ಈ ಕಹಿ ಘಟನೆ ಬಳಿಕ ನಟ ವಿಜಯ್ ರಾಘವೇಂದ್ರ ಅವರು ಸಾಕಷ್ಟು ನೊಂದಿದ್ದಾರೆ. ಅವರು ತಮ್ಮ ಮಗನ ಆರೈಕೆಯಲ್ಲಿ ಸುಖ-ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ ಎನ್ನಬಹುದು. ಆದರೆ, ಇವರಂತೆ ಇನ್ನೊಂದು ಕುಟುಂಬ ಕೂಡ ಬಿರುಗಾಳಿ..
'ಚಿನ್ನಾರಿ ಮುತ್ತ' ಖ್ಯಾತಿಯ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಇತ್ತೀಚೆಗೆ ಆಗಬಾರದ ವಿಷಯಕ್ಕೆ ಸುದ್ದಿ ಆಗುತ್ತಿದ್ದಾರೆ. ಅವರು ಸಿನಿಮಾ ನಟರಾಗಿ ಒಂದು ಕಾಲದಲ್ಲಿ ಮಿಂಚಿದ್ದು, ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಪಡೆದು ಹೆಸರು ಮಾಡಿದ್ದು ಒಂದು ಅಮೋಘ ಸಾಧನೆ. ಆದರೆ, ವೈಯಕ್ತಿಕ ಜೀವನದಲ್ಲಿ ನಡೆದ ಆ ದುರಂತ ಅವರ ಜೀವನವನ್ನು ನೋವಿನ ಕಡಲಲ್ಲಿ ಮುಳುಗಿಸುತ್ತಿದೆ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಅವರ ಪತ್ನಿ ಸ್ಪಂದನಾ ಅವರು ಅಕಾಲಿಕ ಮರಣ ಹೊಂದಿದ್ದಾರೆ.
ಈ ಕಹಿ ಘಟನೆ ಬಳಿಕ ನಟ ವಿಜಯ್ ರಾಘವೇಂದ್ರ ಅವರು ಸಾಕಷ್ಟು ನೊಂದಿದ್ದಾರೆ. ಅವರು ತಮ್ಮ ಮಗನ ಆರೈಕೆಯಲ್ಲಿ ಸುಖ-ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ ಎನ್ನಬಹುದು. ಆದರೆ, ಇವರಂತೆ ಇನ್ನೊಂದು ಕುಟುಂಬ ಕೂಡ ಬಿರುಗಾಳಿ, ದುರಂತ ಅನುಭವಿಸಿದೆ. ಅದು ಎಲ್ಲರಿಗೂ ತಿಳಿದಿರುವಂತೆ, ಮೇಘನಾ ಸರ್ಜಾ (ಮೇಘನಾ ರಾಜ್ ಸರ್ಜಾ) ಕುಟುಂಬ. ಹೌದು, ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಆ ಕುಟುಂಬವನ್ನು ಸಹ ದುಃಖಕ್ಕೆ ದೂಡಿದೆ.
ಆದರೆ, ಜನರು ಈಗ ಅವರಿಬ್ಬರ ಕುಟುಂಬವನ್ನು, ಅಂದರೆ.. ಮೇಘನಾ ಸರ್ಜಾ (Meghana Raj Sarja) ಹಾಗೂ ವಿಜಯ್ ರಾಘವೇಂದ್ರ ಅವರಿಬ್ಬರೂ ಮದುವೆ ಮಾಡಿಕೊಂಡು ಅವರಿಬ್ಬರ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಕೊಡಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿ ಆಗಿದೆ. ಅನೇಕರು ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಸರ್ಜಾ ಪರಸ್ಪರ ಒಪ್ಪಿ ಮದುವೆ ಆದರೆ ಒಳ್ಳೆಯದು ಎನ್ನುತ್ತಿದ್ದಾರೆ.
ಅವರ ಪ್ರಕಾರ, ಹಾಗೆ ಮಾಡಿದರೆ, ಆಗ ಅಪ್ಪನ ಪ್ರೀತಿಯಿಂದ ವಂಚಿತರಾಗಿರುವ ಮೇಘನಾ-ಚಿರು ಮಗನಿಗೆ ಅಪ್ಪನ ಪ್ರೀತಿ ಹಾಗೂ ಅಮ್ಮ ಸ್ಪಂದನಾ ಪ್ರೀತಿಯಿಂದ ವಂಚಿತರಾಗಿರುವ ವಿಜಯ್ ರಾಘವಂದ್ರ-ಸ್ಪಂದನಾ ಮಗನಿಗೆ ಅಮ್ಮನ ಪ್ರೀತಿ ಸಿಗುತ್ತದೆ ಎಂದೆಲ್ಲಾ ಕನಸು ಕಟ್ಟಿಕೊಂಡು, ಅದನ್ನು ಸಲಹೆ ರೂಪದಲ್ಲಿ, ಕೆಲವೊಮ್ಮೆ ಒತ್ತಾಯದ ರೂಪದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ವಿಜಯ್ ರಾಘವೇಂದ್ರ ಹಾಗೂ ಮೇಘನಾ ಅವರಿಗೆ ಕೊಡತ್ತಲೇ ಇರುತ್ತಾರೆ. ಅದರಿಂದ, ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಮೇಘನಾ ಈ ಇಬ್ಬರೂ ಮುಜುಗರ ಹಾಗು ನೋವು ಅನುಭವಿಸುವಂತಾಗಿದೆ.
ಈ ಬಗ್ಗೆ ಇಲ್ಲಿ ನಟ ವಿಜಯ್ ರಾಘವೇಂದ್ರ ಮಾತನ್ನಾಡಿದ್ದಾರೆ. 'ನಾನು ಇತ್ತೀಚೆಗೆ ಕೂಡ ಹೇಳಿದ್ದೆ, ಈವಾಗ್ಲೂ ಅದನ್ನೇ ಹೇಳ್ತೀನಿ.. ಯಾರಾದ್ರೂ ಆ ತರ ವಿಷ್ಯ ಹೇಳಿದಾಗ ಬಹುಶಃ ಅವ್ರು ಆ ಥರ ಕಾಳಜಿಯಿಂದಾನೇ ಹೇಳಿರಬಹುದು. ಪಾಪ, ಮುಂದಕ್ಕೆ ಹೇಗೆ? ಮಗನಿಗೆ ಅಥವಾ ಇವ್ರಿಗೆ ಒಂದು ಆಸರೆ ಆಗ್ಬೇಕಲ್ವಾ ಅನ್ನೋ ಉದ್ದೇಶ ಇರುತ್ತೆ ಕೆಲವರಿಗೆ. ಆದ್ರೆ ಇನ್ನೂ ಕೆಲವರು ಏನ್ ಮಾಡ್ತಾರೆ ಅಂದ್ರೆ, ನನ್ನ ವಿಷ್ಯ ಅವ್ರ ಸ್ವಂತ ಆಸ್ತಿ ಅನ್ನೋ ತರ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತಾಡೋದಾಗ್ಲಿ, ಸಲಹೆ ನೀಡೋದಾಗ್ಲೀ ಮಾಡ್ತಾರೆ.
ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಂತಸದ ಸುದ್ದಿ. ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದಾರೆ ವಿಜಯ್ ರಾಘವೇಂದ್ರ.. ಕುಟುಂಬದಲ್ಲಿ ಸಂತಸ.. ಅಪ್ಪ-ಅಮ್ಮ ಸಂತಸ.. ಯಾರು ಹೇಳಿದ್ರು ನಿಮ್ಗೆ ಇವೆಲ್ಲಾ ಅಂತ ಕೇಳ್ತೀನಿ ನಾನು.. ಮನೆಲ್ಲಿ ಅಪ್ಪ-ಅಮ್ಮ, ನಾನು ಎಲ್ಲಾ ಈ ಬಗ್ಗೆ ನಕ್ಕೊಂಡು ಮಾತಾಡ್ತಾ ಇರ್ತೀವಿ.. ಆದ್ರೆ, ಯಾವಾಗ್ಲೋ ಒಂದೊಂದು ಸಾರಿ ನಂಗೆ ಸಿಟ್ಟು ಯಾವಾಗ ಬರುತ್ತೆ ಅಂದ್ರೆ.. ಅದ್ರಲ್ಲಿ ನನ್ ಬಗ್ಗೆ ಮಾತ್ರ ಮಾತಾಡ್ತಿಲ್ಲ..
ನನ್ನ ಕುಟುಂಬ ಇದೆ.. ಅವ್ರು ಯಾರ ಹೆಸರು ಹೇಳ್ತಾರೋ ಆ ಇನ್ನೊಂದು ಕುಟುಂಬ ಇದೆ.. ನನ್ನ ಮಗ ಇದಾನೆ, ನನ್ನ ತಂದೆ-ತಾಯಿ ಇದಾರೆ ನಮ್ ಜೊತೆ.. ಈ ಎಲ್ಲಾ ಜನ್ರ ಮನಸ್ಸಿಗೆ ನೋವು ತರುವ, ದುಃಖವನ್ನು ತರುವಂಥ ಪರಿಣಾಮ ಬೀರುತ್ತೆ.. ಹೀಗಾಗಿ ದಯವಿಟ್ಟು ಈ ರೀತಿ ಮಾತಾಡಬೇಡಿ, ಈ ರೀತಿ ಪೋಸ್ಟ್ ಮಾಡ್ಬೇಡಿ...' ಅಂದಿದಾರೆ ನಟ ವಿಜಯ್ ರಾಘವೇಂದ್ರ.
