- Home
- Astrology
- Pitru Paksha 2025: ಪಿತೃ ಪಕ್ಷದಲ್ಲಿ ಒಳ್ಳೆಯದು ಅಂತ ಈ ಕೆಲಸಗಳನ್ನು ಮಾತ್ರ ಮಾಡಿ, ಸಮಸ್ಯೆ ತಂದುಕೊಳ್ಳಬೇಡಿ!
Pitru Paksha 2025: ಪಿತೃ ಪಕ್ಷದಲ್ಲಿ ಒಳ್ಳೆಯದು ಅಂತ ಈ ಕೆಲಸಗಳನ್ನು ಮಾತ್ರ ಮಾಡಿ, ಸಮಸ್ಯೆ ತಂದುಕೊಳ್ಳಬೇಡಿ!
2025 ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 21ರವರೆಗೆ ಪಿತೃ ಪಕ್ಷ ( Pitru Paksha ) ನಡೆಯುವುದು. ಈ ಟೈಮ್‌ನಲ್ಲಿ ಕೆಲ ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಹಾಗಾದರೆ ಅವು ಯಾವುವು?

ಹೊಸ ಬಟ್ಟೆ ಖರೀದಿ ಮಾಡಬೇಡಿ, ವಾಹನವನ್ನು ಖರೀದಿ ಮಾಡಬೇಡಿ, ಆಭರಣಗಳನ್ನು ಕೂಡ ಖರೀದಿ ಮಾಡಬೇಡಿ ಎಂದು ಹೇಳುವುದುಂಟು.
ಗೃಹಪ್ರವೇಶ ಮಾಡಬೇಡಿ ಎನ್ನುತ್ತಾರೆ, ಹಾಗೆಯೇ ಒಳ್ಳೆಯ ಮುಹೂರ್ತ ಕೂಡ ಇರೋದಿಲ್ಲ ಬಿಡಿ. ಇನ್ನು ಭೂಮಿ ಖರೀದಿಸಬೇಡಿ, ಅಂತೆಯೇ ಮನೆ ಖರೀದಿಯೂ ಬೇಡ.
ಹುಟ್ಟುಹಬ್ಬ ಅಥವಾ ಇನ್ನಿತರ ಸಮಾರಂಭಗಳನ್ನು ಕೂಡ ಮಾಡಬೇಡಿ. ಕೂದಲು ಕಟ್ ಮಾಡಬಾರದು. ಅರಳಿ ಮರದ ಎಲೆಗಳನ್ನು ಕೀಳಬಾರದು. ಅಶುದ್ಧ ಆಹಾರ ಸೇವನೆ ಬೇಡ, ಪಿತೃಗಳನ್ನು ಮರಿಬೇಡಿ
ವೈಭವದ ಕಾರ್ಯಗಳನ್ನು ಮಾಡಬಾರದು, ಕಬ್ಬಿಣದ ಪಾತ್ರೆಗಳನ್ನು ಖರೀದಿಸಬೇಡಿ. ಹೊಸ ವಸ್ತುಗಳ ಖರೀದಿಯೂ ಒಳ್ಳೆಯದಲ್ಲ. ಅತಿಯಾದ ಆನಂದಪಡುವುದು ಬೇಡ. ವಿವಾದ, ಕಲಹಗಳನ್ನು ತಪ್ಪಿಸಿ
ಪಿತೃ ಪಕ್ಷ ಟೈಮ್‌ನಲ್ಲಿ ಪಿತೃಗಳು ನಮ್ಮ ಮನೆಗೆ ಬರುತ್ತಾರೆ, ಅವರಿಗೆ ಖುಷಿಯಾಗುವುದು ಅಥವಾ ಶಾಂತಿ ಸಿಗುವಂತೆ ನೋಡಿಕೊಳ್ಳಬೇಕು ಎನ್ನುವುದುಂಟು. ಹೀಗಾಗಿ ಈ ಸಮಯದಲ್ಲಿ ತಿಥಿ ಮುಂತಾದ ಕಾರ್ಯಗಳನ್ನು ಮಾಡಲಾಗುವುದು. ಪಿತೃಗಳ ಆತ್ಮಕ್ಕೆ ಶಾಂತಿ ಸಿಗದಿದ್ದರೆ ನಮ್ಮ ಮನೆಯಲ್ಲಿ ಶಾಂತಿ ಇರೋದಿಲ್ಲ, ಆರ್ಥಿಕ, ಸಂತಾನ ಅಭಿವೃದ್ಧಿ ಆಗೋದಿಲ್ಲ.
(Disclaimer: ಏಷಿಯಾನೆಟ್ ಸುವರ್ಣ ನ್ಯೂಸ್ ಎಂದಿಗೂ ಮೂಢನಂಬಿಕೆ ಅಥವಾ ಮೌಡ್ಯಗಳನ್ನು ಬೆಂಬಲಿಸೋದಿಲ್ಲ. ಈ ಮೇಲಿನ ಮಾಹಿತಿಯನ್ನು ಫಾಲೋ ಮಾಡಿ ಎಂದು ಒತ್ತಡ ಹೇರೋದಿಲ್ಲ )