ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೂಪೇನಾ ಅಗ್ರಹಾರದಲ್ಲಿ ಪುರಾತನ ಮುನೇಶ್ವರ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಶಾಸಕ ಸತೀಶ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು(ಸೆ.11): ಪುರಾತನ ಮುನೇಶ್ವರ ಮೂರ್ತಿಗಳನ್ನ ಕಿಡಿಗೇಡಿಗಳು ಧ್ವಂಸ ಮಾಡಿದ ಅಘಾತಕಾರಿ ಘಟನೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೂಪೇನಾ ಅಗ್ರಹಾರದಲ್ಲಿ ನಡೆದಿದೆ.

ಈ ದೇವಸ್ಥಾನವು ಗ್ರಾಮದ ಆರಾಧ್ಯ ದೈವವಾಗಿದ್ದು, ಪ್ರತಿವರ್ಷ ವಿಜೃಂಭಣೆಯೊಂದಿಗೆ ಗ್ರಾಮಸ್ಥರು ಹಬ್ಬ ಆಚರಿಸುತ್ತಾರೆ ಗ್ರಾಮಸ್ಥರು. ಇಂದು ಬೆಳ್ಳಗ್ಗೆ ಎಂದಿನಂತೆ ಗುಡಿಸಲಿನ ಮಂಟಪಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಗ್ರಾಮಸ್ಥರು ಈ ದೃಶ್ಯವನ್ನು ಕಂಡು ಆಘಾತಕ್ಕೀಡಾಗಿದ್ದಾರೆ.

ಸರ್ಕಾರಿ ಭೂಮಿಯಲ್ಲಿರುವ ಈ ಪುರಾತನ ಮಂಟಪದಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ಪೂರ್ವಜರ ಪದ್ಧತಿಯಂತೆ ಇಂದು ಕೂಡ ಮೂರ್ತಿಗಳಿಗೆ ಆರತಿ ಬೆಳಗಲು ಬಂದಾಗ, ಮೂರ್ತಿಗಳು ದ್ವಂಸಗೊಂಡಿರುವದು ಬೆಳಕಿಗೆ ಬಂದಿದೆ. ಇದರಿಂದ ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಈ ಕೃತ್ಯದಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಘಟನೆಯ ಸ್ಥಳಕ್ಕೆ ತಕ್ಷಣ ಬೇಟಿ ನೀಡಿದ ಶಾಸಕ ಸತೀಶ್ ರೆಡ್ಡಿ

ಇದು ಅಮಾನುಷಕ ಕೃತ್ಯ. ಕಿಡಿಗೇಡಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣಕ್ರಮ ಜರುಗಿಸಬೇಕು. ಚರ್ಚಿಸಿ, ಸಿಸಿಟಿವಿ ದೃಶ್ಯಗಳು ಆಧಾರದ ಮೇಲೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದರು.

ಮತಾಂಧರ ಕೃತ್ಯವೋ, ಭೂಮಾಫಿಯಾವೋ?

ಪುರಾತನ ದೇಗುಲ ಧ್ವಂಸದ ಹಿಂದೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಕೃತ್ಯ ಎಸಗಿದವರು ಮತಾಂಧರೋ ಅಥವಾ ಭೂಮಾಫಿಯಾವೋ ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಮಂಟಪವು ಗ್ರಾಮದ ಐತಿಹಾಸಿಕ ಆರಾಧ್ಯ ಮಂದಿರವಾಗಿದ್ದು ಸದ್ಯ ಪೊಲೀಸ್ ತಂಡ ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದೆ.