Hair Color Tips : ತಲೆ ಮೇಲೆ ಅಲ್ಲಲ್ಲಿ ಬಿಳಿ ಕೂದಲು ಕಾಣಿಸ್ತಿದ್ದಂತೆ ನಾವು ಹೇರ್ ಕಲರ್ ಮೊರೆ ಹೋಗ್ತೇವೆ. ಅನೇಕ ಸಿನಿಮಾ ನಟಿಯರು ಇದೇ ರೂಲ್ಸ್ ಫಾಲೋ ಮಾಡ್ತಾರೆ. ಆದ್ರೆ ಹಾಸ್ಯನಟಿ ಭಾರತಿ ಸಿಂಗ್ ಮಾತ್ರ ಕೆಮಿಕಲ್ ಮಿಶ್ರಿತ ಹೇರ್ ಕಲರ್ ಬಳಕೆ ಮಾಡುವ ಬದಲು ನೈಸರ್ಗಿಕ ಹೇರ್ ಡೈ ತಯಾರಿಸಿ ಬಳಸ್ತಾರೆ.
ಈಗಿನ ಲೈಫ್ಸ್ಟೈಲ್, ವೆದರ್ ಹಾಗೆ ಆಹಾರದಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗ್ತಿದೆ. ಇದು ಸೌಂದರ್ಯ, ಕೂದಲಿನ ಮೇಲೂ ಪರಿಣಾಮ ಬೀರ್ತಿದೆ. ಹಿಂದೆ 40 ವರ್ಷ ಆಗ್ತಿದ್ದಂತೆ ಗ್ರೇ ಹೇರ್ ಶುರು ಆಗ್ತಿತ್ತು. ಆದ್ರೀಗ ಚಿಕ್ಕ ಮಕ್ಕಳ ತಲೆಯಲ್ಲೂ ಬಿಳಿ ಕೂದಲು ಕಾಣಿಸ್ತಿದೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾದ್ರೆ ಮುಜುಗರ. ಇದು ನಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತೆ. ಸ್ನೇಹಿತರ ತಮಾಷೆಗೆ ನಾವು ವಸ್ತುವಾಗ್ತೇವೆ ಎನ್ನುವ ಭಯ ಮಕ್ಕಳನ್ನು ಕಾಡುತ್ತೆ. ಬಿಳಿ ಕೂದಲು ಮುಚ್ಚಿಡೋಕೆ ಹೇರ್ ಕಲರ್ (Hair color) ಬಳಕೆ ಶುರು ಮಾಡ್ತಾರೆ. ಹೇರ್ ಕಲರ್ಸ್ ಗೆ ಸಾಕಷ್ಟು ಕೆಮಿಕಲ್ ಮಿಕ್ಸ್ ಮಾಡೋದ್ರಿಂದ ಸೈಡ್ ಇಫೆಕ್ಟ್ ಜಾಸ್ತಿ. ಹೇರ್ ಫಾಲ್, ಹೊಟ್ಟು ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತೆ. ಮಾರ್ಕೆಟ್ ನಲ್ಲಿ ಸಿಗೋ ಹೇರ್ ಕಲರ್ ಗಿಂತ ಮನೆ ಮದ್ದು ಬೆಸ್ಟ್. ಇದ್ರಿಂದ ಅಡ್ಡಪರಿಣಾಮ ಏನಿರೋದಿಲ್ಲ.
ಭಾರತಿ ಸಿಂಗ್ (Bharti Singh) ಬಳಸುವ ಹೇರ್ ಡೈ (Hair Dye) : ಹಾಸ್ಯ ನಟಿ ಭಾರತಿ ಸಿಂಗ್ ಗೆ 41 ವರ್ಷ ವಯಸ್ಸು. ಅವ್ರು ಒಂದೇ ಒಂದು ಬಾರಿಯೂ ಹೇರ್ ಕಲರ್ ಬಳಕೆ ಮಾಡಿಲ್ಲ. ಮನೆ ಮದ್ದಿನಿಂದ್ಲೇ ಅವ್ರ ಕೂದಲನ್ನು ಕಪ್ಪಾಗಿಸಿಕೊಂಡಿದ್ದಾರೆ. ಮನೆಯಲ್ಲೇ ಹೇರ್ ಡೈ ಹೇಗೆ ತಯಾರಿಸೋದು ಎಂಬುದನ್ನು ಶೋ ಒಂದ್ರಲ್ಲಿ ಭಾರತಿ ಸಿಂಗ್ ಹೇಳಿದ್ದಾರೆ. ಭಾರತಿ ಸಿಂಗ್ ಪಂಜಾಬ್ ನಲ್ಲಿದ್ದಾಗ ಗೋರಂಟಿಯನ್ನು ತಮ್ಮ ಕೂದಲಿಗೆ ಬಳಕೆ ಮಾಡ್ತಿದ್ದರು. ಈಗ್ಲೂ ಅದೇ ವಿಧಾನವನ್ನು ಅವರು ಫಾಲೋ ಮಾಡ್ತಿದ್ದಾರೆ. ಕೂದಲು ದಟ್ಟವಾಗಿದ್ದು, ಹೊಟ್ಟಿನ ಸಮಸ್ಯೆ ಇಲ್ಲ ಅಂತಾರೆ ಭಾರತಿ.
