ಅದೃಷ್ಟ ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೂ ಟಾಯ್ಲೆಟ್ ಕ್ಲೀನರ್ ಕೈಹಿಡಿದು ಅದರಿಂದಲೇ ಸಾಕಷ್ಟು ಹಣ ಸಂಪಾದನೆ ಮಾಡಿ ಬಂಗಲೆ ಕಟ್ಟಿಸಿರುವ ಸ್ಟೋರಿ ಹೇಳಿದ್ದಾರೆ ಬಾಲಿವುಡ್ ನಟ ವಿಶಾಲ್ ಮಲ್ಹೋತ್ರಾ.
ಅದೃಷ್ಟ ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಸಿನಿಮಾದಲ್ಲಿ ಹೆಸರು ಮಾಡದೇ ಇರುವವರು, ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್ ಆದ ನಟ-ನಟಿಯರು ಬೇರೆಯದ್ದೇ ರೀತಿಯಲ್ಲಿ ಹೆಸರು ಮಾಡುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಕೆಲವರು ಅಡ್ಡದಾರಿ ಹಿಡಿದು ಹೆಸರು ಮಾಡಿದರೆ, ಮತ್ತೆ ಕೆಲವರು ಜಾಹೀರಾತುಗಳ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಜಾಹೀರಾತು ಯಾವುದಾದರೇನು, ಅದನ್ನು ಅವರು ನಿಜ ಜೀವನದಲ್ಲಿ ಬಳಸದೇ ಇದ್ದರೆ ಏನಂತೆ? ಜಾಹೀರಾತುಗಳು ವೀಕ್ಷಕರನ್ನು ಮರುಳು ಮಾಡುವುದು ಗೊತ್ತೇ ಇದೆ. ಅದರಲ್ಲಿಯೂ ನಟ-ನಟಿಯರು ಆ advertiseಗಳಲ್ಲಿ ಕಂಡರಂತೂ ಮುಗಿದೇ ಹೋಯ್ತು. ಅವರನ್ನೇ ತಮ್ಮ ದೇವರು ಎಂದು ನಂಬುವ ಅಭಿಮಾನಿಗಳಿಗೇನೂ ಕೊರತೆ ಇಲ್ಲವಲ್ಲ! ಇದೇ ಕಾರಣಕ್ಕೆ ವಿಷಯುಕ್ತ ಪಾನೀಯ, ರಾಸಾಯನಿಕಯುಕ್ತ ಉತ್ಪನ್ನ ಇವೆಲ್ಲವುಗಳಿಗೂ ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರೇ ರಾಯಭಾರಿಗಳು. ದಿನನಿತ್ಯದ ಜೀವನದಲ್ಲಿ ಆ ಸೆಲೆಬ್ರಿಟಿಗಳು ತಾವು ರಾಯಭಾರಿ ಆಗಿರುವ ಪ್ರಾಡಕ್ಟ್ಗಳನ್ನು ಬಳಸುವುದು ಪಕ್ಕಕ್ಕಿರಲಿ, ಜಾಹೀರಾತಿನ ಸಮಯದಲ್ಲಿಯೂ ಆ ಸೆಲೆಬ್ರಿಟಿಗಳು ಅದನ್ನು ಕುಡಿಯುತ್ತಾರೋ, ತಿನ್ನುತ್ತಾರೋ, ಬಳಸುತ್ತಾರೋ ಗೊತ್ತಿಲ್ಲ. ಆದರೆ ಜನರನ್ನು ಆ ಪ್ರಾಡಕ್ಟ್ನತ್ತ ಸೆಳೆಯಲು ಅಷ್ಟು ಸಾಕು, ಎಷ್ಟೆಂದರೂ ಅವರನ್ನು ನಂಬುವ ಅಭಿಮಾನಿಗಳಿಗೆ ಕೊರತೆ ಇಲ್ಲವಲ್ಲ!
