ಅಚ್ಯುತ್ ಪೋತ್‌ದಾರ್ ಅವರು ಆಮೀರ್ ಖಾನ್ ನಟನೆಯ 3 ಈಡಿಯಟ್ಸ್ ಸಿನಿಮಾದ ಪಾತ್ರದಮೂಲಕ ಮನೆಮಾತಾಗಿದ್ದರು. ಅಷ್ಟೇ ಅಲ್ಲ ಅವರು 'ಅರ್ಧ ಸತ್ಯ' ಹಾಗೂ 'ಯೇ ದಿಲ್ಲಗಿ' ಸಿನಿಮಾಗಳಲ್ಲಿ ಕೂಡ ನೆನಪಿನಲ್ಲಿ ಉಳಿಯುವಂಥ ಪಾತ್ರಗಳನ್ನು ಮಾಡಿದ್ದಾರೆ. ವಯೋಸಹಜ ಮರಣ ಹೊಂದಿರುವ ನಟ ಅಚ್ಯುತ್ ಪೋತ್‌ದಾರ್..

ಬಾಲಿವುಡ್ ಆಮೀರ್‌ ಖಾನ್ ನಟನೆಯ '3 ಈಡಿಯಟ್ಸ್' ಸೂಪರ್ ಹಿಟ್ ಸಿನಿಮಾದ ನಟ ಅಚ್ಯುತ್ ಪೋತ್‌ದಾರ್ (Achyut Potdar) ಅವರು ನಿಧನರಾಗಿದ್ದಾರೆ. ತಮ್ಮ 91ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅಚ್ಯುತ್ ಪೋತ್‌ದಾರ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ಬಳಲುತ್ತಿದ್ದ ಅಚ್ಯುತ್ ಪೋತ್‌ದಾರ್ ಅವರು ಥಾಣೆಯ ಜ್ಯೂಪಿಟರ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಇಂದು, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಅಚ್ಯುತ್ ಪೋತ್‌ದಾರ್ ಅವರು ಆಮೀರ್ ಖಾನ್ ನಟನೆಯ 3 ಈಡಿಯಟ್ಸ್ ಸಿನಿಮಾದ ಪಾತ್ರದಮೂಲಕ ಮನೆಮಾತಾಗಿದ್ದರು. ಅಷ್ಟೇ ಅಲ್ಲ ಅವರು 'ಅರ್ಧ ಸತ್ಯ' ಹಾಗೂ 'ಯೇ ದಿಲ್ಲಗಿ' ಸಿನಿಮಾಗಳಲ್ಲಿ ಕೂಡ ನೆನಪಿನಲ್ಲಿ ಉಳಿಯುವಂಥ ಪಾತ್ರಗಳನ್ನು ಮಾಡಿದ್ದಾರೆ. ವಯೋಸಹಜ ಮರಣ ಹೊಂದಿರುವ ನಟ ಅಚ್ಯುತ್ ಪೋತ್‌ದಾರ್ ಅವರ ಸಾವಿಗೆ ಅವರ ಸ್ನೇಹಿತರ ಬಳಗ, ಚಿತ್ರರಂಗದ ಕಲಾವಿದರೂ ಸೇರಿದಂತೆ ಬಹಳಷ್ಟು ಮಂದಿ ಕಂಬನಿ ಮಿಡಿದಿದ್ದಾರೆ. ಜೊತೆಗೆ, ಅವರ ಆತ್ಕಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.

ಅಮೀರ್ ಖಾನ್, ಮಾಧವನ್ ಹಾಗೂ ಶರ್ಮನ್ ಜೋಶಿ ಅಭಿನಯದ ‘3 ಈಡಿಯಟ್ಸ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಜೊತೆಗೆ, ಆ ವರ್ಷದ (2009) ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಇಂದಿಗೂ ಕೂಡ ಈ ಚಿತ್ರವನ್ನು ಟೈಂ ಸಿಕ್ಕಾಗ ಮತ್ತೆ ಮತ್ತೆ ನೆನಪಿಸಿಕೊಂಡು ನೋಡುವವರೂ ಇದ್ದಾರೆ. ಇದೀಗ, ಈ ಚಿತ್ರದಲ್ಲಿ ಗಮನಾರ್ಹವಾಗಿ ನಟಿಸಿದ್ದ ನಟರೊಬ್ಬರನ್ನು ಚಿತ್ರರಂಗ ಹಾಗೂ ಚಿತ್ರಪ್ರೇಮಿಗಳು ಕಳೆದುಕೊಂಡಂತಾಗಿದೆ.