ಈಗ ನಿಮ್ಮ ಹೀರೋಯಿನ್ ಏನು ಮಾಡ್ತಾ ಇದ್ದಾರೆ ಅಂತಾ ಕೇಳಿದೆ.. ಅವರು ನ್ಯೂಟ್ರಲ್ ಆಗಿದ್ದಾರೆ ಅಂದರು. ಹಿಂದೂಗಳ ಬಗ್ಗೆ ಮಾತನಾಡಿದ್ರೆ ಮೆಚ್ಚುಗೆ ವ್ಯಕ್ತಪಡಿಸೋದು. ಅದೇ ಅವರು ಮಾಡುತ್ತಿರೋದು ಸುಳ್ಳು ಅಂತ ಗೊತ್ತಾದ ತಕ್ಷಣ ನ್ಯೂಟ್ರಲ್‌ ಆಗೋದು..' ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ. 

ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರು ಹೆಸರು ಹೇಳದೇ ಕನ್ನಡದ ನಟಿಯೊಬ್ಬರಿಗೆ ಕೌಂಟರ್ ಕೊಟ್ಟಿದ್ದಾರೆ. ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ 'ಮುಲ್ಲಾ ಒಬ್ಬ ವಿಡಿಯೋ ಮಾಡಿದಾಗ ಲೈಕ್ ಕೊಟ್ಟವರು ನಾವೇ. ನನಗೆ ಒಬ್ಬ ನಟ ಪೋನ್ ಮಾಡಿ ಹೇಳ್ತಾ ಇದ್ರು. ಒಬ್ಬ ಹೀರೋಯಿನ್ ಮುಲ್ಲಾ ವಿಡಿಯೋಗೆ ಲೈಕ್ ಕೊಟ್ಟು ಸ್ಟೇಟಸ್ ಹಾಕಿಕೊಳ್ತಿದ್ರು ಅಂದ್ರು. ಈಗ ಆ ಹೀರೋಯಿನ್ ನ್ಯೂಟ್ರಲ್ ಆಗಿದ್ದಾರೆ.

ಈಗ ನಿಮ್ಮ ಹೀರೋಯಿನ್ ಏನು ಮಾಡ್ತಾ ಇದ್ದಾರೆ ಅಂತಾ ಕೇಳಿದೆ.. ಅವರು ನ್ಯೂಟ್ರಲ್ ಆಗಿದ್ದಾರೆ ಅಂದರು. ಹಿಂದೂಗಳ ಬಗ್ಗೆ ಮಾತನಾಡಿದ್ರೆ ಮೆಚ್ಚುಗೆ ವ್ಯಕ್ತಪಡಿಸೋದು. ಅದೇ ಅವರು ಮಾಡುತ್ತಿರೋದು ಸುಳ್ಳು ಅಂತ ಗೊತ್ತಾದ ತಕ್ಷಣ ನ್ಯೂಟ್ರಲ್‌ ಆಗೋದು..' ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ.

ನಟಿ ರಮ್ಯಾ ಈ ರೀತಿ ಟ್ವೀಟ್ ಮಾಡಿ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದ್ದರು. ಆದರೆ ಷಡ್ಯಂತ್ರ ಬಯಲಾಗುತ್ತಿದ್ದಂತೆ ಯಾವುದೇ ಸ್ಪಷ್ಟನೆ ನೀಡದೆ, ಪ್ರತಿಕ್ರಿಯೆ ನೀಡಿದ ಮೌನಕ್ಕೆ ಜಾರಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರಾದ ಚಕ್ರವರ್ತಿ ಸೂಲಿಬೆಲೆ ಹೆಸರು ಹೇಳದೆ ಪರೋಕ್ಷವಾಗಿ ನಟಿ ರಮ್ಯಾ ವಿರುದ್ಧ ಆರೋಪ ಮಾಡಿದ್ದಾರೆ.

ಇನ್ನು, ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಖಂಡಿಸಿ ಬೃಹತ್ ಸಮಾವೇಶ ಇಂದು ಫ್ರೀಡಂ ಪಾರ್ಕ್‌ನಲ್ಲಿ (Freedom Park convention) ನಡೆಯುತ್ತಿರುವುದು ಬಹುತೇಕರಿಗೆ ಗೊತ್ತಿದೆ. ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಧರ್ಮಸಂರಕ್ಷಣಾ ಸಮಾವೇಶ ಆಯೋಜನೆ ಆಗಿದೆ. ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಹೂಡಿರುವ ಎಡಪಂಥೀಯರು, ಹಿಂದೂ ಧರ್ಮದ ವಿರೋಧಿಗಳ ವಿರುದ್ದ ಸಮಾವೇಶ ನಡೆಯುತ್ತಿದೆ. ಇಂದು ಫ್ರೀಡಂ ಪಾರ್ಕ್‌ನಲ್ಲಿ ಆಯೋಜನೆಗೊಂಡಿರುವ ಬೃಹತ್ ಸಮಾವೇಶ ಇದಾಗಿದೆ.

ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿರುವ ಬೃಹತ್ ಸಮಾವೇಶ. 'ಅಂದು ತಿರುಪತಿ, ಶಬರಿಮಲೆ, ಈಶಾ ಫೌಂಡೇಶನ್, ಇಂದು ಧರ್ಮಸ್ಥಳ' ಎಂಬ ಘೋಷಣೆ ಅಲ್ಲಿ ಮೊಳಗಲಿದೆ. ಹಿಂದೂ ದೇವಾಲಯಗಳ ಹೆಸರು ಕೆಡಿಸುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸಮಾವೇಶದಲ್ಲಿ ಚರ್ಚೆ-ಮಾತುಕತೆಗಳು ಆಗಲಿವೆ. ಈ ಸಮಾವೇಶದಲ್ಲಿ ವಚನಾನಂದ ಶ್ರೀ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಿಂದೂಪರ ಸಂಘಟನೆಗಳ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.