ನಟಿ ಸೌಂದರ್ಯ ಕನ್ನಡತಿಯಾದರೂ ಸಿನಿಮಾರಂಗದಲ್ಲಿ ಮಿಂಚಿದ್ದು ತೆಲುಗಿನಲ್ಲಿ. ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಆಂಧ್ರದಲ್ಲಿ ಮನೆಮಾತಾಗಿದ್ದರು. ಇಡೀ ಆಂಧ್ರದ ಮನೆಮನೆಗಳಲ್ಲಿ ನಟಿ ಸೌಂದರ್ಯ ಫೋಟೋಗಳು ಇದ್ದವು. ನಟಿ ಬೆಂಗಳೂರಿನ ಜಿಕೆವಿಕೆಯಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಅಸುನೀಗಿದರು.

ನಟಿ ಸೌಂದರ್ಯ (Soundarya) ಅವರ ಕೊನೇ ಕ್ಷಣಗಳನ್ನು ಯಾರೂ ಕೂಡ ಇಂದಿಗೂ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಅವರ ಜೊತೆಯಲ್ಲೇ ಅವರ ಪ್ರೀತಿಯ ಸಹೋದರ ಅಮರನಾಥ್ ಕೂಡ ತಂಗಿಯ ಜೊತೆಯಲ್ಲೇ ಪ್ರಾಣ ಬಿಟ್ಟಿದ್ದರು. ಇತ್ತೀಚೆಗೆ ನಟಿ ಸೌಂದರ್ಯ ಅತ್ತಿಗೆ, ಅಂದರೆ ಅಮರನಾಥ್ ಹೆಂಡತಿ ಒಂದು ಸಂಗತಿಯನ್ನು ಹೊರಜಗತ್ತಿಗೆ ಹೇಳಿದ್ದಾರೆ. ಅದನ್ನು ಕೇಳಿದರೆ ಅಚ್ಚರಿ ಎನ್ನಿಸುತ್ತದೆ. ಅದೇನು ಎಂದರೆ, ಮನೆಯಿಂದ ಅಂದು ಹೊರಹೋಗುವ ಮುನ್ನ ನಟ ಸೌಂದರ್ಯ ಮಾಡಿದ್ದರು ಆ ಒಂದು ಕೆಲಸ!

ಹೌದು, ನಟಿ ಸೌಂದರ್ಯ ಅವರು ಕನ್ನಡತಿಯಾದರೂ ಸಿನಿಮಾರಂಗದಲ್ಲಿ ಮಿಂಚಿದ್ದು ತೆಲುಗಿನಲ್ಲಿ. ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಆಂಧ್ರ ಪ್ರದೇಶದಲ್ಲಿ ಮನೆಮಾತಾಗಿದ್ದರು. ಇಡೀ ಆಂಧ್ರದ ಮನೆಮನೆಗಳಲ್ಲಿ ನಟಿ ಸೌಂದರ್ಯ ಫೋಟೋಗಳು ಇದ್ದವು. ಅಂಥ ನಟಿ ಅಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಅಸುನೀಗಿದರು. ಅಂದು ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ನಟಿ ಸೌಂದರ್ಯ ದುರ್ಮರಣ ಕಂಡರು.

ಆದರೆ, ನಟಿ ಸೌಂದರ್ಯ ಅವರು ಅಂದು ಎಂದಿನಂತೆ ಇರಲಿಲ್ಲ ಎನ್ನುತ್ತಾರೆ ಅವರ ಅತ್ತಿಗೆ. ಅಂದು ಯಾಕೋ ನಟಿ ಸೌಂದರ್ಯ ಅವರ ಮುಖದಲ್ಲಿ ಅದೇನೋ ಆತಂಕ ಮನೆಮಾಡಿತ್ತು. ಆದರೆ, ಬಾಯಿಬಿಟ್ಟು ಆಕೆ ಏನನ್ನೂ ಹೇಳಿರಲಿಲ್ಲ. ಆದರೆ, ಯಾವತ್ತೂ ತನ್ನ ಅಣ್ಣನ ಜೊತೆ ಹೋಗುವಾಗ ತುಂಬಾನೇ ಖುಷಿಖುಷಿಯಾಗಿ ಸಂಭ್ರಮದಿಂದ ಹೋಗುತ್ತಿದ್ದ ಸೌಂದರ್ಯ ಅವರು, ಅಂದು ಮಾತ್ರ ಯಾಕೋ ಸೈಲೆಂಟ್ ಆಗಿದ್ದರು.

