ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ ಸ್ವಾಮೀಜಿ ಸಾವನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ.
ಕೊಪ್ಪಳ (ಸೆ.08): ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ ಸ್ವಾಮೀಜಿ ಸಾವನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ನಿನ್ನೆ (ಭಾನುವಾರ) ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.
ಈ ವೇಳೆ ಮುಳುಗಿ ಚೀರಾಡುತ್ತಿದ್ದಾಗ, ಸ್ಥಳೀಯರು ರಕ್ಷಣೆ ಮಾಡಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ರು. ಆದರೆ ಅಲ್ಲಿ ವೈದ್ಯರಲ್ಲಿದ ಕಾರಣ, ಗಂಗಾವತಿ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ತಾಲೂಕು ಆಸ್ಪತ್ರೆಗೆ ಕರೆದುಕೊಂಡೋ ಹೋಗೋ ಮಾರ್ಗ ಮಧ್ಯೆಯೇ ಲಕ್ಷ್ಮಯ್ಯ ಸಾವನಪ್ಪಿದ್ದಾರೆ. ಇನ್ನು ಮೂರು ಜನ ಸ್ನೇಹಿತರೊಂದಿಗೆ ಕೊಪ್ಪಳ ಜಿಲ್ಲೆಗೆ ಲಕ್ಷ್ಮಯ್ಯ ಬಂದಿದ್ದರು. ನಿನ್ನೆ ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದ ಲಕ್ಷ್ಮಯ್ಯ ಸ್ವಾಮೀಜಿ, ಆ ಸಮಯದಲ್ಲೇ ರೀಲ್ಸ್ ಮಾಡಿದ್ದರು.
ಇಂದು ಆನೆಗೊಂದಿ ಬಳಿ ಇರೋ ತುಂಗಭದ್ರಾ ನದಿಗೆ ಸ್ನಾನಕ್ಕೆ ಹೋಗಿದ್ದ ಲಕ್ಷ್ಮಯ್ಯ ಸ್ವಾಮೀಜಿ, ದೆವ್ವ ಬಿಡಿಸಲು ಆನೆಗೊಂದಿಗೆ ಬಂದಿರೋ ಮಾಹಿತಿ ಸಿಕ್ಕಿದೆ. ಆದರೆ ಗೆಳೆಯರ ಮನೆಗೆ ಬಂದಿದ್ವೀ ಎಂದು ಸ್ವಾಮೀಜಿ ಸ್ನೇಹಿತರು ಹೇಳುತ್ತಿದ್ದಾರೆ. ಸದ್ಯ ನಾಳೆ ಇರ್ತಿನೋ ಇಲ್ವೋ ಎಂದು ರೀಲ್ಸ್ ಮಾಡಿದ ಸ್ವಾಮೀಜಿಯ ದುರಂತ ಅಂತ್ಯವಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗೊಬ್ಬರದ ಮೂಟೆ ಬಿದ್ದು ಯುವಕ ಸಾವು: ಗೊಬ್ಬರದ ಮೂಟೆ ಮೈ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಗುರುವಾರ ಸಮೀಪದ ಗೇರುಬೈಲು ಗ್ರಾಮದಲ್ಲಿ ನಡೆದಿದೆ. ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಪೂರ್ಣೇಶ್ (27) ಮೃತಪಟ್ಟ ಯುವಕ. ಈತ ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿಕೊಂಡಿದ್ದು, ಕೃಷಿ ಸಂಘದಿಂದ ಗೇರುಬೈಲಿನ ಖಾಸಗಿ ಎಸ್ಟೇಟ್‌ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾನೆ.
ಬಳಿಕ ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್‌ನಿಂದ ಅನ್‌ಲೋಡ್ ಮಾಡುವಾಗ ಆಕಸ್ಮಿಕ ಕಾಲು ಜಾರಿ ಕುಸಿದು ಬಿದ್ದಿದ್ದು, ಈ ವೇಳೆ ಆತ ಹೊತ್ತಿದ್ದ ಗೊಬ್ಬರದ ಮೂಟೆ ಆತನ ಕುತ್ತಿಗೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಸಹೋದರಿ ಪೂರ್ಣಿಮಾ ದೂರು ನೀಡಿದ್ದಾರೆ. ಪಿಎಸ್‌ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