ಆ ವಿಷಯ ಬಿಡಿ. ಇದೀಗ ಹೇಳ್ತಿರೋದು ಬಾಲಿವುಡ್ ನಟ ವಿಶಾಲ್ ಮಲ್ಹೋತ್ರಾ ಕುರಿತು. ಸಿನಿಮಾದಲ್ಲಿ ಇವರನ್ನು ನೋಡಿದವರು ತುಂಬಾ ಕಮ್ಮಿನೇ. ಆದರೆ, ಟಾಯ್ಲೆಟ್ ಕ್ಲೀನ್ ಮಾಡಲು ಪ್ರತಿದಿನ ಟಿವಿಯಲ್ಲಿ ಕಾಣಿಸಿಕೊಳ್ಳುವ ಕಾರಣ, ಇವರು ಬಹುತೇಕರಿಗೆ ಚಿರಪರಿಚಿತ. ಊಟದ ಸಮಯದಲ್ಲಿಯೇ ಟಾಯ್ಲೆಟ್ ಕ್ಲೀನ್ ಮಾಡಲು ಬರುತ್ತಾರೆ ಎಂದು ಅನೇಕ ಗೃಹಿಣಿಯರು ಅವಲತ್ತುಕೊಂಡಿದ್ದೂ ಇದೆ. ಆದರೂ ಊಟದ ಸಮಯದಲ್ಲಿಯೇ ವೀಕ್ಷಕರು ಅದರಲ್ಲಿಯೂ ಗೃಹಿಣಿಯರು ಟಿವಿ ನೋಡುವುದು ಹೆಚ್ಚು ಎನ್ನುವ ಕಾರಣಕ್ಕೆ ಅದೇ ಸಮಯದಲ್ಲಿ ಇಂಥ ಮನೆಗಳ ಅವಶ್ಯಕ ಪ್ರಾಡಕ್ಟ್ಗಳ ಜಾಹೀರಾತು ಹೆಚ್ಚಾಗಿರುತ್ತದೆ. ಅದೇ ರೀತಿ ಟಾಯ್ಲೆಟ್ ಕ್ಲೀನಿಂಗ್ ಅನ್ನು ಕೈಯಲ್ಲಿ ಹಿಡಿದು ಬಂದಿರುವ ವಿಶಾಲ್ ಅವರ ಅದೃಷ್ಟ ಖುಲಾಯಿಸಿದ್ದು, ಇದರಿಂದಲೇ ಇವರೀಗ ಭಾರಿ ಬಂಗಲೆ ಖರೀದಿಸಿದ್ದಾರಂತೆ!
ಕೈಹಿಡಿದ ಟಾಯ್ಲೆಟ್ ಕ್ಲೀನರ್!
ಈ ಕುರಿತು ಖುದ್ದು ನಟನೇ ರಿವೀಲ್ ಮಾಡಿದ್ದಾರೆ. "ಟಾಯ್ಲೆಟ್ ಕ್ಲೀನಿಂಗ್ ಜಾಹೀರಾತಿನಿಂದ ನಾನು ತುಂಬಾ ಸಂಪಾದಿಸಿದ್ದೇನೆ, ಬಾಂದ್ರಾದಂತಹ ಪ್ರದೇಶದಲ್ಲಿ ಒಳ್ಳೆಯ ಮನೆ ಖರೀದಿಸಿದೆ. ಆದರೆ ಇಂದಿಗೂ ನನ್ನ ಬಳಿ ಸ್ವಂತ ಕಾರು ಇಲ್ಲ. ನಾನು ಇನ್ನೂ ಉಬರ್‌ನಲ್ಲಿ ಪ್ರಯಾಣಿಸುತ್ತೇನೆ. ಮುಂಬೈನಂತಹ ನಗರದಲ್ಲಿ ಐಷಾರಾಮಿ ಕಾರು ಖರೀದಿಸುವುದು ಮೂರ್ಖತನ ಎಂದು ನಾನು ಭಾವಿಸುತ್ತೇನೆ. ನನ್ನ ಬಳಿ ಎಲೆಕ್ಟ್ರಿಕ್ ಹೀರೋ ಸೈಕಲ್ ಇದೆ, ಅದನ್ನು ಓಡಿಸಲು ಖುಷಿಯಾಗುತ್ತದೆ. ನನ್ನ ಹೆಂಡತಿಗೆ ಒಂದು ಕಾರು ಇದೆ, ಅದನ್ನು ಅವಳು ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಇತರ ವಿಷಯಗಳಿಗೆ ಬಳಸುತ್ತಾಳೆ. ನಾನು ಸರಳ ಜೀವನವನ್ನು ನಡೆಸುವುದರಲ್ಲಿ ನಂಬಿಕೆ ಇಡುತ್ತೇನೆ" ಎಂದು ಇದ್ದ ವಿಷಯವನ್ನು ಇದ್ದಹಾಗೆ ಹೇಳಿರುವ ನಟ, ಸಿನಿಮಾ ಕೈಹಿಡಿದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Bollywood Stars: ಮೊದಲನೆಯವರಿಗೆ ಡಿವೋರ್ಸ್ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!
