶಗಳ ಪ್ರಯಾಣಿಕರಿಂದ ಕನ್ನಡದಲ್ಲಿ ನಾಡಹಬ್ಬ ದಸರಾ ಶುಭಾಶಯ!

ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ‌ ಶುಭಾಶಯಗಳು! #ದಸರಾ#ನಾಡಹಬ್ಬದಸರಾ#ಕನ್ನಡ#ಕರ್ನಾಟಕ#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ#ಬೆಂಗಳೂರುವಿಮಾನನಿಲ್ದಾಣ#ನವರಾತ್ರಿ#ಕರ್ನಾಟಕ#ನಮ್ಮಕರ್ನಾಟಕ… pic.twitter.com/wmyEs2hM7F

— ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (@blrairport_kn) September 30, 2025

1212
ಕರ್ನಾಟಕದ ಸಂಸ್ಕೃತಿ
Image Credit : @blrairport_kn X Account

ಕರ್ನಾಟಕದ ಸಂಸ್ಕೃತಿ

ವಿವಿಧ ರಾಜ್ಯ ಮತ್ತು ದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಭ್ರಮದಲ್ಲಿ ಭಾಗಿಯಾಗಲು ಇದೊಂದು ವಿಶಿಷ್ಟ ಅವಕಾಶವಾಗಿತ್ತು. ಬಿಡುವಿಲ್ಲದ ಪ್ರಯಾಣದ ನಡುವೆ ಸಿಕ್ಕ ಈ ಹಬ್ಬದ ವಾತಾವರಣವು, ಪ್ರಯಾಣಿಕರಿಗೆ ಹೊಸ ಉತ್ಸಾಹವನ್ನು ತುಂಬಿತು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಬೆಂಗಳೂರು ವಿಮಾನ ನಿಲ್ದಾಣ
ದಸರಾ

Latest Videos
Recommended Stories
Recommended image1
ಸ್ನೇಹಮಯಿ ಕೃಷ್ಣ ಸಿಸಿಬಿಯಿಂದ ರಿಲೀಸ್; ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ, ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!
Recommended image2
ಬೆಂಗಳೂರು ಟೆಕ್ಕಿ ರಂಜಿತಾ ಹೋಮ್ ಸ್ಟೇಗೆ ಬಂದು ಹೆಣವಾದ ಕೇಸಿಗೆ ಟ್ವಿಸ್ಟ್; ಮಾಲೀಕನ ಮೇಲೆ ಎಫ್‌ಐಆರ್!
Recommended image3
ಶಾಸಕ ಬೈರತಿ ಬಸವರಾಜ್‌ಗೆ ಡಬಲ್ ಶಾಕ್; ಒಂದ್ಕಡೆ ಜೈಲುಪಾಲು, ಮತ್ತೊಂದ್ಕಡೆ ಮನೆ ಊಟದ ಆಸೆಯೂ ಮಣ್ಣುಪಾಲು!
Related Stories
Recommended image1
ದಸರಾ ಜಂಬೂ ಸವಾರಿ ವೈಭವಕ್ಕೆ ಮಳೆಯ ಕರಿಛಾಯೆ! ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
Recommended image2
ಮಲೆನಾಡು ಬಯಲುಸೀಮೆ ಆಗುತ್ತಾ? ದಸರಾ ಸಂಭ್ರಮದ ಹೊತ್ತಲ್ಲಿ ಕೋಡಿಶ್ರೀ ಶಾಕಿಂಗ್ ಭವಿಷ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved