ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20, 2024ರಂದು ವಯೋಸಹಜವಾದ ಅನಾರೋಗ್ಯ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ. 86 ವರ್ಷ ವಯಸ್ಸಾಗಿತ್ತು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಅಮ್ಮನ (Saroja Sanjeev) ಹುಟ್ಟು ಹಬ್ಬದ ನೆನಪಿಗೆ "ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ" ಎಂಬ ಸಾಲಿನೊಂದಿಗೆ ಹಸಿರು ಕ್ರಾಂತಿಗೆ ಚಾಲನೆ ನೀಡಿದ್ದಾರೆ. "ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ" ಎಂದು ಹೇಳಿದ್ದಾರೆ. ಅಲ್ಲಿಗೆ ನಟ ಕಿಚ್ಚ ಸುದೀಪ್ ತಮ್ಮ ಮಾತೃಭಕ್ತಿಯನ್ನು ಈ ಮೂಲಕ ಜೀವಂತವಾಗಿ ಇಡಲು ನಿರ್ಧರಿಸಿದ್ದಾರೆ ಎನ್ನಬಹುದು.

ಹೌದು, ನಟ ಕಿಚ್ಚ ಸುದೀಪ್ ಅವರು ತಮ್ಮ ಪೋಷಕರನ್ನು ತುಂಬಾನೇ ಇಷ್ಟಪಡುತ್ತಾರೆ. ಅವರ ತಾಯಿ ಕಳೆದ ವರ್ಷನಿಧನರಾದಾಗ ಅದು ಹೊರಜಗತ್ತಿಗೆ ಸಾಕಷ್ಟು ಅನಾವರಣ ಆಗಿದೆ. ಅದಕ್ಕೂ ಮೊದಲು ಕೂಡ ನಟ ಕಿಚ್ಚ ಸುದೀಪ್ ಅವರು ತಮ್ಮ ಪೋಷಕರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ವೇದಿಕಗಳಲ್ಲಿ ಪೋಷಕರ ಮಹತ್ವ ಹಾಗೂ ಅವರನ್ನು ಚೆನ್ನಾಗಿ ಎಲ್ಲರೂ ನೋಡಿಕೊಳ್ಳಬೇಕು ಎಂದು ಅವರು ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು. ಆದರೆ ಅದನ್ನು ಕೇವಲ ಉಪದೇಶ ಅಂದುಕೊಳ್ಳಬೇಕಾಗಿಲ್ಲ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗುವಂತಾಗಿದೆ.

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20, 2024ರಂದು ವಯೋಸಹಜವಾದ ಅನಾರೋಗ್ಯ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಸರೋಜಾ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಜೆ.ಪಿ. ನಗರದಲ್ಲಿರುವ ಸುದೀಪ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿತ್ತು ಮತ್ತು ಅಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸರೋಜಾ ಸಂಜೀವ್ ಅವರ ಬಗ್ಗೆ ಇನ್ನಷ್ಟು ಮಾಹಿತಿ:

ಅವರು ಉಡುಪಿ ಮೂಲದವರಾಗಿದ್ದು, ತುಳು ಭಾಷೆಯನ್ನು ಮಾತನಾಡುತ್ತಿದ್ದರು. ನಟ ಕಿಚ್ಚ ಸುದೀಪ್ ಅವರ ಜೀವನದ ಯಶಸ್ಸಿನಲ್ಲಿ ತಾಯಿಯ ಪಾತ್ರ ದೊಡ್ಡದಿದೆ ಎಂದು ಸುದೀಪ್ ಆಗಾಗ ವೇದಿಕೆ ಮೇಲೆ ಹೇಳಿಕೊಳ್ಳುತ್ತಿದ್ದರು. ಅವರಿಗೆ ಸುದೀಪ್ ಸೇರಿದಂತೆ ಮೂವರು ಮಕ್ಕಳಿದ್ದರು. ಸಂಜೀವ್ ಅವರನ್ನು ಕೂಡ ನಟ ಸುದೀಪ್ ಹಾಗೂ ಅವರ ಕುಟುಂಬ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.