ಧರ್ಮಸ್ಥಳ ಪ್ರಕರಣ, ವರ್ಷಗಳ ಹಿಂದೇ ತಿಮರೋಡಿ ಭೇಟಿಯಾಗಿದ್ದ ಚಿನ್ನಯ್ಯ, ವಿಡಿಯೋ ಬಹಿರಂಗ, ಮಹೇಶ್ ಶೆಟ್ಟಿ ತಿಮರೋಡಿ ವಿಡಿಯೋ ರಿಲೀಸ್ ಮಾಡಿದ್ದು, ಧರ್ಮಸ್ಥಳ ವಿರುದ್ದ ಚಿನ್ನಯ್ಯ ಮಾಡುತ್ತಿರುವ ಗಂಭೀರ ಆರೋಪಗಳು ಈ ವಿಡಿಯೋದಲ್ಲಿದೆ.
ಧರ್ಮಸ್ಥಳ (ಸೆ.19) ಧರ್ಮಸ್ಥಳ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಹಂತದ ಅಬ್ಬರ, ಬಂಧನಗಳ ಬಳಿಕ ಇದೀಗ ಮತ್ತೊಂದು ಸುತ್ತಿನ ಉತ್ಖನನ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಸೌಜನ್ಯ ಪರ ಹಾಗೂ ಧರ್ಮಸ್ಥಳ ವಿರುದ್ದ ಹೋರಾಟ ನಡೆಸುತ್ತಿರುವ ಬುರುಡೆ ಗ್ಯಾಂಗ್‌ನ ಪ್ರಮುಖ ಮಹೇಶ್ ಶೆಟ್ಟಿ ತಿಮರೋಡಿ ಇದೀಗ ವಿಡಿಯೋ ಒಂದು ಬಹಿರಂಗ ಮಾಡಿದ್ದಾರೆ. ಈ ಮೂಲಕ ಧರ್ಮಸ್ಥಳ ವಿರುದ್ದ ಯಾವುದೇ ಷಡ್ಯಂತ್ರ ಮಾಡಿಲ್ಲ, ಚಿನ್ನಯ್ಯ ತನ್ನ ಮನೆಗೆ ಬಂದು ಅಳಲು ತೋಡಿಕೊಂಡ ಬಳಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಮರೋಡಿ ವಿಡಿಯೋ ಬಿಡಿಗಡೆ ಮಾಡಿ ಹೇಳಿದ್ದಾರೆ.
ಕೆಲ ವರ್ಷದ ಹಿಂದಿನ ವಿಡಿಯೋ
ವರ್ಷಗಳ ಹಿಂದೆ ಚಿನ್ನಯ್ಯನೇ ತನ್ನ ಮನೆಗೆ ಆಗಮಿಸಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದಾನೆ. ಇದರಲ್ಲಿ ಯಾವುದೇ ಬೆದರಿಕೆ, ಷಡ್ಯಂತ್ರ ಇಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ. ವಿಡಿಯೋದಲ್ಲಿ ಚಿನ್ನಯ್ಯ ಹಾಗೂ ಆತನ ಪತ್ನಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯವಿದೆ. ಈ ಮಾತುಕತೆಯಲ್ಲಿ ಚಿನ್ನಯ್ಯ ಹಲವು ಗಂಭೀರ ಆರೋಪಗಳನ್ನು ಧರ್ಮಸ್ಥಳ ವಿರುದ್ಧ ಮಾಡಿದ್ದಾನೆ.
ಧರ್ಮಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯ: ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
ಪೋಸ್ಟ್‌ಮಾರ್ಟಂ ಇಲ್ಲ, ಪೊಲೀಸರು, ಇಲ್ಲ, ವೈದ್ಯರೂ ಇಲ್ಲ
ಶವಗಳನ್ನು ಹೂತು ಹಾಕಲು ಯಾರೂ ಬರುತ್ತಿರಲಿಲ್ಲ. ಪೊಲೀಸರು,ವೈದ್ಯರು, ಪೋಸ್ಟ್ ಮಾರ್ಟಂ ಯಾವುದೂ ಇಲ್ಲ. ನಾವೇ ಹೆಣಗಳ್ನು ಹೂತು ಹಾಕುತ್ತಿದ್ದೇವು. ಯಾವ ಕಾನೂನು ಪ್ರಕ್ರಿಯೆ ನಡೆದಿಲ್ಲ. ನಮಗೆ ಹಲವು ರೀತಿಯಿಂದ ಅನ್ಯಾಯ ಮಾಡಿದ್ದಾರೆ ಎಂದು ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ ಬಳಿ ಹೇಳಿಕೊಂಡಿರುವ ವಿಡಿಯೋ ಇದಾಗಿದೆ. ಈ ರೀತಿಯ ಸಾಕಷ್ಟು ಘಟನೆಗಳು ಇದೆ. ಎಲ್ಲವನ್ನೂ ಕಣ್ಣಾರೆ ನೋಡಿದ್ದೇನೆ ಎಂದು ತಿಮ್ಮಯ್ಯ ಹೇಳಿದ್ದಾರೆ. ನಮಗೆ ಮಾಡಿದ ಅನ್ಯಾಯ ದೇವರಿಗೆ ಗೊತ್ತು ಎಂದು ಚಿನ್ನಯ್ಯ ಹೇಳಿದ್ದಾರೆ.
2 ಕಟ್ಟು 500 ನೋಟಿನಲ್ಲಿ ನಮಗೆ ಪಾಲು ಮಾಡಿದರು
ಧರ್ಮಸ್ಥಳದವರ ಸೂಚನೆ ಮೇರೆಗೆ ಹಲವರಿಗೆ ಹಲ್ಲೆ ಮಾಡಿದ್ದೇನೆ. ಇದು ನನ್ನ ಕೆಲಸವಾಗಿರಲಿಲ್ಲ. ಆದರೆ ಅವರ ಸೂಚನೆಯಿಂದ ಮಾಡಿದ್ದೇನೆ. ನನಗೂ ಅನ್ಯಾಯ ಮಾಡಿದ್ದಾರೆ. 3.5 ಲಕ್ಷ ರೂಪಾಯಿ ನನಗೆ ಧರ್ಮಸ್ಥಳವರು ಕೊಡಬೇಕಿದೆ. ಸೌಜನ್ಯ ಪ್ರಕರಣ ಬಳಿಕ ನಮ್ಮನ್ನು ಕಳುಹಿಸಲು 6 ಕಟ್ಟು 500 ರೂಪಾಯಿ ನೋಟು ತಂದಿದ್ದರು. ಇದರಲ್ಲಿ 2 ಕಟ್ಟು ನನಗೆ, ಪತ್ನಿ, ಭಾವ ಸೇರಿದಂತೆ ಇತರರಿಗೆ ನೀಡಿ ನಮ್ಮನ್ನು ಕಳುಹಿಸಿದರು ಎಂದು ಚಿನ್ನಯ್ಯ ತಿಮರೋಡಿ ಬಳಿ ಹೇಳಿಕೊಂಡಿದ್ದಾನೆ.
ಬೆಚ್ಚಿ ಬೀಳಿಸುವ ವಿಚಾರಗಳು
ಚಿನ್ನಯ್ಯ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಭೇಟಿಯ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಈ ಕುರಿತು ತಿಮರೋಡಿ ಬರೆದುಕೊಂಡಿದ್ದಾರೆ. ವರುಷಗಳ ಹಿಂದೆ ಚಿನ್ನಯ್ಯ ಮತ್ತು ಆತನ ಹೆಂಡತಿ ತಾವಗಿಯೇ ಮನೆಗೆ ಬಂದು ಅಲ್ಲಿ ಆದ ಅನ್ಯಾಯದ ಬಗ್ಗೆ ಹೇಳಿಕೊಂಡರು ಯಾವ ಷಡ್ಯಂತರವು ಇಲ್ಲ ಯಾರ ಬೆದರಿಕೆಯು ಇಲ್ಲ ಆತನೇ ಬಿಚ್ಚಿಟ್ಟ ಬೆಚ್ಚಿ ಬೀಳುವ ವಿಚಾರಗಳು ತಾಳ್ಮೆಯಿಂದ ಕಾದು ನೋಡಿ ನೀವೇ ನಿರ್ಧಾರ ಮಾಡಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಬರೆದುಕೊಂಡಿದ್ದಾರೆ.
ಬಂಗ್ಲೆಗುಡ್ಡೆಯ 7 ಸ್ಥಳಗಳಲ್ಲಿ 7 ಅಸ್ಥಿಪಂಜರ ಪತ್ತೆ ಮಾಡಿದ ಎಸ್‌ಐಟಿ!