ನಟಿ ಸೌಂದರ್ಯ ಅವರಿಗೆ ಬಹುಶಃ ಹೊರಜಗತ್ತಿಗೆ ಹೇಳುವಷ್ಟು ಸಾವಿನ ಸೂಚನೆ ಸಿಕ್ಕಿಲ್ಲವಾದರೂ ಒಳಮನಸ್ಸಿಗೆ ಗೊತ್ತಾಗಿತ್ತಾ? ಬಹುಶಃ 'ಹೌದು' ಎನ್ನಲೇಬೇಕು. ಏಕೆಂದರೆ, ಯಾವತ್ತೂ ಕೂಡ ಹೊರಗೆ ಹೋಗುವಾಗ ನಟಿ ಸೌಂದರ್ಯ ಅವರು ಕುಂಕುಮವನ್ನು ಕೇಳಿ ಪಡೆದಿರಲಿಲ್ಲವಂತೆ. ಆದರೆ, ಆವತ್ತು ಸಾಯುವ ದಿನ, ಮನೆಯಿಂದ ಹೊರಟವರು ವಾಪಸ್ ಬಂದು ಅತ್ತಿಗೆಯನ್ನು ತಬ್ಬಿಕೊಂಡರಂತೆ. ಜೊತೆಗೆ, ಸ್ವಲ್ಪ ಕುಂಕುಮ ಕೊಡು ಎಂದು ಕೇಳಿ ಪಡೆದುಕೊಂಡು ಹಣೆಗೆ ಹಚ್ಚಿಕೊಂಡು ಮನೆಯಿಂದ ಹೊರಟಿದ್ದರಂತೆ.

ಸೌಂದರ್ಯ ಅತ್ತಿಗೆ ಹೇಳುವಂತೆ, ಯಾವತ್ತೂ ಆಕೆ ಹಾಗೆ ಕುಂಕುಮ ಕೇಳಿ ಪಡೆದವಳೇ ಅಲ್ಲ. ಅದರಲ್ಲೂ ಒಮ್ಮೆ ಹೋಗಿ ಮತ್ತೆ ಬಂದು ಏನನ್ನೂ ಕೇಳಿದ್ದು ಇಲ್ಲವೇ ಇಲ್ಲ. ನಂಗೆ ಆಗ ಸ್ವಲ್ಪ ಅಚ್ಚರಿಯಾದರೂ ಯಾವುದೇ ಮುನ್ಸೂಚನೆ ಅನ್ನಿಸಿರಲಿಲ್ಲ. ಆದರೆ, ಅಂದು ಆಕೆಯ ಸಾವಿನ ಬಳಿಕ ನನಗೆ ಅದರಲ್ಲೇನೋ ವಿಶೇಷತೆ ಇತ್ತು, ಆಕೆಗೆ ಮರಣದ ಸೂಚನೆ ಸಿಕ್ಕಿತ್ತು ಎನ್ನಿಸಿದೆ. ಆದರೆ, ಆಕೆ ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲವೇನೋ!

ಒಟ್ಟಿನಲ್ಲಿ, ನಟಿ ಸೌಂದರ್ಯ ಅವರು 17 ಏಪ್ರಿಲ್ 2004ರಂದು ಇಹಲೋಕ ತ್ಯಜಿಸಿಬಿಟ್ಟರು. ಅಚ್ಚರಿ ಎಂಬಂತೆ, ಬದುಕಿದ್ದಾಗ ಮಾದರಿ ಅಣ್ಣ-ತಂಗಿ ಎಂಬಂತಿದ್ದ ಸೌಂದರ್ಯ ಹಾಗೂ ಅಮರ್ ಅವರಿಬ್ಬರೂ ಸಾವಿನಲ್ಲೂ ಕೂಡ ಜೊತೆಯಾಗಿಯೇ ಹೋದರು. ಅಷ್ಟೊಂದು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಸಾಕಷ್ಟು ಆಸ್ತಿ, ಸಾಧನೆ, ಪ್ರಸಿದ್ಧಿ ಗಳಿಸಿದ್ದ ನಟಿ ಸೌಂದರ್ಯ ಅವರು ಹೆಲಿಕಾಪ್ಟರ್ ದುರಂತದಲ್ಲಿ ಸುಟ್ಟುಹೋದರು. ಆದರೆ, ಅವರನ್ನು ಸಿನಿಮಾಪ್ರೇಮಿಗಳು ಎಂದೂ ಮರೆಯಲಾಗದು!