ಇನ್ನು ನಟನ ಕುರಿತು ಹೇಳುವುದಾದರೆ, ವಿಶಾಲ್ (Vishal Malhotra) 30 ವರ್ಷಗಳಿಂದ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರು ನಾಯಕನಾಗಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. 2003 ರ 'ಇಷ್ಕ್ ವಿಷ್ಕ್' ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರಕ್ಕಾಗಿ ಅವರು ಸಾರ್ವಜನಿಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದರು. ಆದರೆ ಇದು ಅವರನ್ನು ಮಾದರಿಯಾಗಿ ಚಿತ್ರೀಕರಿಸಿತು. ಎಷ್ಟರಮಟ್ಟಿಗೆ ಎಂದರೆ ಅವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ, ಅವರು ಒಮ್ಮೆ ಅಂತಹ ಪಾತ್ರಗಳಿಂದ ದೂರ ಸರಿಯುವುದಾಗಿ ಪ್ರತಿಜ್ಞೆ ಮಾಡಿದರು. ಅವರು ಚಲನಚಿತ್ರ ನಿರ್ಮಾಪಕರನ್ನು ನಾಯಕನ ಸ್ನೇಹಿತನ ಬದಲಿಗೆ ಬೇರೆ ಯಾವುದಾದರೂ ಪಾತ್ರವನ್ನು ನೀಡುವಂತೆ ಕೇಳಿದರು. ಆದರೆ ಅವರಿಗೆ ಅವಕಾಶ ಸಿಗಲಿಲ್ಲ.
ಸಿಗದ ಅವಕಾಶ
ವಿಶಾಲ್ ಅವರೇ ಹೇಳಿದಂತೆ, "ನಾನು ಬೇರೆ ರೀತಿಯ ಪಾತ್ರ ಕೇಳಿದಾಗ, ಅದು ಆ ನಿರ್ಮಾಪಕನ ಅಹಂಕಾರಕ್ಕೆ ನೋವುಂಟು ಮಾಡಿತು. ಫಲಿತಾಂಶಗಳು ತುಂಬಾ ಕೆಟ್ಟದಾಗಿದ್ದವು, ಅದಕ್ಕೆ ನಾನು ಸಿದ್ಧನಾಗಿರಲಿಲ್ಲ. ಅಂತಹ ಪ್ರಭಾವಿ ವ್ಯಕ್ತಿ ನಿಮ್ಮ ಸಾಮರ್ಥ್ಯವನ್ನು ತಿರಸ್ಕರಿಸಿದಾಗ, ನಿಮ್ಮ ವೃತ್ತಿಜೀವನ ಕೊನೆಗೊಳ್ಳುತ್ತದೆ. ನನಗೆ ಎರಡು ವರ್ಷಗಳ ಕಾಲ ಯಾವುದೇ ಕೆಲಸ ಸಿಗಲಿಲ್ಲ. ನನಗೆ ಇದರ ಬಗ್ಗೆ ತುಂಬಾ ಭಯವಾಯಿತು.ಅಂತಹ ಸಮಯದಲ್ಲಿ, ಟಾಯ್ಲೆಟ್ ಕ್ಲೀನಿಂಗ್ ಜಾಹೀರಾತು ಸಿಕ್ಕಿತು. ಆರಂಭದಲ್ಲಿ, ಇದರ ಬಗ್ಗೆ ಹಿಂಜರಿದೆ. ಟಾಯ್ಲೆಟ್ ಕ್ಲೀನರ್ ಬ್ರ್ಯಾಂಡ್ನಿಂದ ನನ್ನ ಇಮೇಜ್ ಹಾಳಾಗಬಹುದು ಎನ್ನಿಸಿತು. ಆದರೆ ಇದು ಅನಿವಾರ್ಯವಾಯಿತು. ಅದೇ ನನ್ನ ಕೈ ಹಿಡಿಯಿತು. ಇದಕ್ಕಿಂತಲೂ ಮೊದಲು, ಜನರು ನನ್ನನ್ನು ಮ್ಯಾಂಬೊ, ವೆಟಾಲ್ ಅಥವಾ ಜಾನ್ ಹೆಸರಿನಿಂದ ತಿಳಿದಿದ್ದರು. ಆದರೆ toilet cleaner ಜಾಹೀರಾತಿನ ನಂತರ, ನನ್ನ ನಿಜವಾದ ಹೆಸರಿನಿಂದ ಅಂದರೆ ವಿಶಾಲ್‌ನಿಂದ ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ನನ್ನ ಹೆಸರನ್ನು ಗುರುತಿಸಲು ಮಾತ್ರ ನಾನು ಈ ಕೆಲಸವನ್ನು ಮಾಡಿದ್ದೇನೆ ಎನ್ನುತ್ತಾರೆ ನಟ.
ಇನ್ನು ನಟ, ‘ಕಾನ್ಸ್‌ಟೇಬಲ್ ಘೋರ್ಪಡೆ’, ‘ಮೀಠಾ ಕಟ್ಟಾ ಪ್ಯಾರ್ ಹಮಾರಾ’ ಮತ್ತು ‘ಬಂದಾ ಯೇ ಬಿಂದಾಸ್ ಹೈ’ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ‘ದಿ ವಿಶಾಲ್ ಅವರ್’ ಎಂಬ ತಮ್ಮದೇ ಆದ ಪಾಡ್‌ಕ್ಯಾಸ್ಟ್ ನಡೆಸತ್ತಾರೆ.
