Nose Prediction: ನಿಮ್ಮ ಮೂಗು ದೊಡ್ಡದಾಗಿದ್ಯಾ? ಹಾಗಿದ್ರೆ ನಿಮಗಿದೋ ಭರ್ಜರಿ ಮಾಲಾಮಾಲ್ ಸುದ್ದಿ
ಮುಖಕ್ಕಿಂತ ಮೂಗೇ ದೊಡ್ಡದು ಎಂದು ಯಾರಾದ್ರೂ ಹೇಳಿದ್ರೆ ನಿಮಗೆ ಬೇಜಾರು ಆಗಿದ್ಯಾ? ಹಾಗಿದ್ರೆ ಇದೀಗ ನಿಮಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಹೀಗೆ ಹೇಳುವವರೆಲ್ಲರೂ ಹೊಟ್ಟೆ ಉರಿದುಕೊಳ್ಳೋ ಸುದ್ದಿ ಇದು. ಏನದು ನೋಡಿ...

ಮೂಗಿನಲ್ಲಿ ಅಡಗಿದೆ ಹಣದ ಭವಿಷ್ಯ
ಜ್ಯೋತಿಷಶಾಸ್ತ್ರ, ಸಂಖ್ಯಾಶಾಸ್ತ್ರವನ್ನು (astrology) ನಂಬದವರೂ ಇದ್ದಾರೆ. ಅದೇ ರೀತಿ ನಮ್ಮ ಒಂದೊಂದು ಅಂಗಾಗಗಳೂ ನಮ್ಮ ಬಗ್ಗೆ ತಿಳಿಸುತ್ತವೆ. ಆ ವಿದ್ಯೆ ಕೂಡ ಕೆಲವರಿಗೆ ಕರಗತವಾಗಿದೆ. ಕೈ ನೋಡಿ ಭವಿಷ್ಯ ನುಡಿಯುವವರು ಹಲವರು ಇದ್ದಾರೆ. ಕೇವಲ ಕೈಗಳಲ್ಲಿ ಇರುವ ರೇಖೆಗಳನ್ನು ನೋಡಿ ಭವಿಷ್ಯ ನುಡಿಯುತ್ತಾರೆ. ಕೆಲವರು ಇದನ್ನು ದಂಧೆ ಮಾಡಿಕೊಂಡಿದ್ದು, ಸುಳ್ಳು ಜ್ಯೋತಿಷಿಗಳಾಗುತ್ತಿರುವುದು ನಿಜವಾದರೂ ನಿಜವಾಗಿಯೂ ಜ್ಯೋತಿಷ ಶಾಸ್ತ್ರವನ್ನು ಕಲಿತವರು ಭವಿಷ್ಯವನ್ನು ನುಡಿಯುವುದು ಇದೆ.
ಕೈ ಕಾಲು ನೋಡಿ ಭವಿಷ್ಯ
ಅದೇ ರೀತಿ, ನಮ್ಮ ಕಣ್ಣು, ಕೈ, ಕಾಲುಗಳನ್ನು ನೋಡಿಯೂ ಭವಿಷ್ಯ ಹೇಳುವವರು ಇದ್ದಾರೆ. ಕೇವಲ ಕಣ್ಣನ್ನೇ ನೋಡಿ ನಮಗೆ ಇರುವ ಕಾಯಿಲೆಗಳ ಬಗ್ಗೆ ಯಥಾವತ್ತಾಗಿ ತಿಳಿಸುವ ಜ್ಞಾನಿಗಳೂ ಇದ್ದಾರೆ. ನಮ್ಮ ಒಂದೊಂದು ಅಂಗಾಂಗಗಳೂ ನಮ್ಮ ಬದುಕಿನ ವಿಭಿನ್ನ ಕಾಲಘಟ್ಟವನ್ನು ತೋರಿಸುವುದೇ ಆಗಿದೆ.
Big Nose means Big Money
ಅದೇ ರೀತಿ ಇದೀಗ ದೊಡ್ಡ ಮೂಗಿನವರ ಬಗ್ಗೆ ಫೇಸ್ರೀಡರ್ ಆಗಿರುವಂಥ ಅನುರಾಧಾ ಅವರು ಹೇಳಿದ್ದಾರೆ. ಅಷ್ಟಕ್ಕೂ ಇಂಗ್ಲಿಷ್ನಲ್ಲಿಯೇ ಒಂದು ಗಾದೆ ಮಾತಿದೆ. ಅದು Big Nose means Big Money ಎನ್ನುವುದು. ಅರ್ಥಾತ್ ದೊಡ್ಡ ಮೂಗು ಇದ್ದವರಿಗೆ ದೊಡ್ಡ ಹಣ ಎನ್ನುವುದು.
ಸೆಲೆಬ್ರಿಟಿಗಳ ಉದಾಹರಣೆ
ಅದೇ ಮಾತನ್ನೀಗ ಇವರು ಹೇಳಿದ್ದಾರೆ. ಕೆಲವು ಸೆಲೆಬ್ರಿಟಿಗಳ ಉದಾಹರಣೆ ಕೊಟ್ಟಿರುವ ಅನುರಾಧಾ ಅವರು, ಮೂಗು ದೊಡ್ಡದಾಗಿದ್ದರೆ, ದೊಡ್ಡ ಪ್ರಮಾಣದಲ್ಲಿ ಹಣದ ಹರಿವು ಬರಲಿದೆ ಎಂದಿದ್ದಾರೆ. ಅವರು ಜೀವನದಲ್ಲಿ ತುಂಬಾ ಮೇಲೆ ಹೋಗಲಿದ್ದಾರೆ ಎಂದಿದ್ದಾರೆ.
ಎದ್ದು ಕಾಣುವ ಮೂಗು
ಎಷ್ಟು ದೊಡ್ಡ ಮೂಗು ಎನ್ನುವ ಬಗ್ಗೆ ಸ್ಪಷ್ಟವಾಗಿ ಅವರು ಹೇಳಿಲ್ಲ. ಆದರೆ ಕೆಲವರ ಮುಖ ನೋಡಿದ ತಕ್ಷಣ ಅವರ ಮುಖದಲ್ಲಿ ಮೂಗೇ ಎದ್ದು ಕಾಣಿಸುತ್ತದೆ. ಮೂಗು ದೊಡ್ಡದಾಗಿ ಇದೆ ಎಂದು ನೋಡಿದಾಕ್ಷಣ ಎನ್ನಿಸುತ್ತದೆ. ಅಂಥವರು ಇನ್ನು ಸಕತ್ ಖುಷಿ ಪಡಬಹುದಾಗಿದೆ.
ಮುಖಕ್ಕಿಂತ ಮೂಗು ದೊಡ್ಡದು
ಎಷ್ಟೋ ಸಂದರ್ಭದಲ್ಲಿ ಮುಖಕ್ಕಿಂತ ಮೂಗೇ ದೊಡ್ಡದಿದೆ ಎಂದು ಕೆಲವರು ಹಂಗಿಸಿರಬಹುದು, ಈ ಮಾತು ಕೇಳಿ ಬೇಸರವೂ ಆಗಿರಬಹುದು. ಆದರೆ ಇದೀಗ ಖುಷಿಯ ಸುದ್ದಿ ನಿಮಗಾಗಿ ಬಂದಿದೆ. ಮೂಗು ದೊಡ್ಡದಿದ್ದರೆ, ದೊಡ್ಡ ಪ್ರಮಾಣದಲ್ಲಿ ಹಣ ನಿಮ್ಮ ಬಳಿ ಇರುತ್ತದೆ ಎಂದಿದ್ದಾರೆ ಅನುರಾಧಾ ಅವರು.
ಶಾರುಖ್, ಮುಖೇಶ್
ಇದಕ್ಕಾಗಿ ಅವರು ಶಾರುಖ್ ಖಾನ್ (Shah rukh khan), ಮುಖೇಶ್ ಅಂಬಾನಿ (Mukhesh Ambani) ಸೇರಿದಂತೆ ವಿಭಿನ್ನ ಕ್ಷೇತ್ರದ ಶ್ರೀಮಂತರ ಪಟ್ಟಿಯೂ ಗೂಗಲ್ನಲ್ಲಿ ಈ ಬಗ್ಗೆ ಸಿಗುತ್ತದೆ.
ತಮಾಷೆಯ ಕಮೆಂಟ್
ಇದಕ್ಕೆ ಕೆಲವರು ತಮಾಷೆಯ ಕಮೆಂಟ್ ಹಾಕಿದ್ದು, ಮತ್ತೆ ಕೆಲವರು ಇದು ಸರಿಯಲ್ಲ ಎಂದೂ ಹೇಳಿದ್ದಾರೆ. ದೊಡ್ಡ ಮೂಗು ಇರುವ ಭಿಕ್ಷುಕರನ್ನು ನಾನು ನೋಡಿದ್ದೇನೆ ಎಂದು ಕೆಲವರು ಹೇಳಿದರೆ, ನನ್ನ ಮೂಗು ದೊಡ್ಡದಾಗಿದ್ದರೂ ನನ್ನ ಬಳಿ ಹಣವಿಲ್ಲ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಎಲ್ಲಾ ಭಿಕ್ಷುಕರೂ ಬಡವರಲ್ಲ, ಲಕ್ಷಾಧಿಪತಿಗಳೂ ಇದ್ದಾರೆ ಎಂದು ಕೆಲವರು ಅದಕ್ಕೆ ರಿಪ್ಲೈ ಮಾಡಿದ್ದಾರೆ.