- Home
- Karnataka Districts
- Bengaluru Urban
- ಮಾಡೆಲ್‌ಗಾಗಿ ಬಾಯ್‌ಫ್ರೆಂಡ್‌ಗಳ ಕಿತ್ತಾಟ, ಚಾಕು ಇರಿದ ಬಳಿಕ ಚಂದನ್‌ನನ್ನು ಕಾರಿನಿಂದ ತಳ್ಳಿದ್ದ ಆರೋಪಿ!
ಮಾಡೆಲ್‌ಗಾಗಿ ಬಾಯ್‌ಫ್ರೆಂಡ್‌ಗಳ ಕಿತ್ತಾಟ, ಚಾಕು ಇರಿದ ಬಳಿಕ ಚಂದನ್‌ನನ್ನು ಕಾರಿನಿಂದ ತಳ್ಳಿದ್ದ ಆರೋಪಿ!
ಬೆಂಗಳೂರಿನಲ್ಲಿ ಮಾಜಿ ಬಾಯ್‌ಫ್ರೆಂಡ್ ಯುವತಿಯ ಹೊಸ ಬಾಯ್‌ಫ್ರೆಂಡ್‌ಗೆ ಚಾಕು ಇರಿದ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಿಂದ ಹೊಸ ಬಾಯ್‌ಫ್ರೆಂಡ್‌ನನ್ನು ಹೊರಗೆ ತಳ್ಳಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾಜಿ ಬಾಯ್‌ಫ್ರೆಂಡ್ ಪ್ರೇಯಸಿಯ ಹೊಸ ಬಾಯ್‌ಫ್ರೆಂಡ್‌ಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಹೊಸ ಸಿಸಿಟಿವಿ ಫೂಟೇಜ್‌ಗಳು ಬಿತ್ತರವಾಗಿದೆ.
ಮಾಡೆಲ್‌ವೊಬ್ಬಳ ಹಳೇ ಬಾಯ್‌ಫ್ರೆಂಡ್ ಯತೀಶ್‌ನಿಂದ ಚಂದನ್ ಎನ್ನುವ ಹೊಸ ಬಾಯ್‌ಫ್ರೆಂಡ್ ಚಾಕು ಇರಿತಕ್ಕೆ ಒಳಗಾಗಿದ್ದ. ಯಶೀತ್ ಹಾಗೂ ಆತನ ಗ್ಯಾಂಗ್ ಚಂದನ್‌ಗೆ ಚಾಕು ಇರಿದಿದ್ದಲ್ಲದೆ, ಚಲಿಸುತ್ತಿರುವ ಕಾರ್‌ನಿಂದ ಆತನನ್ನು ಹೊರಗೆ ಎಸೆಯಲಾಗಿದೆ.
ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಬಳಿ ಕಳೆದ ಶುಕ್ರವಾರ ಈ ಘಟನೆ ನಡೆದಿತ್ತು. ಚಂದನ್ ಅದೇ ಏರಿಯಾದಿಂದ ಯುವತಿಯೊಬ್ಬಳನ್ನ ಪ್ರೀತಿ ಮಾಡ್ತಿದ್ದ. ಇನ್ನು ಮಾಡೆಲ್ ಆಗಿರುವ ಯುವತಿ ಕೂಡ ಚಂದನ್‌ನನ್ನ ಪ್ರೀತಿ ಮಾಡುತ್ತಿದ್ದಳು.
ಆದರೆ, ಚಂದನ್‌ನ ಪ್ರೀತಿಯ ಬಲೆಗೆ ಬೀಳುವ ಮುನ್ನ ಆಕೆ ಯತೀಶ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು ಈ ವಿಚಾರ ಯತೀಶ್‌ಗೆ ತಿಳಿದ ಬಳಿಕ ಚಂದನ್‌ನನ್ನು ಮಾತುಕತೆಗೆಂದು ಕರೆದು ಚಾಕು ಇರಿದಿದ್ದರು.
ಚಾಕು ಇರಿದ ಬಳಿಕ ಚಂದನ್ ನನ್ನ ಕಾರಿನಿಂದ ಆರೋಪಿಗಳು ಹೊರಗೆ ತಳ್ಳಿದ್ದಾರೆ. ನಡುರಸ್ತೆಯಲ್ಲಿ ಚಂದನನ್ನು ಯತೀಶ್ & ಗ್ಯಾಂಗ್ ಕಾರ್‌ನಿಂದ ತಳ್ಳಿದೆ. ವೈಯಾಲಿಕಾವಲ್ ರಸ್ತೆಯಲ್ಲಿ ಈ ವಿಕೃತಿ ಎಸೆಯಲಾಗಿದೆ.
ಕಾರಿನಿಂದ ತಳ್ಳಿದ ಬಳಿಕ ಚಂದನ್ ರಕ್ತದ ಮಡುವಿನಲ್ಲಿದ್ದ. ಸ್ವಲ್ಪ ದೂರ ನಡೆದುಕೊಂಡು ಹೋಗಿ ಸ್ನೇಹಿತರಿಗೆ ಕರೆ ಮಾಡಿದ್ದ. ಕಾರಿನಲ್ಲೇ ಚಾಕು ಇರಿದು ಚಂದನ್‌ನನ್ನು ಯತೀಶ್ & ಗ್ಯಾಂಗ್ ರಸ್ತೆಗೆ ಎಸೆದು ಹೋಗಿದ್ದರು.
ಕಾರಿನಲ್ಲಿ ಮುಂದೆ ಕೂತಿದ್ದ ಚಂದನ್ ಗೆ ಚಾಕು ಹಿಂದಿನಿಂದ ಚಾಕು ಇರಿಯಲಾಗಿತ್ತು. ಮದ್ಯಪಾನ ಮಾಡಿದ ಬಳಿಕ ಜಗಳವಾಡಿ ಈ ಕೃತ್ಯ ಎಸಗಿದ್ದರು. ಸದ್ಯ ಯತೀಶ್ & ಹರ್ಷ ಬಂಧಿಸಿ ಉಳಿದವರಿಗೆ ಹುಡುಕಾಟ ನಡೆಸಲಾಗಿದೆ.
ಒಂದೇ ಮಾಡೆಲ್ ನನ್ನ ಚಂದನ್ ಹಾಗೂ ಯತೀಶ್ ಲವ್ ಮಾಡುತ್ತಿದ್ದರು. ಯತೀಶ್ ಜೊತೆ ಬ್ರೇಕ್ ಅಪ್ ಆದ ನಂತರ ಮಾಡೆಲ್ ಚಂದನ್‌ನನ್ನು ಪ್ರೀತಿ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಬಾರಿನಲ್ಲಿ ಕುಡಿಸಿ ಚಂದನ್ ಗೆ ಚಾಕು ಇರಿಯಲಾಗಿತ್ತು.