Malaika Arora: ಕಣ್ಣು ಬಿಟ್ಟು ಎಲ್ಲಾ ಪಾರ್ಟ್ಗೂ ಸರ್ಜರಿ! ಬಾಲಿವುಡ್ ಬ್ಯೂಟಿಯ ಶಾಕಿಂಗ್ ವಿಡಿಯೋ ವೈರಲ್
ಮನೆಯಲ್ಲೇ ಹೇರ್ ಡೈ ಮಾಡ್ಕೊಳ್ಳೋಕೆ ಬೇಕಾದ ವಸ್ತುಗಳು : ಒಂದು ಕಬ್ಬಿಣದ ಪ್ಯಾನ್. ಗೋರಂಟಿ ಪುಡಿ. ಟೀ ಎಲೆ. ಮೊಟ್ಟೆಯ ಬಿಳಿ ಭಾಗ, ಅಲೋವೇರಾ.
ಹೇರ್ ಡೈ ಮಾಡುವ ವಿಧಾನ : ಮೊದಲು ಒಂದು ಕಬ್ಬಿಣದ ಪ್ಯಾನ್ ತೆಗೆದುಕೊಳ್ಳಿ. ಅದಕ್ಕೆ ಗೋರಂಟಿ ಪುಡಿ ಹಾಕಿ. ಟೀ ಎಲೆಯನ್ನು ಕುದಿಸಿ, ಅದ್ರ ನೀರನ್ನು ಸೋಸಿ ಅದನ್ನು ಗೋರಂಟಿಗೆ ಹಾಕಿ. ಈ ಮಿಶ್ರಣಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ. ಅಲೋವೇರಾ ಜೆಲ್ ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಹೇರ್ ಡೈ ಸಿದ್ಧ.
ಹೇರ್ ಡೈ ಬಳಕೆ ಹೇಗೆ? : ನೀವು ಮಾಡಿದ ಈ ಮಿಶ್ರಣವನ್ನು ತಕ್ಷಣ ಹಚ್ಚಿಕೊಳ್ಬಾರದು. ಇದನ್ನು ರಾತ್ರಿಯಿಡಿ ಕಬ್ಬಿಣದ ಪ್ಯಾನ್ ನಲ್ಲಿಯೇ ಇಡ್ಬೇಕು. ಮರುದಿನ ನೀವು ಅದನ್ನು ಕೂದಲಿಗೆ ಹಚ್ಚಿಕೊಳ್ಬೇಕು. ಸುಮಾರು 2 ಗಂಟೆಗಳ ಕಾಲ ಹಾಗೆ ಬಿಟ್ಟು ನಂತ್ರ ತಲೆ ಸ್ನಾನ ಮಾಡ್ಬೇಕು. ಇದು ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ. ರೇಷ್ಮೆಯಂತೆ ಕೂದಲು ಹೊಳಪು ಪಡೆಯಲು ನೆರವಾಗುತ್ತದೆ.
ಉಗುರು ಬಣ್ಣದ ಬಾಟಲ್, ಮಸ್ಕರಾ ಒಣಗಿ ಅಂಟಿಕೊಂಡಿದೆಯೇ?, ಐದೇ ನಿಮಿಷದಲ್ಲಿ ಹೊಸದರಂತೆ ಮಾಡಿ
ಭಾರತಿ ಸಿಂಗ್ ಹೇಳೋದೇನು? : ಭಾರತಿ ಸಿಂಗ್ ಪ್ರಕಾರ, ಇದು ನೈಸರ್ಗಿಕ ಹೇರ್ ಡೈ. ಇದ್ರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಭಾರತಿ ಸಿಂಗ್, ಸ್ಟ್ಯಾಂಡ್ ಅಪ್ ಹಾಸ್ಯನಟರಾಗಿ ಟಿವಿ ಜಗತ್ತಿಗೆ ಎಂಟ್ರಿ ಪಡೆದಿದ್ರು. ಕಪಿಲ್ ಶರ್ಮಾ ಶೋ ಮೂಲಕ ಭಾರತಿ ಶರ್ಮಾ ಹೆಚ್ಚು ಪ್ರಸಿದ್ಧಿಗೆ ಬಂದ್ರು. ಇದರ ನಂತ್ರ 2011 ರಲ್ಲಿ ಏಕ್ ನೂರ್ ಮೂಲಕ ಆಕ್ಟಿಂಗ್ ಗೆ ಪಾದಾರ್ಪಣೆ ಮಾಡಿದ ಭಾರತಿ, ಯಮ್ಲೆ ಜಟ್ ಯಮ್ಲೆ, ಖಿಲಾಡಿ 786 ಮತ್ತು ರಂಗನ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
